ಬೆಂಗಳೂರು: ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯನವರ ಕನ್ನಡ ಪ್ರೇಮದ ಬಗ್ಗೆ ಪ್ರಶ್ನೆ ಮಾಡಿದೆ.
‘#ಕನ್ನಡವಿರೋಧಿಸಿದ್ದರಾಮಯ್ಯ ಅವರ ಕನ್ನಡ ಪ್ರೇಮ ರಾಜಕೀಯ ಪ್ರೇರಿತವಲ್ಲವೇ? ಬೇಡಿಕೆ ಇಲ್ಲದಿದ್ದರೂ ಕಲ್ಬುರ್ಗಿಯಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪನೆಗೆ ಹೊರಟಿದ್ದು ಏಕೆ? ಪೊಲೀಸರನ್ನು ಉರ್ದು ಕಲಿಯಲು ಒತ್ತಾಯಿಸುವಾಗ ನಿಮ್ಮ ಕನ್ನಡ ಪ್ರೇಮ ಎಲ್ಲಿತ್ತು? ಉರ್ದು ಭಾಷೆ ನಿಮ್ಮ ತವರೂರು ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ್ದೇ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ ಸೋನಿಯಾ ಗಾಂಧಿ ಗುಲಾಮ : ಸಿಟಿ ರವಿ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು
ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ?
ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿದ್ದು ತಪ್ಪು ಎನ್ನುವ ಕಾಂಗ್ರೆಸ್ಸಿಗರೇ,
√ ಪ್ರೆಸ್ ಮೀಟ್ ಮಾಡಿ ಪುರಾವೆಯಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಲ್ಲವೇ?
√ ಪುರಾವೆ ಇದ್ದಿದ್ದರೆ ತನಿಖಾಧಿಕಾರಿಗಳಿಗೆ ನೀಡದೆ ಇರುವುದು ತಪ್ಪಲ್ಲವೇ?
√ ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ?#CONgressPSIToolkit
— BJP Karnataka (@BJP4Karnataka) April 30, 2022
545 ಪಿಎಸ್ಐ ಹುದ್ದೆಗಳ ನೇಮಕದಲ್ಲಿ ಅಕ್ರಮ ನಡೆದಿರುವ ವಿಚಾರವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಿಡಿಕಾರಿದೆ. ಪಿಎಸ್ಐ ಹಗರದ ಆಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ನೀಡಿದ್ದು ತಪ್ಪು ಎನ್ನುವ ಕಾಂಗ್ರೆಸ್ಸಿಗರೇ, ಪ್ರೆಸ್ ಮೀಟ್ ಮಾಡಿ ಪುರಾವೆಯಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಲ್ಲವೇ? ಪುರಾವೆ ಇದ್ದಿದ್ದರೆ ತನಿಖಾಧಿಕಾರಿಗಳಿಗೆ ನೀಡದೆ ಇರುವುದು ತಪ್ಪಲ್ಲವೇ? ವಿಚಾರಣೆಗೆ ಗೈರು ಹಾಜರಾಗಿದ್ದು ತಪ್ಪಲ್ಲವೇ?’ ಎಂದು ಪ್ರಶ್ನಿಸಿದೆ.
ಪಿಎಸ್ಐ ನೇಮಕ ಹಗರಣದ ಆರೋಪಿ ದಿವ್ಯಾ ನಿವಾಸಕ್ಕೆ @DKShivakumar ಬಂದಿದ್ದರು ಎಂಬುದಕ್ಕೆ ಫೋಟೋ ಸಾಕ್ಷಿ ಇದೆ. ಆರೋಪಿಯು ಪರಿಚಿತರು ಎಂದು ಡಿಕೆಶಿ ಒಪ್ಪಿಕೊಂಡಿದ್ದಾರೆ.
ಇತರ ಆರೋಪಿಗಳಾದ ರುದ್ರಗೌಡ ಪಾಟೀಲ್, ಶಿವಾನಂದ ಪಾಟೀಲ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದಾರೆ.
ಹಾಗಾದರೆ ಈ ಹಗರಣದಲ್ಲಿ ಡಿಕೆಶಿ ಪಾಲೆಷ್ಟು?#CONgressPSIToolkit
— BJP Karnataka (@BJP4Karnataka) April 30, 2022
‘ಪಿಎಸ್ಐ ನೇಮಕ ಹಗರಣದ ಆರೋಪಿ ದಿವ್ಯಾ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಿದ್ದರು ಎಂಬುದಕ್ಕೆ ಫೋಟೋ ಸಾಕ್ಷಿ ಇದೆ. ಆರೋಪಿಯು ಪರಿಚಿತರು ಎಂದು ಡಿಕೆಶಿ ಒಪ್ಪಿಕೊಂಡಿದ್ದಾರೆ. ಇತರ ಆರೋಪಿಗಳಾದ ರುದ್ರಗೌಡ ಪಾಟೀಲ್, ಶಿವಾನಂದ ಪಾಟೀಲ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದಾರೆ. ಹಾಗಾದರೆ ಈ ಹಗರಣದಲ್ಲಿ ಡಿಕೆಶಿ ಪಾಲೆಷ್ಟು?’ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: 'ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.