CSK vs MI, IPL 2022: ಗೆದ್ದು ಬೀಗಿದ ಮುಂಬೈ, ಟೂರ್ನಿಯಿಂದ ಹೊರಬಿದ್ದ ಚೆನ್ನೈ

ಐಪಿಎಲ್ ಟೂರ್ನಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.

Written by - Puttaraj K Alur | Last Updated : May 12, 2022, 11:40 PM IST
  • ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
  • ಹೀನಾಯ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಎಂ.ಎಸ್.ಧೋನಿ ಪಡೆ
  • ಔನಪಚಾರಿಕ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪಡೆ
CSK vs MI, IPL 2022: ಗೆದ್ದು ಬೀಗಿದ ಮುಂಬೈ, ಟೂರ್ನಿಯಿಂದ ಹೊರಬಿದ್ದ ಚೆನ್ನೈ title=
ಚೆನ್ನೈ ವಿರುದ್ಧ ಮುಂಬೈಗೆ ಗೆಲುವು

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಟೂರ್ನಿಯ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದ ಸೋಲಿನೊಂದಿಗೆ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು.

ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ತಂಡವು ಮುಂಬೈ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. 16 ಓವರ್ ಗಳಲ್ಲಿಯೇ ಸರ್ವಪತನ ಕಂಡ 4 ಬಾರಿಯ ಚಾಂಪಿಯನ್ ಚೆನ್ನೈ ಕೇವಲ 97 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿ ಬೆನ್ನತ್ತಿದ ಮುಂಬೈ 14.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿ ಸಂಭ್ರಮಿಸಿತು.

ಇದನ್ನೂ ಓದಿ: RCB : ಮತ್ತೆ ಐಪಿಎಲ್‌ಗೆ ಎಂಟ್ರಿ ನೀಡಲಿದ್ದಾರೆ ಎಬಿ ಡಿವಿಲಿಯರ್ಸ್!

ಮುಂಬೈ ಮಾರಕ ಬೌಲಿಂಗ್

ಮೊದಲು ಬ್ಯಾಟಿಂಗ್ ಮಾಡಿ ಚೆನ್ನೈ ಪರ ನಾಯಕ ಎಂ.ಎಸ್.ಧೋನಿ(36) ಒಬ್ಬರೇ ಉತ್ತಮವಾಗಿ ಆಡಿದರು. ಇನ್ನುಳಿದಂತೆ ಡ್ವೇನ್ ಬ್ರಾವೋ(12), ಅಂಬಾಟಿ ರಾಯ್ಡು(10) ಮತ್ತು ಶಿವಂ ದುಬೆ(10) ರನ್ ಗಳಿಸಿದರು. ಮುಂಬೈನ ಮಾರಕ ಬೌಲಿಂಗ್ ದಾಳಿಗೆ ಚೆನ್ನೈನ ಯಾವೊಬ್ಬ ಆಟಗಾರನು ಹೆಚ್ಚುಹೊತ್ತು ಕ್ರೀಸ್ ನಲ್ಲಿ ನಿಂತು ಆಡಲಿಲ್ಲ. ಮುಂಬೈ ಪರ ಡೇನಿಯಲ್ ಸ್ಯಾಮ್ಸ್ 3, ರಿಲೆ ಮೆರೆಡಿತ್ 2 ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ರಮಣದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಗೆದ್ದು ಸೇಡು ತೀರಿಸಿಕೊಂಡ ಮುಂಬೈ

ಚೆನ್ನೈ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ ಮುಂಬೈ ಹಳೆ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿತು. ಮುಂಬೈ ಪರ ತಿಲಕ್ ವರ್ಮಾ(ಅಜೇಯ 34) ಉತ್ತಮವಾಗಿ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ರೋಹಿತ್ ಶರ್ಮಾ(18), ಹೃತಿಕ್ ಶೋಕೀನ್(18) ಮತ್ತು ಟಿಮ್ ಡೇವಿಡ್(ಅಜೇಯ 16) ರನ್ ಗಳಿಸಿದರು. ಚೆನ್ನೈ ಪರ ಮುಖೇಶ್ ಚೌಧರಿ 3 ವಿಕೆಟ್ ಪಡೆದು ಮಿಂಚಿದರೆ, ಸಿಮರ್ಜೀತ್ ಸಿಂಗ್ ಮತ್ತು ಮೋಯಿನ್ ಅಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಇದನ್ನೂ ಓದಿ: IPL 2022 : ಧೋನಿ ಕೈ ಎತ್ತುತ್ತಿದ್ದಂತೆಯೇ ಜಡೇಜಾಗೆ ಕೆಟ್ಟ ದಿನಗಳು ಶುರು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News