ಸೌತ್ ಸಿನಿ ಇಂಡಸ್ಟ್ರಿ ಎಂಟ್ರಿಗೆ ಆರತಿ ಬೇಡಿ ರೆಡಿ... ಯಾರು ಗೊತ್ತಾ ಈ ಬ್ಯೂಟಿ..?

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾದ ಆರತಿ ಬೇಡಿ ರಾತ್ರೋರಾತ್ರಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು‌. ಇಂಟರ್‌ನೆಟ್ ಜಗತ್ತಿನಲ್ಲಿ ಎಲ್ಲೆಡೆ ಆರತಿ ಬೇಡಿ ಪಟಗಳು ವೈರಲ್ ಆದ ನಂತರ ಈಕೆ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿಬಿಟ್ಟರು.

Written by - YASHODHA POOJARI | Edited by - Bhavishya Shetty | Last Updated : May 15, 2022, 11:34 AM IST
  • ಐಪಿಎಲ್‌ ಪಂದ್ಯದ ವೇಳೆ ಗಮನ ಸೆಳೆದಿದ್ದ ಆರತಿ
  • ಇಂಟರ್‌ನೆಟ್ ಜಗತ್ತಿನ ಸೆನ್ಸೇಷನಲ್ ಸ್ಟಾರ್
  • ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿದ್ದ ಆರತಿ ಬೇಡಿ
ಸೌತ್ ಸಿನಿ ಇಂಡಸ್ಟ್ರಿ ಎಂಟ್ರಿಗೆ ಆರತಿ ಬೇಡಿ ರೆಡಿ... ಯಾರು ಗೊತ್ತಾ ಈ ಬ್ಯೂಟಿ..? title=
Aarti Bedi

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈ ಸ್ಕೋರ್ ಪಂದ್ಯ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕುರಿಸಿತ್ತು. ಈ ಪಂದ್ಯದ ಮಧ್ಯೆ ಎಲ್ಲರ ಗಮನ ಸೆಳೆದಿದ್ದು ಆ ಬ್ಯೂಟಿ. ಅವ್ರೇ ಆರತಿ ಬೇಡಿ.

ಇದನ್ನು ಓದಿ:  Taj Mahal Plea: ಹೈಕೋರ್ಟ್‌ ಮೆಟ್ಟಿಲೇರಿದ ʼತಾಜ್‌ಮಹಲ್‌ ಇತಿಹಾಸʼ: ಏನಿದು ಪ್ರಕರಣ!

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾದ ಆರತಿ ಬೇಡಿ ರಾತ್ರೋರಾತ್ರಿ ಸೆನ್ಸೇಷನಲ್ ಸ್ಟಾರ್ ಆಗಿಬಿಟ್ಟರು‌. ಇಂಟರ್‌ನೆಟ್ ಜಗತ್ತಿನಲ್ಲಿ ಎಲ್ಲೆಡೆ ಆರತಿ ಬೇಡಿ ಫೋಟೋಗಳು ವೈರಲ್ ಆದ ನಂತರ ಈಕೆ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿಬಿಟ್ಟರು.

ಆರತಿ ಬೇಡಿ ಖ್ಯಾತಿ ಈಗ ದುಪ್ಪಟ್ಟಾಗಿದೆ. ಈ ನಡುವೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡಲು ಈ ಬ್ಯೂಟಿ ತಯಾರಾಗ್ತಿದ್ದಾಳೆ. ಹಲವು ನಿರ್ಮಾಪಕರು, ನಿರ್ದೇಶಕರಿಂದ ಅಪ್ರೋಚ್ ಆಗಿರುವ ಆರತಿ, ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ಕೆಲ ಕಥೆಗಳನ್ನು ಓದುತ್ತಿದ್ದು, ಆ ಕಥೆಗಳು ಇಷ್ಟವಾದಲ್ಲಿ ಬಣ್ಣ ಹಚ್ಚಿ ಕ್ಯಾಮರಾ ಎದುರು ಹಾಜರಾಗಲಿದ್ದಾರಂತೆ.

ಇದನ್ನು ಓದಿ:  Harbhajan Vs Symonds: ‘ಮಂಕಿಗೇಟ್’ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು..?

ಆರತಿ ಬೇಡಿ ಹಿಮಾಲಯ, ಒಲಾ, ಐಸಿಐಸಿಐ ಬ್ಯಾಂಕ್, ವೈಲ್ಡ್ ಸ್ಟೋನ್‌ನಂತಹ 35-40ಕ್ಕೂ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಸದ್ಯ ಆರತಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾಗಲು ಅಖಾಡ ಸಿದ್ಧ ಮಾಡಿಕೊಳ್ತಿದ್ದು, ಯಾವ ರೀತಿಯ ಸಿನಿಮಾವನ್ನು ಆಯ್ಕೆ ಮಾಡ್ತಾರೆ ಅನ್ನೋದು ಸದ್ಯಕ್ಕಿರುವ ಕುತೂಹಲವಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News