ನವದೆಹಲಿ: ಭಾರತದ ನಿಖತ್ ಜರೀನ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದ ಫೈನಲ್‌ನಲ್ಲಿಥೈಲ್ಯಾಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.ನಿಖತ್ ಜರೀನ್ ಮಹಿಳೆಯರ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ 5-0 ಅಂತರದಲ್ಲಿ ಜಯಗಳಿಸಿದರು.
ಇದನ್ನೂ ಓದಿ : IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .! ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್
ಗುರುವಾರದಂದು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಫ್ಲೈ-ವೇಟ್ ಫೈನಲ್‌ನಲ್ಲಿ ಭಾರತದ ನಿಖತ್ ಜರೀನ್ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದರು. ಆ ಮೂಲಕ ನಿಖತ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಆಗಿದ್ದಾರೆ.
ONE FOR THE HISTORY BOOKS ✍️ 🤩
⚔️@nikhat_zareen continues her golden streak (from Nationals 2021) & becomes the only 5️⃣th 🇮🇳woman boxer to win🥇medal at World Championships🔥
Well done, world champion!🙇🏿♂️🥳@AjaySingh_SG#ibawwchs2022#IstanbulBoxing#PunchMeinHaiDum#Boxing pic.twitter.com/wjs1mSKGVX
— Boxing Federation (@BFI_official) May 19, 2022
25 ವರ್ಷದ ಜರೀನ್ ಮಾಜಿ ಜೂನಿಯರ್ ಯೂತ್ ವಿಶ್ವ ಚಾಂಪಿಯನ್ ಅಗಿದ್ದು, ಫೈನಲ್‌ನಲ್ಲಿ ಥಾಯ್ಲೆಂಡ್ ಎದುರಾಳಿ ವಿರುದ್ಧ ನಿಖತ್ ಅಮೋಘ ಹೋರಾಟ ನಡೆಸಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: Pension Scheme : ಸರ್ಕಾರದ ಈ ಯೋಜನೆಯಲ್ಲಿ ಪಡೆಯಿರಿ ₹60,000 ಪಿಂಚಣಿ!
ಜರೀನ್ ತನ್ನ ತಾಂತ್ರಿಕ ಕುಶಾಗ್ರಮತಿಯನ್ನು ಬಳಸಿಕೊಂಡಿದ್ದರಿಂದ ಮತ್ತು ತನ್ನ ವೇಗವುಳ್ಳ ಪಾದದ ಎದುರಾಳಿಯನ್ನು ಮೀರಿಸುವುದಕ್ಕಾಗಿ ಕೋರ್ಟ್ ನಲ್ಲಿ ಉತ್ತಮ ಫಾರ್ಮ್ ನೊಂದಿಗೆ ಕಣಕ್ಕೆ ಇಳಿದಿದ್ದರು.ನಿಖತ್ ಅವರು ಮೊದಲ ಸುತ್ತಿನಲ್ಲಿ ಥಾಯ್ ಬಾಕ್ಸರ್‌ಗಿಂತ ಹೆಚ್ಚು ಪಂಚ್‌ಗಳನ್ನು ಹೊಡೆದಿದ್ದರಿಂದ ಎಲ್ಲಾ ತೀರ್ಪುಗಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ಎರಡನೇ ಸುತ್ತು ಬಿಗಿಯಾಗಿತ್ತು ಮತ್ತು ಜಿಟ್‌ಪಾಂಗ್ ಅದನ್ನು 3-2 ರಿಂದ ವಶಪಡಿಸಿಕೊಂಡರು.ಅಂತಿಮವಾಗಿ 5-0 ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು.
ನಿಜಾಮಾಬಾದ್ (ತೆಲಂಗಾಣ) ಮೂಲದ ಬಾಕ್ಸರ್ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006) ಜೆನ್ನಿ ( 2006) ಲೇಖಾ ಕೆಸಿ (2006) ನಂತರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.
2018 ರಲ್ಲಿ ಬಾಕ್ಸಿಂಗ್ ಪಟು ಮೇರಿ ಕೋಮ್ ಗೆದ್ದ ನಂತರ ಇದು ಭಾರತದ ಮೊದಲ ಚಿನ್ನದ ಪದಕವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.