Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ?

Slaping Game Video: ಚಿಕ್ಕವರಿರುವಾಗ ಮಕ್ಕಳು ತಮಾಷೆಗಾಗಿ ಇಂತಹ ಆಟವಾಡಿರಬಹುದು. ಆದರೆ, ದೊಡ್ಡವರಾದ ಮೇಲೆ ಯಾರೂ ಇಂತಹ ಆದವನ್ನು ಆಡಿರಲಿಕ್ಕಿಲ್ಲ. ದೊಡ್ಡವರಾದ ಮೇಲೂ ಕೂಡ ಯಾರಾದರು ಈ ರೀತಿಯ ಚಾಲೆಂಜ್ ತೆಗೆದುಕೊಂಡರೆ ಅವರನ್ನು ಮೂರ್ಖರೆಂದೇ ಕರೆಯಬಹುದು.   

Written by - Nitin Tabib | Last Updated : May 28, 2022, 07:51 PM IST
  • ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರ ಆಟದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
  • ಈ ವಿಡಿಯೋ ನೋಡಿ ನಿಮ್ಮ ಕಿವಿ ಕೂಡ ಒಂದು ಕ್ಷಣ ಕುಂಯಿಗುಟ್ಟಲಿದೆ.
  • ಅದ್ಹೇಗೆ ಅಂತೀರಾ? ವಿಡಿಯೋ ನೋಡಿ ಗೊತ್ತಾಗುತ್ತದೆ
Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ? title=
Bizarre Game Video

Slaping Game Video: ನೀವು ನಿಮ್ಮ ಜೀವನದಲ್ಲಿ ಹಲವು ವಿಚಿತ್ರ ರೀತಿಯ ಚಾಲೆಂಜ್ ಅಥವಾ ಆಟಗಳನ್ನು ನೋಡಿರಬಹುದು. ಆದರೆ, ಇಂದು ನಾವು ನಿಮಗೆ ತೋರಿಸಲು ಹೊರಟಿರುವ ಆಟವನ್ನು ನೋಡಿ ನಿಮ್ಮ ತಲೆ ಕೂಡ ಗಿರಕಿ ಹೊಡೆಯಲಿದೆ. ಏಕೆಂದರೆ ಇಂತಹ ಆಟ ನೀವು ಈ ಮೊದಲು ಎಂದಿಗೂ ಕೂಡ ವಿಕ್ಷೀಸಿರುವುದಿಲ್ಲ ಎಂಬುದು ನಮ್ಮ ಅನಿಸಿಕೆ. ಈ ಆಟವನ್ನು ನೋಡು ಒಂದು ಕ್ಷಣ ನಮ್ಮ ಮೆದುಳು ಕೆಲಸವನ್ನೇ ಮಾಡುವುದನ್ನು ನಿಲ್ಲಿಸಬಹುದು. ಏಕೆಂದರೆ, ಕಿವಿಯಲ್ಲಿ ಕುಂಯಿಗುಟ್ಟುವ ಸದ್ದು ಮಾತ್ರ ಕೇಳಿಸಲಿದೆ. ಇಲ್ಲಿ ವಿಶೇಷತೆ ಎಂದರೆ ಎರಡು ಯುವತಿಯರು ಈ ಆಟವನ್ನು ಆಡುತ್ತಿದ್ದಾರೆ. 

ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ ಮಾಡುವ ಇಂತಹ ಆಟವನ್ನು ನೀವು ಹಿಂದೆಂದೂ ಕೂಡ ವೀಕ್ಷಿಸಿರಲಿಕ್ಕಿಲ್ಲ. ಚಿಕ್ಕವರಿರುವಾಗ ಮಕ್ಕಳು ತಮಾಷೆಗಾಗಿ ಇಂತಹ ಆಟವಾಡಿರಬಹುದು. ಆದರೆ, ದೊಡ್ಡವರಾದ ಮೇಲೆ ಯಾರೂ ಇಂತಹ ಆದವನ್ನು ಆಡಿರಲಿಕ್ಕಿಲ್ಲ. ದೊಡ್ಡವರಾದ ಮೇಲೂ ಕೂಡ ಯಾರಾದರು ಈ ರೀತಿಯ ಚಾಲೆಂಜ್ ತೆಗೆದುಕೊಂಡರೆ ಅವರನ್ನು ಮೂರ್ಖರೆಂದೇ ಕರೆಯಬಹುದು. ಏಕೆಂದರೆ ಯಾರು ತಾನೇ ಏಟು ತಿನ್ನಲು ಇಷ್ಟಪಡುತ್ತಾರೆ ಹೇಳಿ, ವಿಡಿಯೋ ನೋಡಿ... 

 
 
 
 

 
 
 
 
 
 
 
 
 
 
 

A post shared by SᶸᵖᵉᣴMan ⏤͟͟͞͞★ (@only._.sarcasm_)

ಇದನ್ನೂ ಓದಿ-Parrot Video: ಟೀಗಾಗಿ ಹಿಂದಿಯಲ್ಲಿ 'ಅಮ್ಮಾ' ಎಂದು ಕರೆದ ವಿದೇಶಿ ಗಿಳಿ, ಅಮ್ಮನ ಉತ್ತರ ಕೇಳಿ ಮನಸೋತ ನೆಟ್ಟಿಗರು

ವಿಚಿತ್ರ ಆಟಕ್ಕಿಳಿದ ಯುವತಿಯರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಒಂದು ವಿಚಿತ್ರ ಆಟವನ್ನು ಆಡುತ್ತಿದ್ದಾರೆ. ಈ ಇಬ್ಬರು ಯುವತಿಯರು ಪರಸ್ಪರ ಕೆನ್ನೆಗೆ ಹೊಡೆಯುವ ಚಾಲೆಂಜ್ ತೆಗೆದುಕೊಂಡಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಬಳಿಕ ಇಬ್ಬರ ನಡುವ ಪರಸ್ಪರ ಕಪಾಳಮೋಕ್ಷ ಮಾಡುವ ಆಟ ಆರಂಭವಾಗುತ್ತದೆ. ಈ ಆಟದಲ್ಲಿ ಮೊದಲ ಕಪಾಳಮೋಕ್ಷ ಎಷ್ಟೊಂದು ತೀವ್ರವಾಗಿದೆ ಎಂದರೆ ಇಬ್ಬರು ಯುವತಿಯರು ನಿಂತಲ್ಲಿಯೇ ನಲುಗಿಹೋಗಿದ್ದಾರೆ ಎಂಬುದನ್ನು ನೀವು ವಿಡಿಯೋದಲ್ಲಿ ವೀಕ್ಷಿಸಬಹುದು. 

ಇದನ್ನೂ ಓದಿ-OMG: ಮಾಲೆ ಹಾಕುವ ಬದಲು ವರನ ಕೊರಳಿಗೆ ಅಪಾಯಕಾರಿ ಹಾವನ್ನು ಹಾಕಿದ ವಧು, ವರ ಮಾಡಿದ್ದೇನು ಗೊತ್ತಾ?

ಇಷ್ಟಾದ ಬಳಿಕವೂ ಕೂಡ ಇಬ್ಬರು ಹಿಂದಕ್ಕೆ ಸರಿಯುವುದಿಲ್ಲ ಮತ್ತು ಪರಸ್ಪರರ ಮೇಲೆ ಕೆನ್ನೆಹೊಡೆತದ ಸುರಿಮಳೆಯನ್ನೇಗೈಯುತ್ತಾರೆ. ವಿಡಿಯೋದ ಆರಂಭದಲ್ಲಿ ನಗುಮೊಗದೊಂದಿಗೆ ಈ ಹುಡುಗಿಯರು ಪರಸ್ಪರರ ಮುಂದೆ ಬಂದು ನಿಲ್ಲುತ್ತಾರೆ ಮತ್ತು ಪರಸ್ಪರರ ಮೇಲೆ ತುಂಬಾ ಮಜಾ ಮಾಡುತ್ತಾ  ಕಪಾಳಮೋಕ್ಷ ಮಾಡುತ್ತಾರೆ. ಈ ವಿಡಿಯೋವನ್ನು only._.sarcasm_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಪ್ಲೋಡ್ ಮಾಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News