ಖಾಸಗಿ ಲೋನ್ ಆಪ್‌ಗಳನ್ನ ಬಳಸುವವರೇ ಎಚ್ಚರ.! ಹಣದ ಆಸೆಗೆ ಹೋದೀತು ಮಾನ!!

Private Loan Application: ಖಾಸಗಿ ಲೋನ್ ಆಪ್ ಹೆಸರಲ್ಲಿ ಮಾನ ಹಾನಿ ಮಾಡಿ ಹಣ ಪೀಕುವ ಕೆಲಸವನ್ನು ಇದೀಗ ಸೈಬರ್‌ ಖದೀಮರು ಆರಂಭಿಸಿದ್ದಾರೆ. ಹೀಗಾಗಿ ನೀವೇನಾದರೂ  ಖಾಸಗಿ ಲೋನ್ ಆಪ್‌ಗಳನ್ನ ಬಳಸುತ್ತಿದ್ದರೆ ಕೊಂಚ ಜಾಗರೂಕರಾಗಿರಿ. 

Written by - VISHWANATH HARIHARA | Edited by - Chetana Devarmani | Last Updated : May 30, 2022, 06:33 PM IST
  • ಖಾಸಗಿ ಲೋನ್ ಆಪ್‌ಗಳನ್ನ ಬಳಸುವವರೇ ಎಚ್ಚರ
  • ಹಣದ ಆಸೆಗೆ ಹೋದೀತು ಮಾನ
  • ಅವರು ಹೇಳಿದಂತೆ ಡಿಟೇಲ್ಸ್ ಅಪ್ ಲೋಡ್ ಮಾಡಿದ್ರೆ ಅಲ್ಲಿಗೆ ಮುಗಿಯಿತು ಕತೆ
ಖಾಸಗಿ ಲೋನ್ ಆಪ್‌ಗಳನ್ನ ಬಳಸುವವರೇ ಎಚ್ಚರ.! ಹಣದ ಆಸೆಗೆ ಹೋದೀತು ಮಾನ!! title=
ಸೈಬರ್‌

ಬೆಂಗಳೂರು: ಲೋನ್ ಆಪ್ ಹೆಸರಲ್ಲಿ ಮಾನ ಹಾನಿ ಮಾಡಿ ಹಣ ಪೀಕುವ ಕೆಲಸವನ್ನು ಇದೀಗ ಸೈಬರ್‌ ಖದೀಮರು ಆರಂಭಿಸಿದ್ದಾರೆ. ಹೀಗಾಗಿ ನೀವೇನಾದರೂ  ಖಾಸಗಿ ಲೋನ್ ಆಪ್‌ಗಳನ್ನ ಬಳಸುತ್ತಿದ್ದರೆ ಕೊಂಚ ಜಾಗರೂಕರಾಗಿರಿ. 

ಇದನ್ನೂ ಓದಿ: ಅಯೋಧ್ಯೆ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಾಂತ್ವನ

ವಾಟ್ಸಾಪ್ ನಲ್ಲಿ ಬರೋ ಲಿಂಕ್ ಕ್ಲಿಕ್ ಮಾಡಿ ನೀವೇನಾದರೂ ಅವರು ಹೇಳಿದಂತೆ ಡಿಟೇಲ್ಸ್ ಅಪ್ ಲೋಡ್ ಮಾಡಿದ್ರೆ ಅಲ್ಲಿಗೆ ನಿಮ್ಮ ಕತೆ ಮುಗಿದಂತೆ. ಅವರು ಕೇಳುವ ಎಲ್ಲ ಡಿಟೇಲ್ಸ್‌ ಅಪ್ ಲೋಡ್ ಮಾಡಿದರೆ, ನೀವು ಲೋನ್ ಕೇಳಿಲ್ಲ ಅಂದ್ರು ನಿಮ್ಮ ಅಕೌಂಟ್ ಗೆ ಹಣ ಬೀಳುತ್ತೆ. ಅಲ್ಲಿಂದ ಶುರುವಾಗುತ್ತೆ ನೋಡಿ ಲೋನ್ ಕೊಟ್ಟ ಹಣದ ವಸೂಲಿ. ಅಷ್ಟಕ್ಕೂ ಲೋನ್ ರಿಕವರಿ ಮಾಡಲು ಇವರು ಹಿಡಿಯುವ ಮಾರ್ಗ ಕೇಳಿದ್ರೆ ಶಾಕ್ ಆಗ್ತೀರಾ.  

ಹೌದು, ಮೊದಲಿಗೆ ವಾಟ್ಸಾಪ್  ನಲ್ಲಿ ಲೋನ್ ಆಪ್ ಲಿಂಕ್ ಕಳಿಸಿದ್ದ ಖದೀಮರು, ಮೊದಲಿಗೆ ಹಣ ಕಟ್ಟುವಂತೆ ಅಪರಿಚಿತ ನಂಬರ್ ನಿಂದ ಕರೆ ಮಾಡುತ್ತಾರೆ. ಹಣ ಕಟ್ಟುವಂತೆ ಹೇಳುತ್ತಾರೆ. ಹಣ ಕಟ್ಟಿದ ಮೇಲೂ ಮತ್ತೆ ಮತ್ತೆ ಹಣ ಕಟ್ಟುವಂತೆ ಕರೆ ಮಾಡಿ ಟಾರ್ಚರ್ ನೀಡುತ್ತಾರೆ. ಆಗ ವ್ಯಕ್ತಿ ಅವರ ಫೋನ್‌ಗಳನ್ನೇನಾದರೂ ಅವಾಯ್ಡ್‌ ಮಾಡಿದರೆ, ಅವರ ಜಿ-ಮೇಲ್ ಹ್ಯಾಕ್ ಮಾಡುತ್ತಾರೆ. 

ಬಳಿಕ ಕಾಂಟ್ಯಾಕ್ಟ್ ನಂಬರ್‌ಗಳನ್ನ ಕದ್ದಿದ್ದ ಖದೀಮರು, ಆ ನಂಬರ್ ಗಳಿಗೆ ಮೊದಲಿಗೆ ಅಸಭ್ಯವಾಗಿ ಈತನ ಬಗ್ಗೆ ಆಡಿಯೋ ಮೆಸೇಜ್ ಮಾಡುತ್ತಾರೆ. ಬಳಿಕ ಹ್ಯಾಕ್‌ ಮಾಡಿದ ಮೇಲ್‌ ಐಡಿಯಲ್ಲಿನ ಫೋನ್‌ ನಂಬರ್‌ಗಳನ್ನು ಕದ್ದು, ಆ ವ್ಯಕ್ತಿಯ ಅಶ್ಲೀಲವಾದ ಫೋಟೋ ಕಳಿಸಿ, ಹಣ ಕಟ್ಟುವಂತೆ ಡಿಮ್ಯಾಂಡ್ ಮಾಡುತ್ತಾರೆ.

ಇದನ್ನೂ ಓದಿ: Rajya Sabha Polls: ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದ ಬಿಜೆಪಿ

ಇಂತಹ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಈ ರೀತಿ ನಕಲಿ ಲೋನ್ ಆಪ್ ಗಳ ಹಾವಳಿಗೆ ಸಿಕ್ಕು ಅನೇಕ ಜನ ಮಾನ ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ರೀತಿಯ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News