ಭಾರತೀಯ ರೈಲ್ವೇ ಸಮಯಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡುತ್ತಿರುತ್ತದೆ. ರೈಲ್ವೆಯು ಪ್ರಪಂಚದಾದ್ಯಂತ ವಿಭಿನ್ನ ಗುರುತನ್ನು ಹೊಂದಿರುವ ಅನೇಕ ಭವ್ಯವಾದ ಸೇತುವೆಗಳನ್ನು ನಿರ್ಮಿಸಿದೆ. ಅಂತಹ ಒಂದು ಸೇತುವೆಯನ್ನು ದಕ್ಷಿಣ ರೈಲ್ವೆ ನಿರ್ಮಿಸುತ್ತಿದೆ. ಈ ಸೇತುವೆಯು ಹಡಗು ಹತ್ತಿರ ಬಂದಾಗ, ಲಿಫ್ಟಿನಂತೆ ಮೇಲಕ್ಕೆ ಏರಿ, ಹಡಗು ಸಾಗಿದ ಬಳಿಕ ಕೆಳಕ್ಕೆ ಇಳಿಯುತ್ತದೆ.
ಮುಂದಿನ ದಿನಗಳಲ್ಲಿ ರಾಮೇಶ್ವರಂಗೆ ಹೋಗುವ ಭಕ್ತರು ಕೂಡ ಈ ಇಂಜಿನಿಯರಿಂಗ್ ಕೌತುಕವನ್ನು ನೋಡಬಹುದು. ಸುಮಾರು 560 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪಂಬನ್ ಸೇತುವೆ ಮೇಲೆ ಲಿಫ್ಟ್ ವ್ಯವಸ್ಥೆಯನ್ನು ಬಳಸಿಕೊಂಡು ಟ್ರ್ಯಾಕ್ ಹಾಕಲಾಗುತ್ತಿದೆ. ಈ ಸೇತುವೆ ಮೇಲೆ ರೈಲು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಲಿದೆ.
ಇದನ್ನು ಓದಿ: ಹಿಂದೂ ಧರ್ಮ ತ್ಯಜಿಸಿದ ಕಾರಣಕ್ಕೆ ಬಸವಣ್ಣ ಮತ್ತು ಅಂಬೇಡ್ಕರ್‌ರನ್ನು ನಿರ್ಲಕ್ಷಿಸಲಾಯಿತೇ?'
ಧನುಷ್ಕೋಡಿಗೆ ಮತ್ತೆ ರೈಲು ಮಾರ್ಗ ಆರಂಭ:
ರಾಮೇಶ್ವರಂಗೆ ಭೇಟಿ ನೀಡುವ ಪ್ರವಾಸಿಗರಿಗೆ ಧನುಷ್ಕೋಡಿಗೆ ಆಗಮಿಸಲು ಸುಲಭವ ಹಾದಿ ಮಾಡುವ ಸಲುವಾಗಿ ರಾಮೇಶ್ವರಂ ಮತ್ತು ಧನುಷ್ಕೋಡಿಯನ್ನು ಮತ್ತೊಮ್ಮೆ ರೈಲು ಮಾರ್ಗದ ಮೂಲಕ ಸಂಪರ್ಕಿಸಲಾಗುತ್ತಿದೆ. ಈ ಸೇತುವೆ ನಿರ್ಮಾಣದಿಂದ, ರಾಮೇಶ್ವರಂವರೆಗೆ ಹಲವು ಹೊಸ ರೈಲುಗಳನ್ನು ಓಡಿಸಲು ರೈಲ್ವೆಗೆ ಸಾಧ್ಯವಾಗಲಿದೆ.
ಚಂಡಮಾರುತಕ್ಕೆ ಸಿಲುಕಿದ್ದ ರೈಲು ಮಾರ್ಗ:
ಮೊದಲು ಧನುಷ್ಕೋಡಿಯಲ್ಲಿ ರೈಲು ನಿಲ್ದಾಣವಿತ್ತು. ಅಲ್ಲಿಂದ ಶ್ರೀಲಂಕಾಕ್ಕೆ ಸರಕುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಆದರೆ ಅರವತ್ತರ ದಶಕದಲ್ಲಿ ಸಂಭವಿಸಿದ ಭೀಕರ ಚಂಡಮಾರುತಕ್ಕೆ ಸಿಲುಕಿ ಈ ರೈಲು ನಿಲ್ದಾಣ ಮತ್ತು ರೈಲು ಮಾರ್ಗ ನಾಶವಾಯಿತು. ಅಂದಿನಿಂದ ಯಾರೂ ಅದನ್ನು ಸರಿಪಡಿಸಲು ಆಸಕ್ತಿ ತೋರಿಸಲಿಲ್ಲ. ಇದೀಗ ಅರವತ್ತು ವರ್ಷಗಳ ನಂತರ ಮತ್ತೊಮ್ಮೆ ಈ ರೈಲು ಸಂಪರ್ಕ ಆರಂಭವಾಗುತ್ತಿದೆ. ಈ ನಿಲ್ದಾಣವು ಪ್ರವಾಸೋದ್ಯಮ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ.
18 ಕಿಮೀ ರೈಲು ಮಾರ್ಗ:
ಮಧುರೈ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆನಂದ್ ಈ ಬಗ್ಗೆ ಮಾತನಾಡಿದ್ದಾರೆ. ರೈಲ್ವೆ ನಿಲ್ದಾಣವನ್ನು ಮರುಅಭಿವೃದ್ಧಿಪಡಿಸಲು, ಹೊಸ ಬ್ರಾಡ್ ಗೇಜ್ ಮತ್ತು ವಿದ್ಯುತ್ ಮಾರ್ಗಗಳ ಸಹಾಯದಿಂದ ಸಂಪರ್ಕಿಸಲು ಯೋಜಿಸಿದೆ. ಇದು ರಾಮೇಶ್ವರಂನಿಂದ 18 ಕಿಮೀ ಲೈನ್ ಆಗಿರುತ್ತದೆ ಮತ್ತು 3 ನಿಲುಗಡೆಗಳನ್ನು ಹೊಂದಿರುತ್ತದೆ. ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ರಾಮೇಶ್ವರಂ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲು ಮುಂದಾಗಿದ್ದೇವೆ ಎಂದರು.
ಕಡಿಮೆ ವೇಗದಲ್ಲಿ ರೈಲು ಸಂಚಾರ:
ಪ್ರಸ್ತುತ, ಈ ಸೇತುವೆಯು 120 ವರ್ಷಗಳಷ್ಟು ಹಳೆಯದಾಗಿದೆ. ಕೇವಲ ಹನ್ನೆರಡು ರೈಲುಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಇದರ ವೇಗ ಗಂಟೆಗೆ 10 ಕಿಲೋಮೀಟರ್. ಇಷ್ಟೇ ಅಲ್ಲ, ಹಳೆಯ ಪಂಬನ್ ಸೇತುವೆಯಲ್ಲಿ ಗೂಡ್ಸ್ ರೈಲುಗಳು ಓಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭದ್ರತೆಯ ದೃಷ್ಟಿಯಿಂದ ಪಂಬನ್ ಸೇತುವೆ ಜತೆಗೆ ಹೊಸ ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಲಿಫ್ಟ್ ವ್ಯವಸ್ಥೆ ಬಳಸಿ ಸೇತುವೆ ಮರು ನಿರ್ಮಾಣ:
ಪಂಬನ್ ಸೇತುವೆಯಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಬಳಸಿಕೊಂಡು ಮರುನಿರ್ಮಾಣ ಮಾಡಲಾಗುತ್ತಿದ್ದು, ಹಡಗು ಬಂದಾಗ ಗೇಟ್ ಸ್ವಯಂಚಾಲಿತವಾಗಿ ಮೇಲಕ್ಕೆ ಹೋಗುತ್ತದೆ. ಈ ಹಿಂದೆ ನಿರ್ಮಿಸಲಾದ ಸೇತುವೆಗಳು ಪ್ರತ್ಯೇಕ ಹಳಿಗಳನ್ನು ಹೊಂದಿದ್ದವು. ಹಡಗಿನ ನಿರ್ಗಮನದ ನಂತರ, ಅವುಗಳು ಪರಸ್ಪರ ಮರುಸಂಪರ್ಕಿಸುತ್ತಿದ್ದವು. ಈ ಪ್ರಕ್ರಿಯೆ ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತಿತ್ತು. ಈಗ ಪಂಬನ್ ಸೇತುವೆಯಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಬಳಸಿದಾಗ, ಹಡಗು ಬರುವ ವೇಳೆ ಟ್ರ್ಯಾಕ್‌ಗಳು ಲಿಫ್ಟ್‌ನಂತೆ ಮೇಲಕ್ಕೆ ಹೋಗುತ್ತವೆ. ಹಡಗು ಹೊರಟುಹೋದ ನಂತರ ಮತ್ತೆ ಕೆಳಗಿಳಿಯುತ್ತದೆ. ಈ ಪ್ರಕ್ರಿಯೆಯು ಕೇವಲ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅತ್ಯಂತ ಕುತೂಹಲಕಾರಿ ಅಂಶವೆಂದರೆ ಹಳೆಯ ಪಂಬನ್ ಸೇತುವೆಯನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ.
ಸೇತುವೆಯು 2 ಕಿಮೀಗಿಂತ ಹೆಚ್ಚು ಉದ್ದವಾಗಿದೆ
ರೈಲು ವಿಕಾಸ್ ನಿಗಮ್ ಲಿಮಿಟೆಡ್ ನಿರ್ಮಿಸುತ್ತಿರುವ ಈ ಹೊಸ ಸೇತುವೆಯು 2 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿದೆ. ಹೊಸ ಸೇತುವೆಗೆ ಶೇಸರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಬೃಹತ್ ಹಡಗುಗಳು ಹಾದುಹೋಗಲು ಸಹಾಯ ಮಾರುತ್ತದೆ. ಈ ಸೇತುವೆಯು ಗಂಟೆಗೆ 100 ಕಿಮೀ ವೇಗದ ಗಾಳಿಯನ್ನು ತಡೆದುಕೊಳ್ಳುವ ಜೊತೆಗೆ ಸಮುದ್ರದ ಶಕ್ತಿಯುತ ಅಲೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.
ಇನ್ನು ಈ ಸೇತುವೆ 100 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದೆ. ಇದು ದಕ್ಷಿಣ ಭಾರತವನ್ನು ರಾಮೇಶ್ವರದಿಂದ ಸಂಪರ್ಕಿಸುವ ಪ್ರಮುಖ ಸೇತುವೆಯಾಗಿದೆ. ಈ ಹೊಸ ಸೇತುವೆಯ ನಿರ್ಮಾಣದಿಂದ, ಭಕ್ತರು ಭಾರತದ ನೆಲದ ಕೊನೆಯ ತುದಿಯಾದ ಧನುಷ್ಕೋಟಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಧನುಷ್ಕೋಟಿ ಎಂದರೆ ರಾಮಸೇತುವನ್ನು ಪ್ರಾರಂಭಿಸಿ ಶ್ರೀಲಂಕಾದವರೆಗೆ ಹೋಗುತ್ತಿದ್ದ ಸ್ಥಳವಾಗಿದೆ. ಇಲ್ಲಿಂದ ಶ್ರೀಲಂಕಾ ಸಮುದ್ರದ ಮೂಲಕ 12 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ. ಹೊಸ ಸೇತುವೆಯು 18.3 ಮೀಟರ್‌ಗಳ 100 ಸ್ಪ್ಯಾನ್‌ಗಳನ್ನು ಮತ್ತು 63 ಮೀಟರ್‌ಗಳ ನ್ಯಾವಿಗೇಷನಲ್ ಸ್ಪ್ಯಾನ್‌ಗಳನ್ನು ಹೊಂದಿರುತ್ತದೆ.
ಇದನ್ನು ಓದಿ: CM Yogi Birthday : ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಲೈಫ್ ಸ್ಟೋರಿ ಫೋಟೋ ನೋಡಿ
ಧನುಷ್ಕೋಡಿ ತಲುಪಲು ಸುಲಭ ಮಾರ್ಗ:
ರೈಲ್ವೇ ಪ್ರಕಾರ, ಧನುಷ್ಕೋಡಿಯಿಂದ ರಾಮೇಶ್ವರಂಗೆ 18 ಕಿ.ಮೀ., ಸಿಂಗಲ್ ಲೈನ್ ರೈಲು ಹಳಿ ಹಾಕಲಾಗುತ್ತದೆ. ಇದು ರಾಮೇಶ್ವರಂಗೆ ಭೇಟಿ ನೀಡುವ ಪ್ರವಾಸಿಗರಿಗೆ ಧನುಷ್ಕೋಡಿ ತಲುಪಲು ಸುಲಭವಾದ ಆಯ್ಕೆಯನ್ನು ಒದಗಿಸುತ್ತದೆ. ರಾಮಸೇತು ರಾಮೇಶ್ವರಂನಿಂದ ಪ್ರಾರಂಭವಾಗುತ್ತದೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರಕ್ಕೆ ಸಮೀಪದಲ್ಲಿ ನಿರ್ಮಾಣವಾಗಲಿರುವ ಈ ರೈಲು ನಿಲ್ದಾಣವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ರೈಲ್ವೇ ಪ್ರಕಾರ, ಈ ಯೋಜನೆಯು 700 ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ, 18 ಕಿಮೀ ಪೈಕಿ 13 ಕಿಮೀ ರೈಲ್ವೇ ಹಳಿಯನ್ನು ಎತ್ತರಿಸಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ