Shani Dev:ಈ ಮೂರು ರಾಶಿಗಳ ಜನರ ಮೇಲೆ ಯಾವಾಗಲು ಶನಿ ಕೃಪಾದೃಷ್ಠಿ ಇರುತ್ತದೆ, ನಿಮ್ಮ ರಾಶಿ ಇದೆಯಾ ಇವುಗಳಲ್ಲಿ?

Lucky Zodiac Signs: ಕೆಲವರು ಹುಟ್ಟಿನಿಂದಲೇ ತುಂಬಾ ಭಾಗ್ಯಶಾಲಿಗಲಾಗಿರುತ್ತಾರೆ. ಅವರ ಮೇಲೆ ದೇವ-ದೇವತೆಗಳ ವಿಶೇಷ ಕೃಪೆ ಇರುತ್ತದೆ ಹಾಗೂ ಇದೇ ಕಾರಣದಿಂದ ಅವರು ಜೀವನದಲ್ಲಿ ಅಪಾರ ಯಶಸ್ಸನ್ನು ಸಂಪಾದಿಸುತ್ತಾರೆ. ಇದರ ಜೊತೆಗೆ ಅಪಾರ ಸಿರಿ-ಸಂಪತ್ತಿನ ಒಡೆಯರು ಕೂಡ ಅವರು ಆಗಿರುತ್ತಾರೆ. ಶನಿ ದೇವರು ಕೂಡ ಮೂರು ರಾಶಿಗಳ ಮೇಲೆ ತನ್ನ ಕೃಪಾದೃಷ್ಠಿಯನ್ನು ಬೀರಿ ಅವರ ಭಾಗ್ಯ ಬೆಳಗುತ್ತಾನೆ.

Written by - Nitin Tabib | Last Updated : Jun 5, 2022, 05:05 PM IST
  • ಶನಿದೇವನು ದಯೆ ತೋರಿದರೆ, ವ್ಯಕ್ತಿಯ ದಿನಗಳು ಬದಲಾಗಲು ಸಮಯ ಬೇಕಾಗುವುದಿಲ್ಲ.
  • ಹೀಗಿರುವಾಗ ಶನಿದೇವನ ಕೃಪೆ ಸದಾ ತಮ್ಮ ಮೇಲೆ ಹೊಂದಿರುವ ಜನರು ಯಾವ ರೀತಿಯಲ್ಲಿ ಪ್ರಗತಿ ಸಾಧಿಸಬಹುದು ಎಂಬುದನ್ನೊಮ್ಮೆ ಊಹಿಸಿಕೊಳ್ಳಿ.
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ರಾಶಿಗಳ ಕುರಿತು ವರ್ಣಿಸಲಾಗಿದ್ದು, ಈ ರಾಶಿಗಳು ಶನಿದೇವನ ನೆಚ್ಚಿನ ರಾಶಿಗಳಾಗಿವೆ.
Shani Dev:ಈ ಮೂರು ರಾಶಿಗಳ ಜನರ ಮೇಲೆ ಯಾವಾಗಲು ಶನಿ ಕೃಪಾದೃಷ್ಠಿ ಇರುತ್ತದೆ, ನಿಮ್ಮ ರಾಶಿ ಇದೆಯಾ ಇವುಗಳಲ್ಲಿ?  title=
Shani Favorite Zodiac Signs

Shani Dev Favourite Rashi: ಶನಿದೇವನು ದಯೆ ತೋರಿದರೆ, ವ್ಯಕ್ತಿಯ ದಿನಗಳು ಬದಲಾಗಲು ಸಮಯ ಬೇಕಾಗುವುದಿಲ್ಲ. ಹೀಗಿರುವಾಗ ಶನಿದೇವನ ಕೃಪೆ ಸದಾ ತಮ್ಮ ಮೇಲೆ ಹೊಂದಿರುವ ಜನರು ಯಾವ ರೀತಿಯಲ್ಲಿ ಪ್ರಗತಿ ಸಾಧಿಸಬಹುದು ಎಂಬುದನ್ನೊಮ್ಮೆ ಊಹಿಸಿಕೊಳ್ಳಿ.  ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ರಾಶಿಗಳ ಕುರಿತು ವರ್ಣಿಸಲಾಗಿದ್ದು, ಈ ರಾಶಿಗಳು ಶನಿದೇವನ ನೆಚ್ಚಿನ ರಾಶಿಗಳಾಗಿವೆ. ಶನಿಯು ಯಾವಾಗಲೂ ಆ ರಾಶಿಗಳ ಜನರ ಮೇಲೆ ದಯೆ ತೋರುತ್ತಾನೆ ಮತ್ತು ಇದರ ಹಿಂದೆ ಕೆಲ ವಿಶೇಷ ಕಾರಣಗಳು ಇವೆ. 

ಶನಿದೇವ ಈ ಜನರ ಮೇಲೆ ದಯೆ ತೋರುತ್ತಾನೆ.
ತುಲಾ:
ತುಲಾ ರಾಶಿಯ ಅಧಿಪತಿ ಶುಕ್ರ ಮತ್ತು ಇದು ಶನಿಯ ಮಿತ್ರ ಗ್ರಹವಾಗಿದೆ. ಈ ರಾಶಿಯ ಜನರು ನ್ಯಾಯವನ್ನು ಪ್ರೀತಿಸುವವರಾಗಿರುತ್ತಾರೆ, ಕಠಿಣ ಪರಿಶ್ರಮಿಗಳು, ಪ್ರಾಮಾಣಿಕರು ಮತ್ತು ಶ್ರಮಜೀವಿಗಳಾಗಿರುತ್ತಾರೆ. ಶನಿದೇವನಿಗೆ ಈ ಗುಣಗಳು ತುಂಬಾ ಇಷ್ಟ. ಇದೆ ಕಾರಣಕ್ಕಾಗಿ, ಶನಿಯು ತುಲಾ ರಾಶಿಯ ಜನರ ಮೇಲೆ ತನ್ನ ಕೃಪಾದೃಷ್ಠಿ ಬೀರುತ್ತಾನೆ. ವ್ಯಕ್ತಿಯ ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯಾ ಭಾಗ್ಯ ಬದಲಾವಣೆಗೆ ಸಮಯವೇ ಬೇಕಾಗುವುದಿಲ್ಲ..

ಮಕರ: ಶನಿಯು ಮಕರ ರಾಶಿಯ ಅಧಿಪತಿಯಾಗಿರುವುದರಿಂದ ಈ ರಾಶಿಯವರಿಗೆ ವಿಶೇಷವಾದ ಅನುಗ್ರಹವನ್ನು ನೀಡುತ್ತಾನೆ. ಶನಿಯ ಪ್ರಭಾವದಿಂದ ಮಕರ ರಾಶಿಯವರು ಶ್ರಮಜೀವಿಗಳು, ಪ್ರಾಮಾಣಿಕರು ಮತ್ತು ಕಷ್ಟದಲ್ಲಿರುವವರ ಸೇವೆ ಮಾಡುವವರಾಗಿರುತ್ತಾರೆ. ಈ ಗುಣಗಳಿಂದಾಗಿ, ಈ ಜನರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ, ಇದಲ್ಲದೆ ಸಾಕಷ್ಟು ಘನತೆ-ಗೌರವವನ್ನು ಕೂಡ ಸಂಪಾದಿಸುತ್ತಾರೆ.

ಇದನ್ನೂ ಓದಿ-Samudrik Shastra: ನಿಮ್ಮ ಕಣ್ಣುಗಳು ಹೇಳುತ್ತವೆ ಜೀವನದ ರಹಸ್ಯ!

ಕುಂಭ: ಕುಂಭ ರಾಶಿಯ ಅಧಿಪತಿಯೂ ಶನಿ ದೇವನೇ. ಆದ್ದರಿಂದ ಈ ರಾಶಿಯವರಿಗೆ ಶನಿಯ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಿದೆ. ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವಲ್ಲಿ ಇವರು ಮುಂದಿರುತ್ತಾರೆ, ಈ ಜನರು ಯಾವಾಗಲೂ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಿದ್ಧರಾಗಿರುತ್ತಾರೆ. ಇದೇ ಕಾರಣದಿಂದ ಇವರು ಉತ್ತಮ ನಾಯಕರಾಗುತ್ತಾರೆ ಮತ್ತು ಜೀವನದಲ್ಲಿ ಉನ್ನತ ಸ್ಥಾನ, ಖ್ಯಾತಿಯನ್ನು ಪಡೆಯುತ್ತಾರೆ. ಶನಿಯ ದಯೆಯು ಇವರನ್ನು ಅನೇಕ ತೊಂದರೆಗಳಿಂದ ರಕ್ಷಿಸುತ್ತದೆ.

ಇದನ್ನೂ ಓದಿ-ಮಧುಮೇಹಿಗಳು ನಿಂಬೆಹಣ್ಣು ಸೇವಿಸಬಹುದೇ? ಇಲ್ಲಿದೆ ನೋಡಿ ಉತ್ತರ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News