Urad Dal Side Effects : ಈ ಆರೋಗ್ಯ ಸಮಸ್ಯೆಗಳಿರುವವರು ಉದ್ದಿನಬೇಳೆ ತಿನ್ನಲೇಬಾರದು..!

ಉದ್ದಿನ ಬೇಳೆಯಲ್ಲಿ ಅನೇಕ ರೀತಿಯ ಪೋಷಕ ಅಂಶಗಳು ಇರುತ್ತವೆ. ಇದರಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇರುತ್ತದೆ. ಇದು  ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಿಗೆಉದ್ದಿನ ಬೇಳೆ ಸೇವನೆ ಸಮಸ್ಯೆಯನ್ನು ಉಂಟು ಮಾಡಬಹುದು.  

Written by - Ranjitha R K | Last Updated : Jun 8, 2022, 10:53 AM IST
  • ಉದ್ದಿನಬೇಳೆಯನ್ನು ಎಷ್ಟು ತಿನ್ನಬೇಕು?
  • ಯಾರು ಉದ್ದಿನಬೇಳೆಯನ್ನು ತಿನ್ನಲೇಬಾರದು ?
  • ಅಜೀರ್ಣದ ಸಮಸ್ಯೆ ಇರುವವರು ಇದನ್ನು ತಿನ್ನಬಾರದು
Urad Dal Side Effects : ಈ ಆರೋಗ್ಯ ಸಮಸ್ಯೆಗಳಿರುವವರು ಉದ್ದಿನಬೇಳೆ ತಿನ್ನಲೇಬಾರದು..!  title=
Urad dal disadvantage (file photo)

ಬೆಂಗಳೂರು : ಉದ್ದಿನ ಬೇಳೆಯನ್ನು ಬಳಸದವರು ಸಾಮಾನ್ಯವಾಗಿ ಯಾರು ಇಲ್ಲ ಎನ್ನಬಹುದು. ದೋಸೆ, ಇಡ್ಲಿ, ವಡೆ, ಚಟ್ನಿ ಸಾಂಬಾರ್ ಹೀಗೆ ಯಾವುದಾದರೊಂದು ರೀತಿಯಲ್ಲಿ ಉದ್ದಿನ ಬೇಳೆ ಬಳಕೆ ಇದ್ದೇ ಇರುತ್ತದೆ.  ಉದ್ದಿನ ಬೇಳೆಯಲ್ಲಿ ಅನೇಕ ರೀತಿಯ ಪೋಷಕ ಅಂಶಗಳು ಇರುತ್ತವೆ. ಇದರಲ್ಲಿ ಅಧಿಕ ಪ್ರಮಾಣದ ಪ್ರೋಟೀನ್ ಇರುತ್ತದೆ. ಇದು  ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಿಗೆಉದ್ದಿನ ಬೇಳೆ ಸೇವನೆ ಸಮಸ್ಯೆಯನ್ನು ಉಂಟು ಮಾಡಬಹುದು.  

ಉದ್ದಿನಬೇಳೆಯನ್ನು ಎಷ್ಟು ತಿನ್ನಬೇಕು?
ಪ್ರತಿದಿನ ಉದ್ದಿನಬೇಳೆಯನ್ನು ತಿನ್ನುವವರು ಜಾಗರೂಕರಾಗಿರಿ. ಏಕೆಂದರೆ ಪ್ರತಿ ನಿತ್ಯ ಉದ್ದಿನ ಬೇಳೆ ಬಳಸಿರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಉದ್ದಿನಬೇಳೆಯನ್ನು ಸೇವಿಸಿದರೆ ಆರೋಗ್ಯಕ್ಕೆ ಅಗತ್ಯವಾದ ಪೋಷಕ ತತ್ವಗಳು ದೇಹಕ್ಕೆ ಲಭಿಸಿ ಪ್ರಯೋಜನವಾಗಬಹುದು. ಆದರೆ ಇದಕ್ಕಿಂತ ಹೆಚ್ಚು ಬಾರಿ ಉದ್ದಿನಬೇಳೆ ಬಳಸಿದ ಆಹಾರ ಸೇವಿಸಿದರೆ ಅನುಕೂಲದ ಜೊತೆಗೆ ಅನಾನುಕೂಲಗಳು ಆಗಬಹುದು. 

ಇದನ್ನೂ ಓದಿ : Diabetes: ಡಯಾಬಿಟಿಸ್ ರೋಗಿಗಳು ಜೇನುತುಪ್ಪದೊಂದಿಗೆ ಇದನ್ನು ಸೇವಿಸಿದರೆ ಪ್ರಯೋಜನಕಾರಿ

ಯಾರು ಉದ್ದಿನಬೇಳೆಯನ್ನು ತಿನ್ನಲೇಬಾರದು ?
1. ಈಗಾಗಲೇ ಸಂಧಿವಾತದ ಸಮಸ್ಯೆ ಇರುವವರು ಉದ್ದಿನಬೇಳೆಯನ್ನು ಸೇವಿಸಬಾರದು. ಉದ್ದಿನಬೇಳೆಯಲ್ಲಿ  ಗೌಟ್ ಸಮಸ್ಯೆಯನ್ನು ಹೆಚ್ಚಿಸುವ ಅಂಶಗಳು ಅಡಗಿರುತ್ತವೆ. ಈ ಕಾರಣದಿಂದ ಸಂಧಿವಾತ ಸಮಸ್ಯೆಯಿಂದ ಬಳಲುವವರು ಉದ್ದಿನ ಬೇಳೆಯಿಂದ ಅಂತರ ಕಾಯುವುದು ಒಳ್ಳೆಯದು. 

2.ಇದರ ಹೊರತಾಗಿ, ಯಾವಾಗಲೂ ಅಜೀರ್ಣದ ಸಮಸ್ಯೆಯನ್ನು ಹೊಂದಿರುವವರು  ಉದ್ದಿನ ಬೇಳೆಯಿಂದ ದೂರವಿರಬೇಕು.  ಯಾಕೆಂದರೆ ಉದ್ದಿನ ಬೇಳೆ ಕೂಡ ಬೇಗ ಜೀರ್ಣವಾಗುವುದಿಲ್ಲ. ಇದರಿಂದಾಗಿ ಅನೇಕ ಬಾರಿ ಮಲಬದ್ಧತೆ, ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.

ಇದನ್ನೂ ಓದಿ : ಈ ಒಂದು ಎಲೆಯನ್ನು ಸೇವಿಸಿದರೆ ಸಾಕು ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ

3. ಇದರೊಂದಿಗೆ, ಯೂರಿಕ್ ಆಮ್ಲದಿಂದ ಬಳಲುತ್ತಿರುವವರು ಕೂಡಾ ಇದರಿಂದ ದೂರವಿರಬೇಕು.  ಉದ್ದಿನಬೇಳೆ ಮೂತ್ರಪಿಂಡದಲ್ಲಿ ಕ್ಯಾಲ್ಸಿಫಿಕೇಶನ್ ಸ್ಟೋನ್ ಅನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಈಗಾಗಲೇ ಯೂರಿಕ್ ಆಸಿಡ್ ಹೆಚ್ಚಿದ್ದರೆ, ಉದ್ದಿನ ಬೇಳೆಯನ್ನು ಸೇವಿಸಬೇಡಿ.

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪ್ರಿಸ್ಕ್ರಿಪ್ಷನ್‌ಗಳನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News