ದಿ ಪಾರ್ಕ್ ಹೊಟೇಲ್‌ನಲ್ಲಿ ಆ ರಾತ್ರಿ ನಡೆದಿದ್ದು ರೇವ್ ಪಾರ್ಟಿನಾ! FIR ನಲ್ಲಿ ಏನಿದೆ?

ಪೊಲೀಸರು ದಾಖಲಿಸಿರೋ ಎಫ್ಐಆರ್ ಇದೀಗ ಲಭ್ಯವಾಗಿದೆ. ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ ಕಪೂರ್‌ ಈ ಪ್ರಕರಣದ ಎ5 ಆರೋಪಿ. ಸಿದ್ದಾಂತ್ ಕಪೂರ್ ಎ5 ಆರೋಪಿ ಎಂದು ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. 

Written by - VISHWANATH HARIHARA | Edited by - Zee Kannada News Desk | Last Updated : Jun 14, 2022, 11:38 AM IST
  • ದಿ ಪಾರ್ಕ್ ಹೊಟೇಲ್‌ನಲ್ಲಿ ಆ ರಾತ್ರಿ ನಡೆದಿದ್ದು ರೇವ್ ಪಾರ್ಟಿನಾ!
  • ಪೊಲೀಸರು ದಾಖಲಿಸಿದ ಎಫ್ಐಆರ್ ನಲ್ಲಿ ಇರುವುದೇನು?
  • ರೇವ್ ಪಾರ್ಟಿ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತಂತೆ
ದಿ ಪಾರ್ಕ್ ಹೊಟೇಲ್‌ನಲ್ಲಿ ಆ ರಾತ್ರಿ ನಡೆದಿದ್ದು ರೇವ್ ಪಾರ್ಟಿನಾ! FIR ನಲ್ಲಿ ಏನಿದೆ?  title=
ರೇವ್ ಪಾರ್ಟಿ

ಬೆಂಗಳೂರು: ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ತೊಡಗಿದ್ದ ಒಟ್ಟು 50 ಜನರನ್ನ ವಶಕ್ಕೆ ಪಡೆದಿದ್ದರು. ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಅನುಮಾನ ಹಿನ್ನೆಲೆ ಜಿಟಿ ಮಾಲ್ ಮುಂಭಾಗದಲ್ಲಿರುವ ಫೈವ್‌ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಲಾಗಿತ್ತು. ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್‍ನಲ್ಲಿರುವ ಪ್ರತಿಷ್ಠಿತ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿದ್ದರು. 

ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಈ ರಾಜ್ಯಗಳ ಕದತಟ್ಟಲಿದೆ ಮಾನ್ಸೂನ್‌ ಮಾರುತ!

ಪೊಲೀಸರು ದಾಖಲಿಸಿರೋ ಎಫ್ಐಆರ್ ಇದೀಗ ಲಭ್ಯವಾಗಿದೆ. ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ ಕಪೂರ್‌ ಈ ಪ್ರಕರಣದ ಎ5 ಆರೋಪಿ. ಸಿದ್ದಾಂತ್ ಕಪೂರ್ ಎ5 ಆರೋಪಿ ಎಂದು ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಜೂನ್‌ 13 ರ ರಾತ್ರಿ ನಡೆದ ಪಾರ್ಟಿಯ ಕಂಪ್ಲೀಟ್ ಮಾಹಿತಿ ಎಫ್ಐಆರ್ ನಲ್ಲಿದೆ.

ಎಂ ಜಿ ರಸ್ತೆಯ ದಿ ಪಾರ್ಕ್ ಹೋಟೆಲ್‌ನ ಐ-ಬಾರ್ ನಲ್ಲಿ ಈ ಪಾರ್ಟಿ ನಡೆದಿತ್ತು. ಸುಮಾರು 30-40 ಜನ ಯುವಕ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಮಾದಕವಸ್ತು ಸೇವಿಸಿದ್ದರು. ಪೊಲೀಸರು ದಾಖಲಿಸಿದ ಎಫ್ಐಆರ್ ನಲ್ಲಿ ರೇವ್ ಪಾರ್ಟಿ ಎಂದು ಉಲ್ಲೇಖವಾಗಿದೆ. 

ರೇವ್ ಪಾರ್ಟಿ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತಂತೆ. ಓರ್ವ ಮಹಿಳಾ ಪಿಎಸ್ಐ ಜೊತೆಗೂಡಿ 10 ಜನ ಸಿಬ್ಬಂದಿಯೊಂದಿಗೆ ದಿ ಪಾರ್ಕ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತಡರಾತ್ರಿ 12.45 ರ ಸುಮಾರಿಗೆ ಹಲಸೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಐ ಬಾರ್ ನಲ್ಲಿ 35-40 ಜನ ಯುವಕ ಯುವತಿಯರು ಸೇರಿ ಪಾರ್ಟಿ ಮಾಡುತ್ತಿದ್ದರಂತೆ. 

ಮಾದಕವಸ್ತು ಸೇವನೆ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಸ್ಥಳ ಪರಿಶೀಲನೆ ವೇಳೆ ಪಾಕೆಟ್‌ನಲ್ಲಿ 4 ಗುಲಾಬಿ ಬಣ್ಣದ, 3 ನೀಲಿ ಬಣ್ಣದ ಒಟ್ಟು 7 ಮಾತ್ರೆಗಳು ಪತ್ತೆಯಾಗಿವೆ. ಮತ್ತೊಂದು ಪ್ಲಾಸ್ಟಿಕ್ ಪಾಕೆಟ್‌ನಲ್ಲಿ 5 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಈ ಪಾರ್ಟಿಯಲ್ಲಿ 14 ಜನ ಯುವತಿಯರು, 21 ಜನ ಯುವಕರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ. 

ಇದನ್ನೂ ಓದಿ: Jack Manju: ನಿರ್ಮಾಪಕ ಜಾಕ್‌ ಮಂಜು ಆಸ್ಪತ್ರೆಗೆ ದಾಖಲು

ಅಖಿಲ್ ಸೋನಿ, ಹರ್ಜೋತ್ ಸಿಂಗ್, ಅಖಿಲ್, ಹನಿ ಮತ್ತು ಸಿದ್ದಾಂತ್ ಕಪೂರ್ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ ಈ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡಿದವರು ಯಾರು? ಮಾದಕ ವಸ್ತುಗಳು ಅಲ್ಲಿಗೆ ಬಂದಿದ್ದು ಹೇಗೆ ಎಂಬುದು ಮಾತ್ರ ಇನ್ನೂ ತಿಳಿದು ಬಂದಿಲ್ಲವಂತೆ.

ಪ್ರಕರಣದಲ್ಲಿ ಎ1 ಆರೋಪಿ ಇಂದಿರಾನಗರದ ಅಖಿಲ್ ಸೋನಿ, ಎ2 ಪಂಜಾಬ್ ನ ಜಲಾಂದರ್ ಮೂಲದ ಹರ್ಜೋತ್ ಸಿಂಗ್, ಎ3 ಮಾಗಡಿ ರಸ್ತೆಯ ಅಖಿಲ್, ಎ4 ಬಿಟಿಎಂ ಲೇಔಟ್ ನಿವಾಸಿ ಹನಿ ಮತ್ತು ಎ5 ಮುಂಬೈನ ಜುಹು ನಿವಾಸಿ ಸಿದ್ದಾಂತ್ ಕಪೂರ್ ಆಗಿದ್ದಾರೆ. 

ಹಲಸೂರು ಇನ್ಸ್‌ಪೆಕ್ಟರ್ ಮಂಜುನಾಥ್ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದ್ದು, ಖಾಕಿ ಪಡೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News