Viral News: ಮಹಿಳೆಯನ್ನು ಕಚ್ಚಿ ತಿಂದುಹಾಕಿದ 20 ಬೆಕ್ಕುಗಳು..!

ಮಹಿಳೆಯೊಬ್ಬಳನ್ನು 20 ಬೆಕ್ಕುಗಳು ಕಚ್ಚಿ ತಿಂದುಹಾಕರುವ ಆಘಾತಕಾರಿ ಘಟನೆ ರಷ್ಯಾದಲ್ಲಿ ನಡೆದಿದೆ.

Written by - Puttaraj K Alur | Last Updated : Jun 21, 2022, 05:09 PM IST
  • ಮಹಿಳೆಯನ್ನು ಕಚ್ಚಿಕೊಂದು ತಿಂದುಹಾಕಿದ 20 ಬೆಕ್ಕುಗಳು
  • ರಷ್ಯಾದ ರೋಸ್ಟೋವ್ ಪ್ರದೇಶದ ಬಟಾಯ್ಸ್ಕ್‌ನಲ್ಲಿ ಶಾಕಿಂಗ್ ಘಟನೆ
  • ಬೆಕ್ಕುಗಳು ತಿಂದುಹಾಕಿದ ಅರ್ಧ ಮೃತದೇಹ ಕಂಡ ಪೊಲೀಸರಿಗೆ ಶಾಕ್
Viral News: ಮಹಿಳೆಯನ್ನು ಕಚ್ಚಿ ತಿಂದುಹಾಕಿದ 20 ಬೆಕ್ಕುಗಳು..! title=
ಮಹಿಳೆಯನ್ನು ತಿಂದುಹಾಕಿದ ಬೆಕ್ಕುಗಳು

ನವದೆಹಲಿ: ಮಹಿಳೆಯೊಬ್ಬಳನ್ನು 20 ಬೆಕ್ಕುಗಳು ಕಚ್ಚಿ ತಿಂದುಹಾಕರುವ ಆಘಾತಕಾರಿ ಘಟನೆ ರಷ್ಯಾದಲ್ಲಿ ನಡೆದಿದೆ. ಬೆಕ್ಕುಗಳಿಂದ ಸಾವನ್ನಪ್ಪಿದ 2 ವಾರಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ರಷ್ಯಾದ ರೋಸ್ಟೋವ್ ಪ್ರದೇಶದ ಬಟಾಯ್ಸ್ಕ್‌ನಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ. ಮಹಿಳೆ ಬೆಕ್ಕಿನ ತಳಿಗಾರ್ತಿಯಾಗಿದ್ದು, 20 ದೈತ್ಯ ಮೈನೆ ಕೂನ್ ವಂಶಾವಳಿಯ ಬೆಕ್ಕುಗಳನ್ನು ತನ್ನ ಮನೆಯಲ್ಲಿ ಸಾಕಿದ್ದಳು. ತನ್ನ ಮನೆಯಲ್ಲಿ ಕುಸಿದು ಬಿದ್ದ ನಂತರ ಆಕೆಯನ್ನು ಆ 20 ಬಿಕ್ಕುಗಳು ಸೇರಿಕೊಂಡು ಕಚ್ಚಿ ಕೊಂದುಹಾಕಿವೆ. ಬಳಿಕ ಆಕೆಯ ದೇಹವನ್ನು ತಿಂದು ತೇಗಿವೆ.

ಇದನ್ನೂ ಓದಿ: Sergey Brin Divorce: ವಿಚ್ಛೇದನಕ್ಕೆ ನಿರ್ಧರಿಸಿದ ಗೂಗಲ್ ಸಹ-ಸಂಸ್ಥಾಪಕ & ವಿಶ್ವದ 6ನೇ ಶ್ರೀಮಂತ..!

ಮಹಿಳೆ 2 ವಾರವಾದರೂ ಮನೆಯಿಂದ ಹೊರಬಂದಿರಲಿಲ್ಲ. ಆಕೆ ಕೆಲಸ ಮಾಡುತ್ತಿದ್ದ ಕಚೇರಿ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಮನೆ ತಲುಪಿದ ಪೊಲೀಸರು ಬಾಗಿಲು ಒಡೆದು ಒಳಪ್ರವೇಶಿಸಿದಾಗ ಶಾಕ್ ಆಗಿದ್ದರು. 20 ಹಸಿದ ಬೆಕ್ಕುಗಳು ಮಹಿಳೆಯ ಅರ್ಧದಷ್ಟು ದೇಹವನ್ನು ತಿಂದು ಮುಗಿಸಿದ್ದವು. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕಂಡು ಪೊಲೀಸರು ಗಾಬರಿಯಾಗಿದ್ದಾರೆ.  

‘ಮಹಿಳೆಯ ದೇಹದ ಅವಶೇಷಗಳು ಕೊಳೆಯಲು ಪ್ರಾರಂಭಿಸಿದ್ದರಿಂದ 2 ವಾರಗಳ ಹಿಂದೆಯೇ ಮಹಿಳೆ ಸಾವನ್ನಪ್ಪಿರಬೇಕೆಂದು’ ಪೊಲೀಸರು ಹೇಳಿದ್ದಾರೆ. ‘ಬೆಕ್ಕುಗಳನ್ನು 2 ವಾರಗಳ ಕಾಲ ಮನೆಯಲ್ಲಿಯೇ ಒಂಟಿಯಾಗಿ ಬಿಡಲಾಗಿತ್ತು. ಹೀಗಾಗಿ ಅವುಗಳಿಗೆ ತಿನ್ನಲು ಯಾವುದೇ ಆಹಾರ ಇರಲಿಲ್ಲ. ಬೆಕ್ಕುಗಳು ತುಂಬಾ ಹಸಿದಿದ್ದವು. ಹೀಗಾಗಿ ಅವರು ಮಹಿಳೆಯನ್ನು ಕಚ್ಚಿ ಕಚ್ಚಿ ಸಾಯಿಸಿ, ಆಮೇಲೆ ಆಕೆಯನ್ನು ತಿಂದಿರಬೇಕೆಂದು ಪ್ರಾಣಿ ರಕ್ಷಣಾ ತಜ್ಞರು ತಿಳಿಸಿದ್ದಾರೆ. ತಾನೇ ಪ್ರೀತಿಯಿಂದ ಸಾಕಿದ ಬೆಕ್ಕುಗಳಿಂದಲೇ ಮಹಿಳೆ ಸಾವನ್ನಪ್ಪಿರುವ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಇದನ್ನೂ ಓದಿ: ನವಜಾತ ಶಿಶುವಿನ ತಲೆ ಕತ್ತರಿಸಿ ತಾಯಿಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News