Maharashtra New CM : ನೂತನ 'ಮಹಾ' ಸಿಎಂ ಶಿಂಧೆಗೆ ವಿಭಿನ್ನವಾಗಿ ಅಭಿನಂದಿಸಿದ ಶರದ್ ಪವಾರ್!

 ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಏಕನಾಥ್ ಶಿಂಧೆಗೆ ಅಭಿನಂದಿಸಿದ್ದಾರೆ. ಸತಾರಾದಿಂದ ಶಿಂಧೆ ಮುಖ್ಯಮಂತ್ರಿಯಾಗುತ್ತಿರುವುದು ನನಗೆ ಖುಷಿ ತಂದಿದೆ ಎಂದು ತಿಳಿಸಿದ್ದಾರೆ.

Written by - Channabasava A Kashinakunti | Last Updated : Jun 30, 2022, 07:44 PM IST
  • ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣವಚನ
  • ಏಕನಾಥ್ ಶಿಂಧೆಗೆ ಅಭಿನಂದಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್
  • ಸಾತಾರ್ಕರ್ ಸಿಎಂ ಆಗಿ ಆಯ್ಕೆಯಾಗಿದ್ದಕ್ಕೆ ಪವಾರ್ ಖುಷ್!
Maharashtra New CM : ನೂತನ 'ಮಹಾ' ಸಿಎಂ ಶಿಂಧೆಗೆ ವಿಭಿನ್ನವಾಗಿ ಅಭಿನಂದಿಸಿದ ಶರದ್ ಪವಾರ್! title=

Sharad Pawar On Maharashtra New CM : ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು (ಗುರುವಾರ) ಸಂಜೆ 7.30ಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.  ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಏಕನಾಥ್ ಶಿಂಧೆಗೆ ಅಭಿನಂದಿಸಿದ್ದಾರೆ. ಸತಾರಾದಿಂದ ಶಿಂಧೆ ಮುಖ್ಯಮಂತ್ರಿಯಾಗುತ್ತಿರುವುದು ನನಗೆ ಖುಷಿ ತಂದಿದೆ ಎಂದು ತಿಳಿಸಿದ್ದಾರೆ.

ಶರದ್ ಪವಾರ್ ಹೇಳಿದ್ದೇನು?

ಈ ಕುರಿತು ಟ್ವೀಟ್ ಮಾಡಿದ ಶರದ್ ಪವಾರ್, 'ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಏಕನಾಥ್ ಶಿಂಧೆ ಅವರಿಗೆ ಅಭಿನಂದನೆಗಳು! ಅವರಿಂದ ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಿಸಲ್ಪಡುತ್ತದೆ ಎಂಬ ಸಂಪೂರ್ಣ ಭರವಸೆ ಇದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ : 'ಮಹಾ' ಸಿಎಂ ಆಗಿ ಏಕನಾಥ್ ಶಿಂಧೆ ಹೆಸರು ಘೋಷಣೆ!

ಸಾತಾರ್ಕರ್ ಸಿಎಂ ಆಗಿ ಆಯ್ಕೆಯಾಗಿದ್ದಕ್ಕೆ ಪವಾರ್ ಖುಷ್!

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮ ಮುಂದಿನ ಟ್ವೀಟ್‌ನಲ್ಲಿ ದಿವಂಗತ ಯಶವಂತರಾವ್ ಚವಾಣ್ ಬಗ್ಗೆ, ಬಾಳಾಸಾಹೇಬ್ ಭೋಸಲೆ ಮತ್ತು ಪೃಥ್ವಿರಾಜ್ ಚವಾಣ್ ನಂತರ ಮತ್ತೊಬ್ಬ ಸಾತಾರ್ಕರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸಿಎಂ ಆಗಿ ಪ್ರಮಾಣ ವಚನ ಶಿಂಧೆ

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಬಿಗ್ ನ್ಯೂಸ್ ನೀಡಿದರು. ಆ ಮೂಲಕ ನೂತನ ಸಿಎಂ ಆಗಿ ಇಂದು (ಗುರುವಾರ) ಶಿಂಧೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ನಾವು ಸಂಪೂರ್ಣ ಬಿಜೆಪಿ ಶಾಸಕರು, ಶಿಂಧೆ ನೇತೃತ್ವದ ಗುಂಪು, 16 ಪಕ್ಷೇತರ ಮತ್ತು ಇತರರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ, ಅವರಲ್ಲಿ ಹಲವರು ಇನ್ನೂ ನಮ್ಮೊಂದಿಗೆ ಇದ್ದಾರೆ ಎಂದು ಮಾಜಿ ಸಿಎಂ ಫಡ್ನವೀಸ್ ಹೇಳಿದರು. ಇಂದು ರಾತ್ರಿ 7.30ಕ್ಕೆ ಶಿಂಧೆ ಒಬ್ಬರೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಎರಡೂ ಕಡೆಯ ಶಾಸಕರಿಗೆ ಅವಕಾಶ ಕಲ್ಪಿಸಲು ಸಚಿವ ಸಂಪುಟ ವಿಸ್ತರಣೆಯಾಗಲಿದೆ.

ಹಿಂದಿನ ಸರ್ಕಾರದ ಕಳೆದ 30 ತಿಂಗಳಿನಿಂದ ಪ್ರಾಯೋಗಿಕವಾಗಿ ಸ್ಥಗಿತಗೊಂಡಿರುವ ರಾಜ್ಯದ ಪ್ರಗತಿ ಮತ್ತು ಅಭಿವೃದ್ಧಿಗೆ ಶ್ರಮಿಸುವುದಾಗಿ ಶಿಂಧೆ ಹೇಳಿದ್ದಾರೆ. ಬಾಹಾಸಾಹೇಬ್ ಠಾಕ್ರೆ ಅವರ ಹಿಂದುತ್ವದ ಆದರ್ಶಗಳನ್ನು ಅನುಸರಿಸುವುದಾಗಿ ಪುನರುಚ್ಚರಿಸಿದರು. ತಮ್ಮ ಸಂಭಾವ್ಯ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಅವರು ಬಿಜೆಪಿ ಮತ್ತು ಫಡ್ನವೀಸ್‌ಗೆ ಧನ್ಯವಾದ ತಿಳಿಸಿದರು.

ಇದನ್ನೂ ಓದಿ : Eknath Shinde Profile: ಒಂದು ಕಾಲದ ಆಟೋ ಡ್ರೈವರ್‌.. ಇಂದು ಮಹಾರಾಷ್ಟ್ರದ ಸಿಎಂ

ಇನ್ನೂ ಈ ಬಗ್ಗೆ ಮಾತನಾಡಿದ ಫಡ್ನವಿಸ್, ನಾನು ಸರ್ಕಾರದಿಂದ ಹೊರಗುಳಿಯುತ್ತೇನೆ, ಆದರೆ ಹೊಸ ಸರ್ಕಾರವನ್ನು ಎಲ್ಲಾ ರಂಗಗಳಲ್ಲಿ ಯಶಸ್ವಿಯಾಗಲು ನಾನು ಎಲ್ಲ ರೀತಿಯಿಂದ ಕೈ ಜೋಡಿಸುತ್ತಾನೆ ಮತ್ತು ಕಳೆದ ಎರಡೂವರೆ ವರ್ಷಗಳಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಪುನರಾರಂಭಿಸುತ್ತೇನೆ. ಕಳೆದ 9 ದಿನಗಳಲ್ಲಿ, ಬಂಡಾಯ ಪಾಳೆಯವು ಫಡ್ನವಿಸ್ ಹೊಸ ಸಿಎಂ, ಶಿಂಧೆ ಉಪ ಮುಖ್ಯಮಂತ್ರಿ ಎಂದು ಪಟ್ಟು ಹಿಡಿದಿತ್ತು, ಆದರೆ ಇತ್ತೀಚಿನ ಬೆಳವಣಿಗೆಗಳು ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News