ಕಳಪೆ ಫಾರ್ಮ್‌ನಲ್ಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರರು: ಇವರಿಗೆ ನಿವೃತ್ತಿಯೇ ಕೊನೆ ಆಯ್ಕೆ!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021ರ ಫೈನಲ್‌ನಲ್ಲಿ ಆಡಿದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ನವೆಂಬರ್ 2021 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಕಾರಣದಿಂದ ಇಶಾಂತ್ ಶರ್ಮಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. 

Written by - Bhavishya Shetty | Last Updated : Jul 6, 2022, 12:21 PM IST
  • ಸಾಕಷ್ಟು ಬದಲಾವಣೆ ಕಂಡ ಟೀಂ ಇಂಡಿಯಾ
  • ಮೂವರು ಆಟಗಾರರಿಗೆ ಸಿಗುತ್ತಿಲ್ಲ ತಂಡದಲ್ಲಿ ಸ್ಥಾನ
  • ಆಯ್ಕೆ ಪಟ್ಟಿಯಿಂದಲೇ ಅಳಿಸಿಹೋಗಿದೆ ಈ ಆಟಗಾರರ ಹೆಸರು
ಕಳಪೆ ಫಾರ್ಮ್‌ನಲ್ಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರರು: ಇವರಿಗೆ ನಿವೃತ್ತಿಯೇ ಕೊನೆ ಆಯ್ಕೆ!  title=
Team India

ಕಳೆದ ಒಂದು ವರ್ಷದಲ್ಲಿ ಟೀಂ ಇಂಡಿಯಾ ಸಾಕಷ್ಟು ಬದಲಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಹಲವು ಯುವ ಆಟಗಾರರು ಆಡುವ ಅವಕಾಶ ಪಡೆಯುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021 ರ ಅಂತಿಮ ಪಂದ್ಯವನ್ನು ವಿರಾಟ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಡಿದ್ದು, ನಂತರ ತಂಡದಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಈ ಬದಲಾವಣೆಗಳಿಂದಾಗಿ, ತಂಡದಿಂದ ಕೆಲವರ ಹೆಸರು ಅಳಿಸಿಹೋಗಿದೆ. 

ಇದನ್ನೂ ಓದಿ: Paytm ಬಳಕೆದಾರರೇ ಎಚ್ಚರ.! Cash Back ಆಸೆಗಾಗಿ ಬಿಲ್ ಪಾವತಿಸಿದರೆ ಖಾತೆಯೇ ಖಾಲಿಯಾಗಲಿದೆ ..!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021ರ ಫೈನಲ್‌ನಲ್ಲಿ ಆಡಿದ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ನವೆಂಬರ್ 2021 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಕಳಪೆ ಫಾರ್ಮ್ ಮತ್ತು ಫಿಟ್ನೆಸ್ ಕಾರಣದಿಂದ ಇಶಾಂತ್ ಶರ್ಮಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. ಇಶಾಂತ್ ಶರ್ಮಾ ತಂಡದಲ್ಲಿ ಪುನರಾಗಮನ ಮಾಡುವುದು ಕೂಡ ಕಷ್ಟ, ಈಗ ಅವರ ಸ್ಥಾನದಲ್ಲಿ ಯುವ ಬೌಲರ್‌ಗಳು ಅವಕಾಶ ಪಡೆಯುತ್ತಿದ್ದಾರೆ. ಇಶಾಂತ್ ಶರ್ಮಾ ಭಾರತ ಪರ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 311 ವಿಕೆಟ್ ಪಡೆದಿದ್ದಾರೆ.

ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅತ್ಯಂತ ಕಳಪೆ ಫಾರ್ಮ್‌ನೊಂದಿಗೆ ಆಟವಾಡುತ್ತಿದ್ದಾರೆ. ಬಹಳ ದಿನಗಳಿಂದ ಉತ್ತಮ ಬ್ಯಾಟಿಂಗ್‌ ಮಾಡುತ್ತಿಲ್ಲ. ಇದೀಗ ತಂಡದಲ್ಲಿ ಅವರ ಸ್ಥಾನವನ್ನು ಯುವ ಆಟಗಾರರು ಪಡೆದುಕೊಂಡಿದ್ದಾರೆ. ಅವರ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.  ಈ ಆಟಗಾರನ ವೃತ್ತಿಜೀವನದ ಮೇಲೆ ಬ್ರೇಕ್ ಹಾಕಿದಂತೆ ಭಾಸವಾಗುತ್ತಿದೆ. ಅಜಿಂಕ್ಯ ರಹಾನೆ ಭಾರತ ತಂಡದ ಪರ 82 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಸೇರಿದಂತೆ 4931 ರನ್ ಬಾರಿಸಿದ್ದಾರೆ. ಇದೀಗ ಅಜಿಂಕ್ಯ ರಹಾನೆ ಟೆಸ್ಟ್ ತಂಡಕ್ಕೆ ವಾಪಸಾಗುವುದು ತುಂಬಾ ಕಷ್ಟ ಎನಿಸುತ್ತಿದೆ.

ಇದನ್ನೂ ಓದಿ: Chandrashekhar Guruji Murder: ಗುರೂಜಿ ಹಂತಕರು ಯಾರು? ಕೊಲೆಗೆ ಕಾರಣವೇನು..?

ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಹಾ ಕೂಡ ತಂಡದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ. ರಿಷಭ್ ಪಂತ್ ಮತ್ತು ಕೆಎಸ್ ಭರತ್ ಟೀಂ ಇಂಡಿಯಾದ ಆಯ್ಕೆಗಾರರ ​​ಮೊದಲ ಆಯ್ಕೆಯಾಗಿದ್ದು, ಈ ಕಾರಣದಿಂದಾಗಿ ವೃದ್ಧಿಮಾನ್ ಸಹಾಗೆ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಅವರು 2010 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ತಮ್ಮ ತಂಡದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಪರ 40 ಟೆಸ್ಟ್ ಪಂದ್ಯಗಳಲ್ಲಿ 29.41ರ ಸರಾಸರಿಯಲ್ಲಿ 1353 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಶ್ರೀಲಂಕಾ ಸರಣಿಗೆ ವೃದ್ಧಿಮಾನ್ ಸಹಾ ಆಯ್ಕೆಯಾಗದೇ ಇದ್ದಾಗ ಕೋಚ್ ರಾಹುಲ್ ದ್ರಾವಿಡ್ ನಿವೃತ್ತಿಯಾಗುವಂತೆ ಸಲಹೆ ನೀಡಿದ್ದರು ಎಂದು ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News