Viral Video: ಲುಲು ಮಾಲ್‌ನಲ್ಲಿ ನಮಾಜ್ ವಿಡಿಯೋ ವೈರಲ್‌, ಹಿಂದೂ ಸಂಘಟನೆಗಳ ಪ್ರಶ್ನೆ

ಲಕ್ನೋದ ಅತಿದೊಡ್ಡ ಲುಲು ಮಾಲ್‌ನಲ್ಲಿ ನಮಾಜ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮಾಲ್‌ನಲ್ಲಿ ನಮಾಜ್ ಮಾಡುತ್ತಿರುವುದನ್ನು ಹಿಂದೂ ಸಂಘಟನೆಗಳು ಪ್ರಶ್ನಿಸಿವೆ.

Written by - Puttaraj K Alur | Last Updated : Jul 14, 2022, 12:33 PM IST
  • ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿ ನಮಾಜ್‌ ಮಾಡಿರುವ ವಿಡಿಯೋ ವೈರಲ್
  • ಮಾಲ್‌ನಲ್ಲಿನ ಧಾರ್ಮಿಕ ಚಟುವಟಿಕೆ‌ ನಡೆಸಿರುವ ಬಗ್ಗೆ ಹಿಂದೂ ಸಂಘಟನೆಳಿಂದ ಪ್ರಶ್ನೆ
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ನಮಾಜ್‌ ಮಾಡುತ್ತಿರುವ ವಿಡಿಯೋ
Viral Video: ಲುಲು ಮಾಲ್‌ನಲ್ಲಿ ನಮಾಜ್ ವಿಡಿಯೋ ವೈರಲ್‌, ಹಿಂದೂ ಸಂಘಟನೆಗಳ ಪ್ರಶ್ನೆ title=
ಮಾಲ್‌ನಲ್ಲಿ ನಮಾಜ್‌ ವಿಡಿಯೋ ವೈರಲ್

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಜುಲೈ 11ರಂದು ಲುಲು ಮಾಲ್ ಉದ್ಘಾಟನೆಗೊಂಡಿತ್ತು. ಇದನ್ನು ಲಕ್ನೋದ ಅತಿದೊಡ್ಡ ಮಾಲ್ ಎಂದು ಹೇಳಲಾಗುತ್ತದೆ. ಏತನ್ಮಧ್ಯೆ, ಈ ಮಾಲ್ ಈಗ ವಿವಾದಕ್ಕೆ ಒಳಗಾಗಿದೆ. ಮಾಲ್ ಒಳಗೆ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  

ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ನೆಲದ ಮೇಲೆ ಕುಳಿತು ನಮಾಜ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಮಾಲ್‌ನಲ್ಲಿ ಧಾರ್ಮಿಕ ಚಟುವಟಿಕೆಗಳು ಹೇಗೆ ನಡೆಯುತ್ತವೆ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮಾಲ್‌ನಲ್ಲಿ ನಮಾಜ್‌ ಮಾಡಿರುವುದನ್ನು ಹಿಂದೂ ಸಂಘಟನೆಗಳು ಪ್ರಶ್ನಿಸಿವೆ. 

ಇದನ್ನೂ ಓದಿ: Free Booster Dose : '18 ವರ್ಷ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್ ಡೋಸ್'

ಹಿಂದೂ ಮಹಾಸಭಾ ಪ್ರಕಾರ, ಲುಲು ಮಾಲ್ ಈ ಹಿಂದೆಯೂ ಇಂತಹ ವಿವಾದಗಳಲ್ಲಿ ಸಿಲುಕಿಕೊಂಡಿತ್ತು. ಇದು ಪದೇ ಪದೇ ಮರುಕಳಿಸುತ್ತಲೇ ಇದೆ ಎಂದು ಕಿಡಿಕಾರಿದೆ. ಸಂಘಟನೆ ಮುಖಂಡ ಶಿಶಿರ್ ಚತುರ್ವೇದಿ ಮಾತನಾಡಿ, ʼಲುಲು ಮಾಲ್ ಈಗ ತನ್ನ ನಿಜಬಣ್ಣವನ್ನು ತೋರಿಸುತ್ತಿದೆ. ಇದೇ ರೀತಿಯ ಘಟನೆಗಳಿಂದಾಗಿ ಈ ಮಾಲ್ ಈಗಾಗಲೇ ಸುದ್ದಿಯಲ್ಲಿದೆ. ಈಗ ಉತ್ತರಪ್ರದೇಶದಲ್ಲಿಯೂ ಅದನ್ನೇ ಮುಂದುವರೆಸಿದೆ. ಇದು ಸರಿಯಲ್ಲವೆಂದುʼ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೀದಿಯಾಗಿ ಬಳಕೆಯಾಗುತ್ತಿರುವ ಪ್ರತಿಯೊಂದು ಮಾಲ್ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದೂ ಮಹಾಸಭಾ ಆಗ್ರಹಿಸಿದೆ. 
ವಿವಾದದ ಕುರಿತು ಲುಲು ಮಾಲ್‌ ಸ್ಪಷ್ಟನೆ ನೀಡಿದ್ದು, ʼಈ ವಿಡಿಯೋದ ಬಗ್ಗೆ ನಮಗೆ ತಿಳಿದಿಲ್ಲವೆಂದು ಹೇಳಿದೆ. ಮಾಲ್‌ನಲ್ಲಿ ನಮಾಜ್‌ ಮಾಡಿದವರನ್ನು ಯಾರೆಂದು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಮಾಲ್ ಒಳಗೆ ಈ ರೀತಿ ಪ್ರಾರ್ಥನೆಗೆ ನಾವು ಅನುಮತಿ ನೀಡಿಲ್ಲ. ನಮ್ಮ ಗಮನಕ್ಕೆ ತಾರದೇ ಈ ರೀತಿ ಮಾಡಲಾಗಿದೆʼ ಎಂದು ಹೇಳಿದೆ.

22 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಮಾಲ್ ಅನ್ನು ಜುಲೈ 11ರಂದು ಉದ್ಘಾಟನೆಗೊಂಡಿತ್ತು. ಗಾಲ್ಫ್ ಸಿಟಿಯ ಅಮರ್ ಶಹೀದ್ ಪಥ್‌ನಲ್ಲಿರುವ ಈ ಮಾಲ್ ಲುಲು ಹೈಪರ್‌ಮಾರ್ಕೆಟ್, ಲುಲು ಫ್ಯಾಶನ್ ಸ್ಟೋರ್ ಮತ್ತು ಲುಲು ಕನೆಕ್ಟ್ ಸೇರಿದಂತೆ ದೇಶದ ಕೆಲವು ದೊಡ್ಡ ಬ್ರ್ಯಾಂಡ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀಗೆ ಈ ಭಾಷೆ ಕಲಿಯಬೇಕಂತೆ..!

ಲಕ್ನೋದಲ್ಲಿರುವ ಈ ಮಾಲ್ 15 ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ಹೊಂದಿದೆ. ಜೊತೆಗೆ 25 ಬ್ರಾಂಡ್ ಔಟ್‌ಲೆಟ್‌ಗಳನ್ನು ಹೊಂದಿರುವ ಫುಡ್ ಕೋರ್ಟ್ ಜೊತೆಗೆ 1,600 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಆಭರಣಗಳು, ಫ್ಯಾಷನ್ ಮತ್ತು ಪ್ರೀಮಿಯಂ ವಾಚ್ ಬ್ರ್ಯಾಂಡ್‌ಗಳೊಂದಿಗೆ ಮೀಸಲಾದ ಮದುವೆಯ ಶಾಪಿಂಗ್‌ನ ಅತಿದೊಡ್ಡ ಸ್ಟೋರ್‌ಗಳನ್ನು ಹೊಂದಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News