ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ‍್ಯಕ್ಷೆ ಸೋನಿಯಾ ಗಾಂಧಿ ಇ.ಡಿ ವಿಚಾರಣೆಗೆ ಹೋಗುತ್ತಿರುವಾಗ ನಾನು ಹುಟ್ಟಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲವೆಂಬ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಗೆ ಬಿಜೆಪಿ ವ್ಯಂಗ್ಯವಾಡಿದೆ. #ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತಮ್ಮ ತಾಳಕ್ಕೆ ತಕ್ಕ ಹಾಗೆ ಖರ್ಗೆಯವರನ್ನು ಸಿದ್ದರಾಮಯ್ಯ ಈ ಬಣ ಕುಣಿಸುತ್ತಿದೆ’ ಎಂದು ಟೀಕಿಸಿದೆ.
‘ಸೋನಿಯಾ ಗಾಂಧಿಯವರು ಸಂಕಟದಲ್ಲಿದ್ದಾರೆಂಬ ಕಾರಣಕ್ಕಾಗಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಹುಟ್ಟುಹಬ್ಬವನ್ನೇ ನಿರಾಕರಿಸಿದ್ದಾರೆ. ಈ ಬಗ್ಗೆ ಖರ್ಗೆ ಬರೆದಿರುವುದು ತ್ಯಾಗ ಪತ್ರವೋ ಅಥವಾ ಉತ್ಸವದ ಭರಾಟೆಯಲ್ಲಿರುವವರಿಗೆ ನೀಡಿದ ಗುದ್ದೋ?’ ಎಂದು ಕುಟುಕಿದೆ.
ಇದನ್ನೂ ಓದಿ: ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿ ಪರಿಚಯಿಸಿದ್ದೇ ಕಾಂಗ್ರೆಸ್: ಬಿಜೆಪಿ ಆರೋಪ
ದಲಿತ ನಾಯಕರನ್ನು ಕಾಂಗ್ರೆಸ್ ಕೇವಲವಾಗಿ ನೋಡುತ್ತಿದೆ ಎಂಬುದಕ್ಕೆ ಮಲ್ಲಿಕಾರ್ಜುನ ಖರ್ಗೆಯವರ ಅಸಹಾಯಕ ಸ್ಥಿತಿಯೇ ಸಾಕ್ಷಿ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವಾಗಿರುವ ವ್ಯಕ್ತಿಯೆಂದರೆ ಅದು ಖರ್ಗೆ.
ಖರ್ಗೆ ಅವರು ದಲಿತರೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಹಣಿಯುತ್ತಿರುವುದೇ?#ಕಾಂಗ್ರೆಸ್‌ಕಲಹ
— BJP Karnataka (@BJP4Karnataka) July 20, 2022
‘ಮೂಲ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ವಲಸೆ ನಾಯಕ ಸಿದ್ದರಾಮಯ್ಯ ಬಣ "ಪಾಪಾ ಪಾಂಡು" ವಾಗಿಸಿದೆ. ತಮ್ಮ ತಾಳಕ್ಕೆ ತಕ್ಕ ಹಾಗೆ ಖರ್ಗೆಯವರನ್ನು ಸಿದ್ದರಾಮಯ್ಯ ಈ ಬಣ ಕುಣಿಸುತ್ತಿದೆ. ಅನಿವಾರ್ಯತೆ ಹೇಗಿದೆಯಂದರೆ ಖರ್ಗೆಯವರ "ಚಿರಂಜೀವಿ"ಯೇ ಈಗ ಸಿದ್ದರಾಮೋತ್ಸವದ ಸಿದ್ಧತಾ ಸಭೆಯಲ್ಲಿ ಭಾಗಿಯಾಗುವಂತಾಗಿದೆ’ ಎಂದು ಬಿಜೆಪಿ ಲೇವಡಿ ಮಾಡಿದೆ.
‘ದಲಿತ ನಾಯಕರನ್ನು ಕಾಂಗ್ರೆಸ್ ಕೇವಲವಾಗಿ ನೋಡುತ್ತಿದೆ ಎಂಬುದಕ್ಕೆ ಮಲ್ಲಿಕಾರ್ಜುನ್ ಖರ್ಗೆಯವರ ಅಸಹಾಯಕ ಸ್ಥಿತಿಯೇ ಸಾಕ್ಷಿ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹವಾಗಿರುವ ವ್ಯಕ್ತಿಯೆಂದರೆ ಅದು ಖರ್ಗೆ. ಖರ್ಗೆ ಅವರು ದಲಿತರೆಂಬ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಹಣಿಯುತ್ತಿರುವುದೇ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: 'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ'
‘ಒಂದು ಕಡೆ ಸಿದ್ದು ಬಣ, ಮತ್ತೊಂದೆಡೆ ಡಿಕೆಶಿ ಬಣ. 2 ಬಣಗಳ ಲೆಕ್ಕಾಚಾರ, ಸತ್ಯಕ್ಕೆ ದೂರವಿದೆ ಎಂದು ಬೇನಾಮಿ ಅಧ್ಯಕ್ಷೆಗೆ ತಿಳಿದಿದೆ. ಹೀಗಾಗಿಯೇ ಇಂತಹ ಹೇಳಿಕೆ ಹೊರಬರುತ್ತಿದೆ. ಈ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುರ್ಚಿಗಾಗಿ ಕಿತ್ತಾಡುತ್ತಿರುವ ಸಿದ್ದು ಹಾಗೂ ಡಿಕೆಶಿ ಅವರಿಗೆ ನೀಡಿದ ಗುದ್ದು ಎಂದು ಪರಿಗಣಿಸಬಹುದೇ?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಒಂದು ಕಡೆ ಸಿದ್ದು ಬಣ, ಮತ್ತೊಂದೆಡೆ ಡಿಕೆಶಿ ಬಣ. 2 ಬಣಗಳ ಲೆಕ್ಕಾಚಾರ, ಸತ್ಯಕ್ಕೆ ದೂರವಿದೆ ಎಂದು ಬೇನಾಮಿ ಅಧ್ಯಕ್ಷೆಗೆ ತಿಳಿದಿದೆ. ಹೀಗಾಗಿಯೇ ಇಂತಹ ಹೇಳಿಕೆ ಹೊರಬರುತ್ತಿದೆ.
ಈ ಹೇಳಿಕೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುರ್ಚಿಗಾಗಿ ಕಿತ್ತಾಡುತ್ತಿರುವ ಸಿದ್ದು ಹಾಗೂ ಡಿಕೆಶಿ ಅವರಿಗೆ ನೀಡಿದ ಗುದ್ದು ಎಂದು ಪರಿಗಣಿಸಬಹುದೇ?#ಕಾಂಗ್ರೆಸ್‌ಕಲಹ
— BJP Karnataka (@BJP4Karnataka) July 20, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.