ಬೆಂಗಳೂರು: ಸ್ಯಾಂಡಲ್‌ವುಡ್ ಘಮಲು ಹಾಲಿವುಡ್ ಅಂಗಳಕ್ಕೆ ಹರಡಲು ಕೌಂಟ್‌ಡೌನ್ ಶುರುವಾಗಿದ್ದು, ನಾಳೆ ‘ವಿಕ್ರಾಂತ್ ರೋಣ’ ಚಿತ್ರ ಕನ್ನಡ ಸಿನಿಮಾ ಒಂದನ್ನ ಹಾಲಿವುಡ್‌ಗೆ ಕೊಂಡೊಯ್ದ ಸಾಧನೆ ಮಾಡಲಿದೆ. ಇದರ ಜೊತೆಗೆ ‘ವಿಕ್ರಾಂತ್ ರೋಣ’ ಸಿನಿಮಾ ಭಾವನಾತ್ಮಕ ಬಂಧನಕ್ಕೂ ಸಾಕ್ಷಿಯಾಗುತ್ತಿರುವುದು, ನಟ ಕಿಚ್ಚ ಸುದೀಪ್ ಮೇಲಿನ ಅಭಿಮಾನಿಗಳ ಅಭಿಮಾನದ ಪ್ರತೀಕವಾಗಿದೆ.
ಅಂದಹಾಗೆ ‘ವಿಕ್ರಾಂತ್ ರೋಣ’ ಪೋಸ್ಟರ್‌ಗಳಲ್ಲಿ ಕಿಚ್ಚ ಸುದೀಪ್ ಅವರು ಮಾತ್ರ ಇಲ್ಲ. ಕಿಚ್ಚ ಸುದೀಪ್ ಅವರ ಜೊತೆಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಕೂಡ ಕಂಗೊಳಿಸುತ್ತಿದ್ದಾರೆ. ಕಿಚ್ಚ ಸುದೀಪ್ ಹಾಗೂ ಅಪ್ಪು ಅವರ ಸ್ನೇಹಕ್ಕೆ ಸಾಕ್ಷಿಯಾಗಿ ಉಳಿದಿಕೊಂಡಿದ್ದ ಫೋಟೋ ಇದೀಗ ಇಡೀ ಜಗತ್ತಿನಾದ್ಯಂತ ಪೋಸ್ಟರ್ ರೂಪ ಪಡೆದಿದೆ. ಹೀಗೆ ಅಪ್ಪು ಅಭಿಮಾನಿಗಳು ಕೂಡ ಕಿಚ್ಚ ಸುದೀಪ್ ಸಿನಿಮಾ ‘ವಿಕ್ರಾಂತ್ ರೋಣ’ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಅಪ್ಪು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ ನಟ ಕಿಚ್ಚ ಸುದೀಪ್ ಅವರು.
Much luv and hugs to all Appu fans for this sweet gesture .... 🙏🏼❤️ pic.twitter.com/E7H4Ez8xCT
— Kichcha Sudeepa (@KicchaSudeep) July 27, 2022
ಹೇಗಿತ್ತು ಕಿಚ್ಚನ ಥ್ಯಾಂಕ್ಸ್..!
ನಟ ಕಿಚ್ಚ ಸುದೀಪ್ ತಮ್ಮನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಗೌರವವನ್ನ ಕೊಡುತ್ತಾರೆ. ಅದರಲ್ಲೂ ಅಪ್ಪು ಅವರ ಅಭಿಮಾನಿಗಳ ಮೇಲೆ ಸುದೀಪ್ ಅವರಿಗೆ ಸಿಕ್ಕಾಪಟ್ಟೆ ಕಾಳಜಿ ಹಾಗೂ ಪ್ರೀತಿ. ಇದೇ ರೀತಿ ತಮ್ಮ ‘ವಿಕ್ರಾಂತ್ ರೋಣ’ ಸಿನಿಮಾಗೆ ಸಪೋರ್ಟ್ ಮಾಡುತ್ತಿರುವ ಅಪ್ಪು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಟ್ವೀಟ್ ಮೂಲಕ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
ಸುದೀಪ್ ಅವರ ಈ ಟ್ವೀಟ್ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರು ಮತ್ತು ನಟ ಕಿಚ್ಚ ಸುದೀಪ್ ಅವರ ನಡುವಿನ ಸ್ನೇಹ ಬಾಂಧವ್ಯದ ಪ್ರತಿಬಿಂಬವಾಗಿದೆ. ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಅಪ್ಪು ಅವರ ಜೊತೆಗಿರುವ ಕಟೌಟ್ ಫೋಟೋ ಶೇರ್ ಮಾಡಿ, ‘Much luv and hugs to all Appu fans for this sweet gesture’ ಎಂದು ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್. ಈ ಮೂಲಕ ಕನ್ನಡ ಸಿನಿಮಾ ರಂಗ ಮತ್ತೊಂದು ಮೈಲಿಗಲ್ಲಿಗೆ ಸಜ್ಜಾಗಿದೆ.
ಇದನ್ನೆಲ್ಲಾ ನೋಡ್ತಾ ಇದ್ರೆ, ಕನ್ನಡ ಸಿನಿಮಾ ರಂಗ ಹಾಲಿವುಡ್‌ನಲ್ಲೂ ಹವಾ ಸೃಷ್ಟಿಸೋದು ಪಕ್ಕಾ. ‘ವಿಕ್ರಾಂತ್ ರೋಣ’ ಮೂಲಕ ಹಾಲಿವುಡ್ ಅಂಗಳದಲ್ಲಿ ಕನ್ನಡ ಸಿನಿಮಾ ಸದ್ದು ಮಾಡಲಿದ್ದು, ಇದೇ ರೀತಿ ಮುಂದೆ ಕೂಡ ಮತ್ತಷ್ಟು ಸಿನಿಮಾಗಳು ಹಾಲಿವುಡ್ ಕದ ತಟ್ಟಲು ಸಿದ್ಧವಾಗುತ್ತಿವೆ. ಆದರೆ ಅದಕ್ಕೆಲ್ಲಾ ಮುನ್ನುಡಿ ಬರೆಯುತ್ತಿರುವ ‘ವಿಕ್ರಾಂತ್ ರೋಣ’ ಕನ್ನಡ ಸಿನಿಮಾಗಳ ತಾಕತ್ತನ್ನ ಆಂಗ್ಲರಿಗೆ ತೋರಿಸೋದು ಪಕ್ಕಾ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.