ದೇಶದ ಅತ್ಯಮೂಲ್ಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಕುಟುಂಬಕ್ಕೆ ಬೆದರಿಕೆ ಬಂದಿದೆ. ಆಂಟಿಲಿಯಾ ಪ್ರಕರಣದ ನಂತರ ಅಂಬಾನಿ ಕುಟುಂಬಕ್ಕೆ ಮತ್ತೆ ಬೆದರಿಕೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಡಿಸ್ಪ್ಲೇ ಸಂಖ್ಯೆಗೆ ಹಲವಾರು ಬೆದರಿಕೆ ಕರೆಗಳು ಬಂದಿದ್ದು, ಅದರಲ್ಲಿ ಕರೆ ಮಾಡಿದವರು ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: Viral News: ‘ನಾನು ತಂದೆಯಾಗಬೇಕು 2 ತಿಂಗಳು ರಜೆ ಕೊಡಿ’ ಎಂದ ನೌಕರನ ಅರ್ಜಿ ವೈರಲ್!
ಒಟ್ಟು 8 ಬೆದರಿಕೆ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಇದಾದ ಬಳಿಕ ಆಸ್ಪತ್ರೆಯ ಜನರು ಡಿಬಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಕರೆಯನ್ನು ಪರಿಶೀಲಿಸುತ್ತಿದ್ದಾರೆ.
2021 ರ ಆರಂಭದಲ್ಲಿ, ಮುಕೇಶ್ ಅಂಬಾನಿ ಅವರ ಮುಂಬೈ ಮನೆ ಆಂಟಿಲಿಯಾದ ಬಳಿ ಕಾರಿನಲ್ಲಿ 20 ಜೆಲಾಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವಾಹನದೊಳಗೆ ಒಂದು ಚೀಟಿಯೂ ಸಿಕ್ಕಿದ್ದು, ಅದರಲ್ಲಿ ಅಂಬಾನಿ ಕುಟುಂಬಕ್ಕೆ ಬೆದರಿಕೆ ಹಾಕಲಾಗಿತ್ತು. ಹಿರಿಯ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು, “ನಾವು ಆಸ್ಪತ್ರೆಯಿಂದ ದೂರು ಸ್ವೀಕರಿಸಿದ್ದೇವೆ ಮತ್ತು ಸದ್ಯ ಪರಿಶೀಲಿಸುತ್ತಿದ್ದೇವೆ. ಆಸ್ಪತ್ರೆಯ ಡಿಸ್ಪ್ಲೇ ನಂಬರ್ನಲ್ಲಿ ಕರೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಇಒ ಡಾ. ತರಂಗ್ ಜ್ಞಾನಚಂದಾನಿ, “ಅಪರಿಚಿತ ವ್ಯಕ್ತಿ 8 ಬೆದರಿಕೆ ಕರೆಗಳನ್ನು ಮಾಡಿದ್ದಾನೆ, ಅದರಲ್ಲಿ ಮುಖೇಶ್ ಅಂಬಾನಿ ಅವರಿಗೆ ಬೆದರಿಕೆ ಹಾಕಿದ್ದಾನೆ. ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವೂ ನಿಮ್ಮ ಮನೆ ಮೇಲೆ ತ್ರಿವರ್ಣ ಬಾವುಟ ಹಾರಿಸಿದ್ದೀರಾ? ಈ ರೀತಿ ಸರ್ಟಿಫಿಕೆಟ್ ಡೌನ್ಲೋಡ್ ಮಾಡಿ
ಇನ್ನು ಬೆದರಿಕೆ ಕರೆ ಬರುವ ಮುನ್ನ ಅಂಬಾನಿ ಕುಟುಂಬ ಕೂಡ ಸ್ವಾತಂತ್ರ್ಯ ಸಂಭ್ರಮ ಆಚರಿಸಿತ್ತು. ಮುಖೇಶ್ ಅಂಬಾನಿ ಅವರು ಪತ್ನಿ ನೀತು ಅಂಬಾನಿ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ. ಇದರ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್ಐ ಕೂಡ ಬಿಡುಗಡೆ ಮಾಡಿದ್ದು, ಅದರಲ್ಲಿ ಪೃಥ್ವಿ , ತಾತ ಮುಖೇಶ್ ಅಂಬಾನಿ ಅವರ ಮಡಿಲಲ್ಲಿ ಕುಳಿತುಕೊಂಡಿದ್ದಾರೆ. ನೀತಾ ಅಂಬಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ. ಅವರ ಹಿಂದೆ ರಿಲಯನ್ಸ್ ಗ್ರೂಪ್ನ ಉದ್ಯೋಗಿಗಳು ಕಾಣಿಸಿಕೊಂಡಿದ್ದಾರೆ ಮತ್ತು ಮಾ ತುಜೆ ಸಲಾಮ್ ಹಾಡು ಪ್ಲೇ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.