ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಐಟಿಬಿಪಿ ಸಿಬ್ಬಂದಿ ತುಂಬಿದ್ದ ಬಸ್ ಅಪಘಾತಕ್ಕೀಡಾಗಿದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, 39 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ವಿಫಲವಾದ ನಂತರ ನದಿಯ ದಡಕ್ಕೆ ಬಿದ್ದಿದೆ ಎಂದು ವರದಿ ಆಗಿದೆ. 39 ಯೋಧರಲ್ಲಿ 37 ಮಂದಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ)ಗೆ ಸೇರಿದವರು. ಉಳಿದ ಇಬ್ಬರು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸೇರಿದವರು ಎಂದು ತಿಳಿದುಬಂದಿದೆ.
ಭದ್ರತಾ ಪಡೆಗಳ 39 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸಿವಿಲ್ ಬಸ್ ಚಂದನವಾಡಿಯಿಂದ ಪಹಲ್ಗಾಮ್ ಕಡೆಗೆ ಸಾಗುತ್ತಿತ್ತು ಎಂದು ವರದಿ ಆಗಿದೆ. ಹಲವು ಯೋಧರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ರಕ್ಷಣೆಗಾಗಿ ಕಮಾಂಡೋಗಳನ್ನು ಕಳುಹಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
#WATCH Bus carrying 37 ITBP personnel and two J&K Police personnel falls into riverbed in Pahalgam after its brakes reportedly failed, casualties feared#JammuAndKashmir pic.twitter.com/r66lQztfKu
— ANI (@ANI) August 16, 2022
ಇದನ್ನೂ ಓದಿ- "ನನಗೆ 2020 ರಲ್ಲಿ ಸಿಎಂ ಆಗಲು ಇಷ್ಟವಿರಲಿಲ್ಲ, ಆದಾಗ್ಯೂ ನನಗೆ ಒತ್ತಡ ಹೇರಲಾಯಿತು"
ಈ ಅಪಘಾತ ಸಂಭವಿಸಿದ ಸ್ಥಳವು ಪಹಲ್ಗಾಮ್ನಿಂದ 16 ಕಿಮೀ ದೂರದಲ್ಲಿದೆ, ಈ ಸ್ಥಳವನ್ನು ಅಮರನಾಥ ಯಾತ್ರೆಯ ಪ್ರಾರಂಭದ ಸ್ಥಳವೆಂದು ಪರಿಗಣಿಸಲಾಗಿದೆ. ಅಪಘಾತದಲ್ಲಿ ಬಲಿಯಾದ ಈ ಯೋಧರು ಅಮರನಾಥ ಯಾತ್ರಾ ಪ್ರದೇಶದಲ್ಲಿ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ- GAIL Recruitment 2022 : GAIL ನಲ್ಲಿ 282 ಖಾಲಿ ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಪರಿಶೀಲಿಸಿ
ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಬ್ರೇಕ್ ವೈಫಲ್ಯದಿಂದ ಚಾಲಕನು ವಾಹನದ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಂಡನು. ಇದರಿಂದಾಗಿ ಸೈನಿಕರಿಂದ ತುಂಬಿದ ಬಸ್ ಪಲ್ಟಿ ಹೊಡೆದು ನೇರವಾಗಿ ಕಮರಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಅಪಘಾತದ ಬಗ್ಗೆ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.