Vastu Tips For Money: ಸರಿಯಾದ ದಿಕ್ಕಿನಲ್ಲಿಟ್ಟ ಹಣ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು

Treasury Tips - ತನ್ನ ಜೀವನದಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ಇರಬೇಕು ಅಂತ ಯಾರಿಗೆ ತಾನೇ ಅನಿಸುವುದಿಲ್ಲ ಹೇಳಿ? ಆದರೆ, ಹಲವು ಬಾರಿ ಸಾಕಷ್ಟು ಶ್ರಮ ಪಟ್ಟರೂ ಕೂಡ ವ್ಯಕ್ತಿಯ ಮನೆಯಲ್ಲಿ ಏಳಿಗೆಯೇ ಸಂಭವಿಸುವುದಿಲ್ಲ. ಇದಕ್ಕೆ ಕಾರಣ ಎಂದರೆ ಮನೆಯಲ್ಲಿನ ವಾಸ್ತು ದೋಷ.

Written by - Nitin Tabib | Last Updated : Aug 22, 2022, 10:52 PM IST
  • ವಾಸ್ತು ಶಾಸ್ತ್ರದ ಪ್ರಕಾರ, ಹಣವನ್ನು ಸರಿಯಾದ ದಿಕ್ಕು ಹಾಗೂ ಸರಿಯಾದ ಜಾಗದಲ್ಲಿ ಇಡದೆ ಹೋದಲ್ಲಿ,
  • ಅದು ಹಣದ ನಷ್ಟ ಮತ್ತು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ.
  • ಸಾಮಾನ್ಯವಾಗಿ ವಾಸ್ತು ಶಾಸ್ತ್ರದಲ್ಲಿ, ಎಲ್ಲವನ್ನೂ ಒಂದು ನಿರ್ದಿಷ್ಟ ಜಾಗದಲ್ಲಿ ಇರಿಸಲು ಸಲಹೆ ನೀಡಲಾಗುತ್ತದೆ.
Vastu Tips For Money: ಸರಿಯಾದ ದಿಕ್ಕಿನಲ್ಲಿಟ್ಟ ಹಣ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸಬಹುದು title=
Treasury Vastu Tips

Vastu Tips For Treasury - ವಾಸ್ತು ಶಾಸ್ತ್ರದ ಪ್ರಕಾರ, ಹಣವನ್ನು ಸರಿಯಾದ ದಿಕ್ಕು ಹಾಗೂ ಸರಿಯಾದ ಜಾಗದಲ್ಲಿ ಇಡದೆ ಹೋದಲ್ಲಿ, ಅದು ಹಣದ ನಷ್ಟ ಮತ್ತು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಾಸ್ತು ಶಾಸ್ತ್ರದಲ್ಲಿ, ಎಲ್ಲವನ್ನೂ ಒಂದು ನಿರ್ದಿಷ್ಟ ಜಾಗದಲ್ಲಿ ಇರಿಸಲು ಸಲಹೆ ನೀಡಲಾಗುತ್ತದೆ. ಪ್ರತಿಯೊಂದು ದಿಕ್ಕು ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಯಾವುದೇ ವಸ್ತುವನ್ನು ಸರಿಯಾಗಿ ಇರಿಸದಿದ್ದರೆ, ಅದರ ನಕಾರಾತ್ಮಕ ಅಥವಾ ವಿರುದ್ಧ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.

ವಾಸ್ತು ಶಾಸ್ತ್ರದಲ್ಲಿ ಹಣದ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಹಣ ಅಥವಾ ತಿಜೋರಿಯನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ, ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ವ್ಯಕ್ತಿಯ ಆರ್ಥಿಕ ಸ್ಥಿತಿಯು ಹದಗೆಡಲು ಪ್ರಾರಂಭಿಸುತ್ತದೆ, ಮನೆಯಲ್ಲಿ ಯಾವುದೇ ಏಳಿಗೆ ಇರುವುದಿಲ್ಲ ಮತ್ತು ವ್ಯಕ್ತಿಯು ಸಾಲದಲ್ಲಿ ಮುಳುಗುತ್ತಾನೆ. ವಾಸ್ತು ಪ್ರಕಾರ ಹಣದ ಬೀರು ಅಥವಾ ತಿಜೋರಿಯನ್ನು ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮರೆತೂ ಕೂಡ ಈ ದಿಕ್ಕಿನಲ್ಲಿ ತಿಜೋರಿ ಇಡಬೇಡಿ
ಮನೆಯಲ್ಲಿನ ಕೆಲ ಜಾಗಗಳಲ್ಲಿ ಎಂದಿಗೂ ಕೂಡ ತಿಜೋರಿಯನ್ನು ಇರಿಸಬಾರರು. ಅಲ್ಲಿ ತಿಜೋರಿ ಇಟ್ಟರೆ ಹಣದ ನಷ್ಟಕ್ಕೆ ಕಾರಣವಾಗುತ್ತದೆ. ಈ ದಿಕ್ಕುಗಳಲ್ಲಿ ಒಂದು ಆಗ್ನೇಯ ದಿಕ್ಕು. ಇದನ್ನು ಮನೆಯ ಅಗ್ನಿ ಕೋನ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಹಣವನ್ನು ಇಡುವುದರಿಂದ ಅನಗತ್ಯ ಖರ್ಚು ಹೆಚ್ಚಾಗುತ್ತದೆ. ಅಲ್ಲದೆ, ಆದಾಯದ ಮೂಲಗಳ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದೇ ವೇಳೆ, ವ್ಯಕ್ತಿಯ ಮೇಲಿನ ಸಾಲವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಜೀವನದಲ್ಲಿನ ಸಂತೋಷ ಹಾಳಾಗುತ್ತದೆ.

ಮನೆಯ ಪಶ್ಚಿಮ ದಿಕ್ಕನ್ನು ಸಹ ಹಣದ ವಿಷಯದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಯಾರಾದರೂ ಮನೆಯ ಪಶ್ಚಿಮ ದಿಕ್ಕಿನಲ್ಲಿ ಹಣ ಅಥವಾ ಆಭರಣಗಳನ್ನು ಇಟ್ಟರೆ, ಅದು ಧನಹಾನಿಗೆ ಕಾರಣವಾಗುತ್ತದೆ ಎಂಬುದು ನಂಬಿಕೆ. ಅಲ್ಲದೆ, ಕುಟುಂಬ ಸದಸ್ಯರು ಕೂಡ ಹಣ ಸಂಪಾದಿಸಲು ಕಷ್ಟಪಡಬೇಕಾಗುತ್ತದೆ.

ಮನೆಯ ಪಶ್ಚಿಮ ದಿಕ್ಕಿನಲ್ಲಿ ತಿಜೋರಿ ಇಡುವುದನ್ನು ನಿಷೇಧಿಸಲಾಗಿದೆ. ಇದನ್ನು ಮನೆಯ ಪಶ್ಚಿಮ ಕೋನ ಎಂದು ಕರೆಯಲಾಗುತ್ತದೆ. ಇಲ್ಲಿ ಇರಿಸಲಾಗುವ ತಿಜೋರಿ ವ್ಯಕ್ತಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಮನೆಯಲ್ಲಿ ಈ ದಿಕ್ಕಿನಲ್ಲಿ ಹಣವನ್ನು ಇಡುವುದರಿಂದ ಅನಗತ್ಯ ಖರ್ಚು ಹೆಚ್ಚಾಗುತ್ತದೆ ಮತ್ತು ಆದಾಯ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ವ್ಯಕ್ತಿಯ ಮೇಲಿನ ಸಾಲದ ಹೊರೆ ಹೆಚ್ಚಾಗುತ್ತದೆ.

ಇದನ್ನೂ ಓದಿ-Pitra Paksha 2022: ಪಿತೃಪಕ್ಷದಲ್ಲಿ ಮರೆತೂ ಕೂಡ ಈ ನಿಯಮಗಳನ್ನು ಉಲ್ಲಂಘಿಸಬೇಡಿ

ಈ ದಿಕ್ಕಿನಲ್ಲಿ ತಿಜೋರಿ ಇರಿಸಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕನ್ನು ತಿಜೋರಿ, ಹಣ ಹಾಗೂ ಆಭರಣಗಳನ್ನು ಇಡಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಕುಬೇರ್ ದೇವ್ ಈ ದಿಕ್ಕಿನಲ್ಲಿ ನೆಲೆಸಿದ್ದಾರೆ. ಅಲ್ಲದೆ, ಈ ದಿಕ್ಕಿನಲ್ಲಿ ಹಣವನ್ನು ಇಡುವುದರಿಂದ ಅದು ಹೆಚ್ಚಾಗುತಲೇ ಇರುತ್ತದೆ. ಇದಲ್ಲದೆ ಮನೆಯಲ್ಲಿನ ಸಮೃದ್ಧಿಗೂ ಕೂಡ ಇದು ಕಾರಣವಾಗುತ್ತದೆ. 

ಇದನ್ನೂ ಓದಿ-Vastu Tips: ತುಳಸಿ ನೀಡುತ್ತೆ ಮನೆಯ ಒಳಿತು, ಕೆಡುಕಿನ ಮುನ್ಸೂಚನೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News