LPG Cylinder Price: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ನಿರಂತರ ಏರಿಕೆಯ ನಡುವೆ, ನೀವೂ ಕೂಡ ಒಂದು ವೇಳೆ ಅಗ್ಗದ ಸಿಲಿಂಡರ್ ಖರೀದಿಸಲು ಅಥವಾ ಹೊಸ ಗ್ಯಾಸ್ ಕನೆಕ್ಷನ್ ಪಡೆಯಲು ಯೋಜಿಸುತ್ತಿದ್ದರೆ, ಇದೀಗ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಸಾರ್ವಜನಿಕರಿಗಾಗಿ ಸರ್ಕಾರಿ ತೈಲ ಕಂಪನಿ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯವನ್ನು ಬಳಸಿ ನೀವು ಅಗ್ಗದ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು. ಇಂಡೇನ್ನ ಈ ಸೌಲಭ್ಯದ ಅಡಿಯಲ್ಲಿ ನಿಮಗೆ ಕೇವಲ 750 ರೂಗಳಲ್ಲಿ ಗ್ಯಾಸ್ ಸಿಲಿಂಡರ್ ಸಿಗುತ್ತದೆ.
ಗಗನಕ್ಕೇರುತ್ತಿರುವ ಬೆಲೆಗಳು
ಪ್ರಸ್ತುತ ಇಡೀ ದೇಶಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬಲೆ ಗಗನಮುಖಿಯಾಗಿವೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 1053 ರೂ. ತಲುಪಿದೆ ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಸರ್ಕಾರಿ ಅಡುಗೆ ಅನಿಲ ಪೂರೈಕೆ ಕಂಪನಿ ಇಂಡೇನ್ ನಿಂದ 750 ರೂ.ಗೆ ಸಿಲಿಂಡರ್ ನೀಡಲಾಗುತ್ತಿದೆ. ನೀವು ಅಗ್ಗದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ಪಡೆಯಬಹುದು ತಇಲಿದುಕೊಳ್ಳೋಣ ಬನ್ನಿ,
750 ರೂ.ಗೆ ಸಿಲಿಂಡರ್ ದೊರೆಯಲಿದೆ
ಇಂಡೇನ್ ತನ್ನ ಗ್ರಾಹಕರಿಗಾಗಿ ಕಾಂಪೋಸಿಟ್ ಸಿಲಿಂಡರ್ ಸೌಲಭ್ಯವನ್ನು ಆರಂಭಿಸಿದೆ. ಈ ಸಿಲಿಂಡರ್ ಖರೀದಿಸಲು ಕೇವಲ 750 ರೂಪಾಯಿ ಪಾವತಿಸಬೇಕು. ಈ ಸಿಲಿಂಡರ್ನ ವಿಶೇಷತೆ ಎಂದರೆ ನೀವು ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ವರ್ಗಾಯಿಸಬಹುದು. ಈ ಸಿಲಿಂಡರ್ನ ತೂಕವು ಕೂಡ ಸಾಮಾನ್ಯ ಸಿಲಿಂಡರ್ಗಿಂತ ಕಡಿಮೆಯಾಗಿದೆ.
ಕಂಪೋಸಿಟ್ ಸಿಲಿಂಡರ್ಗಳ ಇತ್ತೀಚಿನ ದರಗಳನ್ನು ಇಂತಿವೆ
>> ದೆಹಲಿ - 750
>> ಮುಂಬೈ - 750
>> ಕೋಲ್ಕತ್ತಾ - 765
>> ಚೆನ್ನೈ - 761
>> ಲಖನೌ - 777
ಇದನ್ನೂ ಓದಿ-8th Pay Commission: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ವೇತನ ರೂ.50,000 ರಿಂದ ರೂ.95,000 ಏರಿಕೆ!
14.2 ಕೆಜಿ ಸಿಲಿಂಡರ್ ದರಗಳು ಯಾವುವು?
>> ದೆಹಲಿ - 1053
>> ಮುಂಬೈ - 1052.5
>> ಚೆನ್ನೈ - 1068.5
>> ಕೋಲ್ಕತ್ತಾ - 1079
>> ಲಖನೌ - 1090.5
ಇದನ್ನೂ ಓದಿ-Royal Enfield Himalayan 450 ಟೀಸರ್ ವಿಡಿಯೋ ಬಿಡುಗಡೆ, ವೈಶಿಷ್ಟ್ಯಗಳನ್ನು ತಿಳಿಯಲು ಸುದ್ದಿ ಓದಿ
ಶೀಘ್ರದಲ್ಲೇ ಈ ಸಿಲಿಂಡರ್ ಎಲ್ಲಾ ನಗರಗಳಲ್ಲಿ ಲಭ್ಯವಾಗಲಿದೆ
ಕಂಪೋಸಿಟ್ ಸಿಲಿಂಡರ್ಗಳು ತೂಕದಲ್ಲಿ ಹಗುರವಾಗಿರುತ್ತವೆ ಮತ್ತು ನಿಮಗೆ ಅದರಲ್ಲಿ 10 ಕೆಜಿ ಅನಿಲ ಸಿಗುತ್ತದೆ. ಈ ಕಾರಣಕ್ಕಾಗಿ, ಈ ಸಿಲಿಂಡರ್ಗಳ ಬೆಲೆ ಕಡಿಮೆಯಾಗಿದೆ. ಈ ಸಿಲಿಂಡರ್ ಪಾರದರ್ಶಕವಾಗಿರುವುದು ವಿಶೇಷ. ಪ್ರಸ್ತುತ, ಈ ಸಿಲಿಂಡರ್ 28 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ, ಆದರೆ ಕಂಪನಿಯು ಶೀಘ್ರದಲ್ಲೇ ಈ ಸಿಲಿಂಡರ್ ಅನ್ನು ಎಲ್ಲಾ ನಗರಗಳಲ್ಲಿ ಲಭ್ಯವಾಗುವಂತೆ ಮಾಡುವುದರ ಮೇಲೆ ಕಾರ್ಯನಿರ್ವಹಿಸುತ್ತಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.