Hrithik Roshan Video : ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಹೃತಿಕ್​ ರೋಷನ್​

Hrithik Roshan Video : ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೃತಿಕ್ ರೋಷನ್ ಭಾಗವಹಿಸಿದ್ದರು, ಅಲ್ಲಿ ಅಭಿಮಾನಿಯೊಬ್ಬರು ವೇದಿಕೆಯಲ್ಲಿ ಅವರ ಪಾದಗಳನ್ನು ಮುಟ್ಟಿದರು. ಇದಕ್ಕೆ ಪ್ರತಿಯಾಗಿ ಹೃತಿಕ್ ಅಭಿಮಾನಿಯ ಪಾದ ಮುಟ್ಟಿ ನಮಸ್ಕರಿಸಿದರು. 

Written by - Chetana Devarmani | Last Updated : Aug 28, 2022, 05:25 PM IST
  • ಶನಿವಾರ ನಡೆದ ಫಿಟ್‌ನೆಸ್ ಸಮಾರಂಭದಲ್ಲಿ ಹೃತಿಕ್​ ರೋಷನ್​ ಭಾಗಿ
  • ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಹೃತಿಕ್​ ರೋಷನ್​
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆದ ವಿಡಿಯೋ
Hrithik Roshan Video : ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಹೃತಿಕ್​ ರೋಷನ್​  title=
ಹೃತಿಕ್​ ರೋಷನ್​

Hrithik Roshan Video : ಹೃತಿಕ್ ರೋಷನ್ ತನ್ನ ಅಂದಕ್ಕೆ ಮಾತ್ರವಲ್ಲದೆ ಅಭಿಮಾನಿಗಳ ಜತೆ ನಡೆದುಕೊಳ್ಳುವ ರೀತಿಗೂ ಹೆಸರುವಾಸಿಯಾಗಿದ್ದಾರೆ. ಶನಿವಾರ ನಡೆದ ಫಿಟ್‌ನೆಸ್ ಸಮಾರಂಭದಲ್ಲಿ, ಹಳದಿ ಬಣ್ಣದ ಟೀ ಮತ್ತು ಬಿಳಿ ಪ್ಯಾಂಟ್‌ನೊಂದಿಗೆ ಬಿಳಿ ಕ್ಯಾಪ್‌ ಧರಿಸಿ ಹೃತಿಕ್ ವೇದಿಕೆಗೆ ಬಂದರು. ಹೃತಿಕ್‌ನಿಂದ ಗೂಡಿ ಬ್ಯಾಗ್ ಸ್ವೀಕರಿಸಲು ಅಭಿಮಾನಿಯೊಬ್ಬರನ್ನು ವೇದಿಕೆಗೆ ಕರೆಯುತ್ತಿದ್ದಂತೆ, ಅಭಿಮಾನಿ ನಟನ ಪಾದ ಮುಟ್ಟಲು ಮುಂದಾದರು. ಇದಕ್ಕೆ ಪ್ರತಿಯಾಗಿ ನಟ ಹೃತಿಕ್‌ ರೋಷನ್‌ ಕೂಡ ಅಭಿಮಾನಿಯ ಪಾದ ಮುಟ್ಟಿದ್ದಾರೆ. ಈವೆಂಟ್‌ನಲ್ಲಿ ಪಾಪರಾಜಿಯೊಬ್ಬರು ಮಾಡಿದ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಇದಕ್ಕೆ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ, "ಹೃತಿಕ್‌ ರೋಷನ್‌ ಸೋ ಸ್ವೀಟ್‌" ಎಂದಿದ್ದಾರೆ. "ಸೋ ಡೌನ್ ಟು ಅರ್ಥ್" ಎಂದು ಮತ್ತೊಬ್ಬ ಅಭಿಮಾನಿ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತಾ, ಅಭಿಮಾನಿಗಳು ಅವರನ್ನು "ಒಳ್ಳೆಯ ಸೂಪರ್‌ಸ್ಟಾರ್" ಮತ್ತು "ಅತ್ಯಂತ ವಿನಮ್ರ ಸೂಪರ್‌ಸ್ಟಾರ್" ಎಂದು ಕರೆದರು.

ಇದನ್ನೂ ಓದಿ: "ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ, ಗಮನಹರಿಸಿ" : ನಟ ಜಗ್ಗೇಶ್ ಮನವಿ

ವಿಡಿಯೋ ಇಲ್ಲಿ ನೋಡಿ :

 

ಇತ್ತೀಚೆಗಷ್ಟೇ ಹೃತಿಕ್ ರೋಷನ್‌ ಅವರ ಮುಂಬರುವ ಚಿತ್ರ ವಿಕ್ರಮ್ ವೇದಾ ಟೀಸರ್ ಬಿಡುಗಡೆಯಾಗಿದೆ. ಇದು ಅದೇ ಹೆಸರಿನ ತಮಿಳು ಚಿತ್ರದ ಹಿಂದಿ ರೂಪಾಂತರವಾಗಿದೆ. ಇದನ್ನು ನಿರ್ದೇಶಕ ಜೋಡಿಯಾದ ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶಿಸಿದ್ದಾರೆ. ಅವರು ಮೂಲ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. 2017 ರ ಹಿಟ್ ಚಿತ್ರದಲ್ಲಿ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ನಟಿಸಿದ್ದರು.

ಹಿಂದಿ ಚಲನಚಿತ್ರವು ವಿಕ್ರಮ್ (ಸೈಫ್ ಅಲಿ ಖಾನ್) ನ ಸುತ್ತ ಸುತ್ತುತ್ತದೆ, ಅವರು ಭಯಾನಕ ಆದರೆ ಗೌರವಾನ್ವಿತ ದರೋಡೆಕೋರ ವೇದಾ (ಹೃತಿಕ್) ಗಾಗಿ ಬಲೆ ಬೀಸುತ್ತಾರೆ. ರಾಧಿಕಾ ಆಪ್ಟೆ, ರೋಹಿತ್ ಸರಾಫ್ ಮತ್ತು ಸತ್ಯದೀಪ್ ಮಿಶ್ರಾ ನಟಿಸಿರುವ ವಿಕ್ರಮ್ ವೇದಾ ಸಿನಿಮಾ ಇದೇ ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಫೈಟರ್ ಚಿತ್ರಕ್ಕೂ ಹೃತಿಕ್ ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಜೊತೆ ನಟಿಸಲಿದ್ದಾರೆ. ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅವರ ಕೊನೆಯ ಚಿತ್ರ ವಾರ್ ಸುಮಾರು ₹300 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ ಬ್ಲಾಕ್‌ಬಸ್ಟರ್ ಆಗಿತ್ತು.

ಇದನ್ನೂ ಓದಿ:Bigg Boss Kannada OTT : ಬಿಗ್‌ ಬಾಸ್‌ನಿಂದ ನಿನ್ನೆ ಎಲಿಮಿನೇಟ್‌ ಆದವರು ಇವರೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News