ಎಚ್ಚರವಿರಲಿ ಈ ಕಾರಣಗಳಿಂದಲೇ ಹೆಚ್ಚಾಗುವುದು ಹೊಟ್ಟೆಯ ಬೊಜ್ಜು .!

Reasons For Belly Fat:ಬೆಲ್ಲಿ ಫ್ಯಾಟ್ ಗೆ ಪರಿಹಾರ ಹುಡುಕುವ ಮೊದಲು ಹೊಟ್ಟೆಯ ಕೊಬ್ಬು ಅಥವಾ ಬೆಲ್ಲಿ ಫ್ಯಾಟ್ ಯಾವ ಕಾರಣದಿಂದ ಬರುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. 

Written by - Ranjitha R K | Last Updated : Sep 7, 2022, 02:09 PM IST
  • ದೇಹದ ಅಂದವನ್ನೇ ಕೆಡಿಸುತ್ತದೆ ಬೆಲ್ಲಿ ಫ್ಯಾಟ್
  • ಪರಿಹಾರ ಹುಡುಕುವ ಮೊದಲು ಕಾರಣ ತಿಳಿದುಕೊಳ್ಳಿ
  • ಬೆಳಗಿನ ಉಪಹಾರದಲ್ಲಿ ಕಡಿಮೆ ಪ್ರೋಟೀನ್ ಸೇವನೆ
ಎಚ್ಚರವಿರಲಿ ಈ ಕಾರಣಗಳಿಂದಲೇ ಹೆಚ್ಚಾಗುವುದು ಹೊಟ್ಟೆಯ ಬೊಜ್ಜು .! title=
belly fat cause (file photo)

Reasons For Belly Fat : ಸೊಂಟದ ಸುತ್ತ ಹೆಚ್ಚುತ್ತಿರುವ ಕೊಬ್ಬಿನಿಂದ ಅನೇಕ ಮಂದಿ ತೊಂದರೆಗೊಳಗಾಗುತ್ತಾರೆ. ಹೌದು, ಸೊಂಟದ ಬಳಿ ಸಂಗ್ರಹವಾಗಿರುವ ಕೊಬ್ಬನ್ನು ಹೊಟ್ಟೆಯ ಕೊಬ್ಬು ಎಂದೂ ಕರೆಯುತ್ತಾರೆ. ಹೊಟ್ಟೆಯ ಕೊಬ್ಬು ನಿಮ್ಮ ಲುಕ್ ಅನ್ನೇ ಹಾಳು ಮಾಡುತ್ತದೆ. ದೇಹ ಸೌಂದರ್ಯವನ್ನೇ ಕೆಡಿಸಿ ಬಿಡುತ್ತದೆ. ಹೊಟ್ಟೆಯ ಕೊಬ್ಬು ಹೊಂದಿರುವಾಗ, ಕೆಲವೊಂದು ಬಟ್ಟೆಗಳನ್ನು ಧರಿಸುವ ಮೊದಲು ಬಹಳ ಯೋಚಿಸಬೇಕಾಗುತ್ತದೆ. ಹೊಟ್ಟೆಯ ಕೊಬ್ಬು ಒಂದು ಸಲ ಬಂತೆಂದರೆ ಸುಲಭವಾಗಿ ಮುಕ್ತಿ ಪಡೆಯುವುದು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಹುಡುಕುವ ಮೊದಲು ಹೊಟ್ಟೆಯ ಕೊಬ್ಬು ಅಥವಾ ಬೆಲ್ಲಿ ಫ್ಯಾಟ್ ಯಾವ ಕಾರಣದಿಂದ ಬರುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. 

ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ? 
ಬೆಳಗಿನ ಉಪಹಾರದಲ್ಲಿ ಕಡಿಮೆ ಪ್ರೋಟೀನ್ ಸೇವನೆ : 
ಪ್ರೋಟೀನ್ ಹಸಿವನ್ನು ಕಡಿಮೆ ಮಾಡಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರೋಟೀನ್ ಸೇವನೆಯು ತೂಕ ನಷ್ಟಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇದು ಮೆಟಬಾಲಿಕ್ ರೇಟ್ ಅನ್ನು ಹೆಚ್ಚಿಸುತ್ತದೆ. ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಬೆಳಗಿನ ಉಪಾಹಾರದಲ್ಲಿ ಮೊಳಕೆ ಕಾಳುಗಳನ್ನು ಸೇರಿಸಿಕೊಳ್ಳಬಹುದು.  ಕಡಿಮೆ ಪ್ರೋಟೀನ್ ಇರುವ  ಉಪಹಾರವನ್ನು ಸೇವಿಸಿದರೆ, ಹೊಟ್ಟೆಯ ಕೊಬ್ಬು ಹೆಚ್ಚಾಗಲು ಪ್ರಾರಂಭವಾಗುತ್ತದೆ. 

ಇದನ್ನೂ ಓದಿ : ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವ ಸುಲಭ ಉಪಾಯ ಇಲ್ಲಿದೆ

ಪಿತ್ತಜನಕಾಂಗದ ಮೇಲೆ ಡಿಟಾಕ್ಸ್ :
ಯಕೃತ್ತು ಸರಿಯಾಗಿ ಕೆಲಸ ಮಾಡದೇ ಹೋದರೆ ಅನೇಕ ಕಾಯಿಲೆಗಳಿಗೆ ತುತ್ತಾಗಬೇಕಾಗಬಹುದು. ಮಾತ್ರವಲ್ಲ, ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕೂಡಾ ಒಯ್ದು ಕಾರಣವಾಗುತ್ತದೆ. ಅದಕ್ಕಾಗಿಯೇ ವಾರಕ್ಕೊಮ್ಮೆ ಯಕೃತ್ತನ್ನು ನಿರ್ವಿಷಗೊಳಿಸುವುದು ಅಥವಾ ಡಿ ಟಾಕ್ಸ್ ಮಾಡುವುದು ಬಹಳ ಮುಖ್ಯ.

ಸರಿಯಾಗಿ ನಿದ್ದೆ ಮಾಡದೇ ಇರುವುದು : 
ಸಾಕಷ್ಟು ನಿದ್ರೆ ಮಾಡದಿದ್ದರೆ, ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ. ಒಂದು ವೇಳೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಎಂದಾದರೆ, ಒಂದು ಚಿಟಿಕೆ ಚೆಕ್ಕೆಯೊಂದಿಗೆ ಮೊಮೈಲ್ ಚಹಾವನ್ನು ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ರಾತ್ರಿ  ಉತ್ತಮ ನಿದ್ರೆ ಬರುತ್ತದೆ. ಸಾಕಷ್ಟು ನಿದ್ದೆ ಮಾಡಿದರೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು. 

ಇದನ್ನೂ ಓದಿ : ರಾತ್ರಿ ಹೊತ್ತು ಸ್ನಾನ ಮಾಡುವ ಅಭ್ಯಾಸ ನಿಮಗೂ ಇದೆಯೇ? ಈ ಸುದ್ದಿಯನ್ನು ತಪ್ಪದೇ ಓದಿ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News