ಕೆಲವೊಮ್ಮೆ ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇಂತಹ ವಿಚಾರಗಳಿಂದಲೇ ಭಾರತ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಹತ್ತು ಹೆಜ್ಜೆ ಹಿಂದಕ್ಕೆ ಇಡುತ್ತಿದೆ ಎನಿಸುತ್ತದೆ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯು ಇನ್ನೂ ಪ್ರಗತಿಯಲ್ಲಿದೆ. ಸರ್ಕಾರಿ ಶಾಲೆಗಳ ನಿಖರವಾದ ಚಿತ್ರಣವನ್ನು ನಮಗೆ ನೀಡುವ ಇಂತಹ ಕಥೆಗಳು ಪ್ರತಿದಿನ ಅಂತರ್ಜಾಲದಲ್ಲಿ ಕಂಡುಬರುತ್ತವೆ. ಕೆಲವೊಂದು ಬಾರಿ ಆಂಗ್ಲ ಮಾಧ್ಯಮ ಮತ್ತು ಹೈ-ಫೈ ಶಾಲೆಗಳನ್ನು ನೋಡಿ ನಾವು ಪಶ್ಚಾತ್ತಾಪ ಪಡುತ್ತೇವೆ, ನಮ್ಮ ಶಾಲೆಯೂ ಹೀಗಿರಬೇಕು ಎಂದು ಬಯಸುತ್ತೇವೆ.
ಇದನ್ನೂ ಓದಿ: ಅಪ್ಪು ಫೇವರೇಟ್ ಲ್ಯಾಂಬೋರ್ಗಿನಿ ಕಾರು ದುಬೈಗೆ ಕಳುಹಿಸಿಕೊಟ್ಟ ಪತ್ನಿ ಅಶ್ವಿನಿ! ಕಾರಣವೇನು?
ಇನ್ನು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದ ಘಟನೆಯೊಂದರ ವೀಡಿಯೊ ತುಣುಕು ಇದಾಗಿದ್ದು, ಪ್ರಾಥಮಿಕ ಶಾಲಾ ಮಕ್ಕಳನ್ನು ಶಾಲೆಯ ಶೌಚಗೃಹವನ್ನು ಸ್ವಚ್ಛಗೊಳಿಸಲು ಒತ್ತಾಯಿಸಲಾಗುತ್ತಿದೆ.
ಜಿಲ್ಲಾ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಚಿತ್ರ ಹೊರಬಿದ್ದಿದ್ದು, ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪ್ರಾಥಮಿಕ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿರುವುದಾಗಿ ಘೋಷಿಸಿದ್ದಾರೆ. ದೃಶ್ಯಗಳಲ್ಲಿ, ಮಕ್ಕಳು ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವಾಗ ವ್ಯಕ್ತಿಯೊಬ್ಬರು ಅವರನ್ನು ನಿಂದಿಸುತ್ತಿದ್ದಾರೆ. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಸ್ನಾನಗೃಹವನ್ನು ಮುಚ್ಚುವುದಾಗಿ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಬುಧವಾರ ವೈರಲ್ ಆಗಿದೆ ಎಂದು ಮೂಲ ಶಿಕ್ಷಣಾಧಿಕಾರಿ ಮಣಿರಾಮ್ ಸಿಂಗ್ ಹೇಳಿದ್ದಾರೆ. ಸೋಹ್ವಾನ್ ಪ್ರದೇಶದ ಪಿಪ್ರಾ ಕಲಾ ಪ್ರಾಥಮಿಕ ಶಾಲೆಯ ವೀಡಿಯೊ ಇದಾಗಿದೆ.
ವಿಡಿಯೋ ನೋಡಿ:
Primary School Students Made To Clean Toilet by Principle in Ballia, Uttar Pradesh.
The incident was reported from Pipra Kala Primary School of Sohav Block in Ballia. pic.twitter.com/oYaqqBhFJA
— Ahmed Khabeer احمد خبیر (@AhmedKhabeer_) September 8, 2022
ಮೂಲ ಶಿಕ್ಷಣಾಧಿಕಾರಿ ಮಣಿರಾಮ್ ಸಿಂಗ್ ಅವರು ಸೋಹ್ವಾನ್ ಬ್ಲಾಕ್ ಶಿಕ್ಷಣ ಅಧಿಕಾರಿಯಿಂದ ವರದಿ ಕೇಳಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ವಿಡಿಯೋದಲ್ಲಿ, ಸೋಹಾನ್ ಬ್ಲಾಕ್‌ನಲ್ಲಿರುವ ಪಿಪ್ರಾ ಗ್ರಾಮದ ಶಾಲೆಯ ಪ್ರಾಂಶುಪಾಲರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಪ್ರಾಂಶುಪಾಲರು ಎದ್ದು ನಿಂತು ಶೌಚಗೃಹವನ್ನು ಸ್ವಚ್ಛಗೊಳಿಸುವಂತೆ ಮಕ್ಕಳಿಗೆ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: Best Kissers: ಈ ನಾಲ್ಕು ರಾಶಿಯವರು ಮುತ್ತು ಕೊಡೋದ್ರಲ್ಲಿ ನಿಸ್ಸೀಮರು
ಇದೇ ಘಟನೆಯ ಮತ್ತೊಂದು ವಿಡಿಯೋ ತುಣುಕಿನಲ್ಲಿ ಪ್ರಾಂಶುಪಾಲರು ‘ಶೌಚಾಲಯ ಮುಚ್ಚುತ್ತೇನೆ, ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮನೆಗೆ ಹೋಗಿ ಮಲವಿಸರ್ಜನೆ ಮಾಡಬೇಕಾಗುತ್ತದೆಎಂದು ವಿದ್ಯಾರ್ಥಿಗಳಿಗೆ ಹೇಳುವುದನ್ನು ಕೇಳಬಹುದು. ನಂತರ ಕ್ಲಿಪ್‌ನಲ್ಲಿ, ಅಪ್ರಾಪ್ತ ವಿದ್ಯಾರ್ಥಿಯು ಶೌಚಾಲಯವನ್ನು ಸ್ವಚ್ಛಗೊಳಿಸಲು ನೀರು ತುಂಬಿದ ಬಕೆಟ್ ಅನ್ನು ತರುತ್ತಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.