Boy and Girl Fighting Video: ಕುಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಲ್ಲರೂ ಹೇಳುತ್ತಲೇ ಇರುತ್ತಾರೆ. ಆದರೆ ಕುಡುಕರ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಮದ್ಯಪಾನ ಮಾಡಿ ನಶೆ ಏರಿಸಿಕೊಂಡ ಮೇಲೆ ವ್ಯಕ್ತಿ ತಮ್ಮ ಸ್ಥಿಮಿತದಲ್ಲಿ ಇರುವುದಿಲ್ಲ. ಅವರು ಏನು ಮಾಡುತ್ತಾರೆ ಯಾಕೆ ಮಾಡುತ್ತಾರೆ ಎನ್ನುವುದು ಅವರಿಗೂ ಗೊತ್ತಿರುವುದಿಲ್ಲ. ಆದರೆ ಕುಡಿದು ಮಾಡುವ ಕೆಲಸದಿಂದ ಅಕ್ಕ ಪಕ್ಕದಲ್ಲಿರುವವರ ಜೀವನ ಕೂಡಾ ಹಾಳು ಮಾಡಿ ಬಿಡುತ್ತದೆ.
ಕೆಲವರದ್ದು ಕುಡಿದ ಮೇಲೆ ವಿಪರೀತ ಮೌನ. ಇನ್ನು ಕೆಲವರದ್ದು ಎದುರಿಗಿರುವವರ ಕಿವಿ ತೂತು ಬೀಳುವಷ್ಟು ಮಾತು. ಮತ್ತೆ ಕೆಲವರಿರುತ್ತಾರೆ ಅವರಿಗೆ ರೋಷ ವೇಷ ಅದೆಲ್ಲಿಂದ ಬರುತದೆಯೋ ಗೊತ್ತಿಲ್ಲ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾರೆ. ವರ್ಷಗಳ ಹಿಂದೆ ನಡೆದ ಘಟನೆಗಳು ಕೂಡಾ ಆ ಸಂದರ್ಭದಲ್ಲಿ ಅವರ ನೆನಪಿಗೆ ಬಂದು ಬಿಡುತ್ತದೆ. ಇವರಿಗೆ ಸಣ್ಣ ಸಣ್ಣ ವಿಚಾರಗಳು ಸಾಕು ಜಗಳ ಕಾಯುವುದಕ್ಕೆ..
ಇದನ್ನೂ ಓದಿ : Viral Video: ನಿರ್ಜನ ರಸ್ತೆಯಲ್ಲಿ ಹುಡುಗ-ಹುಡುಗಿ ಮಾಡ್ತಿದ್ರು ಈ ಕೆಲಸ, ಕದ್ದುಮುಚ್ಚಿ ಚಿತ್ರೀಕರಿಸಿದ ವಿಡಿಯೋ ಭಾರಿ ವೈರಲ್!
ಅಂಥದ್ದೇ ವಿಡಿಯೋವೊಂದು ಇಲ್ಲಿ ವೈರಲ್ ಆಗಿದೆ. ಇಲ್ಲೊಬ್ಬ ಹುಡುಗಿ ಕುಡಿದು ದಾಂಧಲೆ ಶುರು ಮಾಡಿದ್ದಾಳೆ. ಬಾರ್ ನಿಂದ ಹೊರಗೆ ಬರುತ್ತಿದ್ದಂತೆಯೇ ಚಂಡಿಯಂತೆ ಯುವಕನೊಬ್ಬನ ಮೇಲೆ ಎರಗಿದ್ದಾಳೆ. ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಹಿಡಿದು ಆ ಯುವಕಿನೆ ಬಾರಿಸಿದ್ದಾಳೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಮಾಲ್ ವೊಂದರ ವಿಡಿಯೋ ಇದು. ಈ ವಿಡಿಯೋದಲ್ಲಿ ಬಾರ್ ಹೊರಗೆ ಹುಡುಗ ಮತ್ತು ಹುಡುಗಿ ಹೊಡೆದಾಡುವುದನ್ನು ಕಾಣಬಹುದು. ವಾಸ್ತವವಾಗಿ, ಇಲ್ಲಿ ಜಗಳ ಶುರು ಮಾಡಿದ್ದು ಪಾನಮತ್ತ ಹುಡುಗಿಯೇ. ಕುಡಿತದ ನಶೆಯಲ್ಲಿರುವ ಹುಡುಗಿ ಬಾರ್ನ ಹೊರಗೆ ಯುವಕನ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾಳೆ.
— P N Himanshu (@pn_himanshu) July 23, 2022
ಈ ರೀತಿ ಹುಡುಗನಿಗೆ ಹೊಡೆಯುತ್ತಿರುವಾಗ ಆಕೆಯ ಜೊತೆಗಿದ್ದ ಮತ್ತೊಂದು ಹಿಡಿಗಿ ತಡೆಯಲು ಬರುತ್ತಾಳೆ. ಆದರೆ ನಶೆಯೇರಿಸಿಕೊಂಡ ಹುಡುಗಿಗೆ ಅದೇನು ಶಕ್ತಿಯೋ ಆಕೆಯನ್ನು ತಡೆಯುವುದು ಸಾಧ್ಯವೇ ಆಗುವುದಿಲ್ಲ. ಅಲ್ಲಿದ್ದ ಹೂವಿನ ಕುಂಡಗಳನ್ನು ಕೂಡಾ ಎತ್ತಿ ಎತ್ತಿ ಬಿಸಾಡುತ್ತಾಳೆ. ಅಲ್ಲಿದ್ದವರು ಮಧ್ಯ ಬಂದು ಹುಡುಗಿಯನ್ನು ತಡೆಯಲು ಹರಸಾಹಸ ಪಡುತ್ತಾರೆ.
ಇದನ್ನೂ ಓದಿ : Viral Video: ಯುವತಿಯ ಕಿವಿಯಲ್ಲಿ ಹಾವು... ನೋಡಿದ್ರೆ ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ..!
ಪೊಲೀಸರು ಹೇಳಿದ್ದೇನು?
ವೈರಲ್ ಆಗಿರುವ ವಿಡಿಯೋ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.ಕಟ್ಟಡದ ಸಿಸಿಟಿವಿ ದೃಶ್ಯಾವಳಿ ಹಾಗೂ ವಿಡಿಯೋ ಆಧರಿಸಿ ಯುವಕ ಹಾಗೂ ಯುವತಿಯ ಹುಡುಕಾಟ ನಡೆದಿದೆ. ಬಾರ್ ನ ಬೌನ್ಸರ್ ಗಳನ್ನು ಕೂಡಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.