Whatsapp free calling to be chargeable soon : ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಬಳಕೆದಾರರಿಗೆ ಸಂಪೂರ್ಣ ಉಚಿತ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಆದರೆ, ಇನ್ನು ಮುಂದೆ ಈ ಪ್ಲಾಟ್ ಫಾರಂ ಮೂಲಕ ಮಾಡುವ ಕರೆಗಳಿಗೂ ಶುಲ್ಕ ವಿಧಿಸಬೇಕಾಗಬಹುದು. ವರದಿಯ ಪ್ರಕಾರ, ದೂರಸಂಪರ್ಕ ಇಲಾಖೆ ಇಂಟರ್ನೆಟ್ ಆಧಾರಿತ ಕರೆಗಳನ್ನು ನಿಯಂತ್ರಿಸುವ ಪ್ರಸ್ತಾಪದ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರವನ್ನು ಕೇಳಿದೆ. ಅಲ್ಲದೆ, ಇಡೀ ಉದ್ಯಮಕ್ಕೆ "ಒಂದೇ ಸೇವೆ, ಒಂದೇ ನಿಯಮಗಳು" ಎಂಬ ತತ್ವವನ್ನು ಪರಿಗಣಿಸಲು ಟೆಲಿಕಾಂ ಆಪರೇಟರ್‌ಗಳು ಮತ್ತು ಸೇವಾ ಪೂರೈಕೆದಾರರು ನಿರಂತರ ಒತ್ತಡವನ್ನು ಕೂಡಾ ಹೇರುತ್ತಿದ್ದಾರೆ.
ವಿಷಯ ತಿಳಿಸಿದ ದೂರಸಂಪರ್ಕ ಇಲಾಖೆ :
ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಆರಂಭಿಕ ಹಂತದಲ್ಲಿದ್ದಾಗ ಟ್ರಾಯ್ ಯ ಈ ಪ್ರಸ್ತಾಪವನ್ನು ವಾಪಾಸ್ ಕಳುಹಿಸಲಾಗಿತ್ತು. ಆದರೆ, ಈಗ ದೂರ ಸಂಚಾರ ವಿಭಾಗ ಈಗ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಹೊಸ ಹೊಸ ತಂತ್ರಜ್ಞಾನಗಳು ಹೊರ ಹೊಮ್ಮುತ್ತಿದ್ದು, ತಾಂತ್ರಿಕ ಪರಿಸರದಲ್ಲಿನ ಬದಲಾವಣೆಯಿಂದಾಗಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ಇಂಟರ್ನೆಟ್ ಟೆಲಿಫೋನ್ ಆಪರೇಟರ್‌ಗಳು ಮತ್ತುಒಟಿಟಿ ಪ್ಲೇಯರ್‌ಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ರೂಪಿಸುವಂತೆ ಕೇಳಿದೆ.
ಇದನ್ನೂ ಓದಿ : ಸ್ಟ್ರಾಂಗ್ ಬ್ಯಾಟರಿ, ಉತ್ತಮ ಕ್ಯಾಮೆರಾದೊಂದಿಗೆ ಅಗ್ಗದ ದರದ 5G ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆ
ಇಂಟರ್ನೆಟ್ ಉಚಿತ ಕರೆಗಳಿಗೆ ಬ್ರೇಕ್ ? :
2008 ರಲ್ಲಿ ಟ್ರಾಯ್ ಶಿಫಾರಸ್ಸನ್ನು ಹಿಂದಿರುಗಿಸುವ ವೇಳೆ, ಸಾಮಾನ್ಯ ಟೆಲಿಫೋನ್ ನೆಟ್‌ವರ್ಕ್ ಮೂಲಕ ಇಂಟರ್ನೆಟ್ ಕರೆಗಳನ್ನು ಒದಗಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಅನುಮತಿ ನೀಡಬಹುದು ಎಂದು ಹೇಳಲಾಗಿತ್ತು. ಆದರೆ ಇಂಟರ್ ಕನೆಕ್ಷನ್ ಶುಲ್ಕವನ್ನು ಪಾವತಿಸಬೇಕು, ಮಾತ್ರವಲ್ಲ, ಮಾನ್ಯ ಪ್ರತಿಬಂಧಕ ಉಪಕರಣಗಳನ್ನುಹಾಕಬೇಕು, ಮತ್ತು ಬಹು ಭದ್ರತಾ ಏಜೆನ್ಸಿಗಳೊಂದಿಗೆ ಸುರಕ್ಷಾತಾ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಲಾಗಿತ್ತು. 2016-17ರಲ್ಲಿ ನೆಟ್ ನ್ಯೂಟ್ರಾಲಿಟಿ ವಿಚಾರ ಸುದ್ದಿಯಲ್ಲಿದ್ದಾಗ ಮತ್ತೊಮ್ಮೆ ಈ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ದೂರ ಸಂಪರ್ಕ ವಿಭಾಗ ಈ ಪ್ರಸ್ತಾವನೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಟೆಲಿಕಾಂ ಆಪರೇಟರ್‌ಗಳು ಎಲ್ಲಾ ಇಂಟರ್ನೆಟ್ ಆಧಾರಿತ ಕರೆ ಮತ್ತು ಸಂದೇಶ ಸೇವೆಗಳಿಗೆ ಏಕರೂಪದ ಕಾನೂನು ರೂಪಿಸುವಂತೆ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಟೆಲಿಕಾಂ ಆಪರೇಟರ್‌ಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಅನ್ವಯಿಸುವಂತೆ ಪರವಾನಗಿ ಶುಲ್ಕವನ್ನು ವಿಧಿಸಬೇಕು. ಕಾನೂನು ನಿರ್ಬಂಧಗಳು, ಸೇವೆಯ ಗುಣಮಟ್ಟದ ನಿಯಂತ್ರಣ ಇತ್ಯಾದಿಗಳನ್ನು ಅನುಸರಿಸಬೇಕು" ಎಂದು ವರದಿ ಹೇಳಿದೆ.
ಇದನ್ನೂ ಓದಿ : 9 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಜಿಯೋ ನೀಡುತ್ತಿದೆ ನಿತ್ಯ 2 ಜಿಬಿ ಡಾಟಾ.!
ಅಂತಹ ಕಾನೂನನ್ನು ಅಂತಿಮವಾಗಿ ಅಂಗೀಕರಿಸಿದರೆ, ಗೂಗಲ್ ಡ್ಯುವೋ, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೆಸೆಂಜರ್, ಸಿಗ್ನಲ್, ಟೆಲಿಗ್ರಾಮ್ ಮತ್ತು ಎಲ್ಲಾ ರೀತಿಯ ಸೇವೆಗಳಂತಹ ಉಚಿತ ಸಂದೇಶ ಮತ್ತು ಕರೆ ಸೇವೆಗಳನ್ನು ಹೆಚ್ಚು ಅವಲಂಬಿಸಿರುವ ಬಳಕೆದಾರರು ಮುಂದೆ ಈ ಸೇವೆಗಳಿಗೆ ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.