Share Market Update: ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ. ಜಾಗತಿಕ ಸೂಚ್ಯಂಕಗಳು ಮತ್ತು ಹೂಡಿಕೆದಾರರ ಲಾಭದ ಬುಕಿಂಗ್ನಿಂದಾಗಿ ಸೆನ್ಸೆಕ್ಸ್ 1,100 ಪಾಯಿಂಟ್ಗಳಷ್ಟು ಕುಸಿದಿದೆ. ಹೀಗಾಗಿ ರಾಷ್ಟ್ರೀಯ ಶೇರುಪೇಟೆಯ ನಿಫ್ಟಿ ಸೂಚ್ಯಂಕದಲ್ಲಿ 300ಕ್ಕೂ ಹೆಚ್ಚು ಅಂಕಗಳ ಕುಸಿತ ಗಮನಿಸಲಾಗುತ್ತಿದೆ. ಪ್ರಸ್ತುತ ಸೆನ್ಸೆಕ್ಸ್ 1049 ಅಂಕಗಳ ನಷ್ಟದೊಂದಿಗೆ 58,892 ಅಂಕಗಳಲ್ಲಿ ಮತ್ತು ನಿಫ್ಟಿ 325 ಅಂಕಗಳ ಕುಸಿತದೊಂದಿಗೆ 17,551 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಭಾರೀ ಮಾರಾಟದಿಂದಾಗಿ ಎಲ್ಲಾ ವಲಯಗಳ ಷೇರುಗಳು ಮಾರುಕಟ್ಟೆಯಲ್ಲಿ ಕೆಂಪು ನಿಶಾನೆಯಲ್ಲಿ ತಮ್ಮ ತಮ್ಮ ವಹಿವಾಟನ್ನು ಮುಂದುವರೆಸಿವೆ. ಬ್ಯಾಂಕ್ ನಿಫ್ಟಿ ಶೇ.1.49 ಅಂದರೆ 615 ಅಂಕಗಳಿಂದ ಕುಸಿದು. 40,593 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಆಟೋ ಶೇ.3.33, ನಿಫ್ಟಿ ಐಟಿ ಶೇ.3.02, ನಿಫ್ಟಿ ಎಫ್ಎಂಸಿಜಿ ಶೇ.1.64 ಅಂದರೆ 723 ಪಾಯಿಂಟ್ಗಳ ಕುಸಿತದೊಂದಿಗೆ ತನ್ನ ದಿನದ ವಹಿವಾಟನ್ನು ಮುಂದುವರೆಸಿವೆ. ತೈಲ ಮತ್ತು ಅನಿಲ ವಲಯ, ಗ್ರಾಹಕ ಬೆಲೆಬಾಳುವ ವಸ್ತುಗಳ ಷೇರುಗಳೂ ಕುಸಿತದೊಂದಿಗೆ ವಹಿವಾಟನ್ನು ಮುಂದುವರೆಸಿವೆ.
ನಿಫ್ಟಿಯ 50 ಷೇರುಗಳ ಪೈಕಿ 2 ಷೇರುಗಳು ಮಾತ್ರ ಹಸಿರು ನಿಶಾನೆಯಲ್ಲಿ ತನ್ನ ವಹಿವಾಟನ್ನು ಮುಂದುವರೆಸಿದ್ದು, ಉಳಿದ 48 ಷೇರುಗಳು ಕುಸಿತನ್ನು ಅನುಭವಿಸಿವೆ. ಇನ್ನೊಂದೆಡೆ ಸೆನ್ಸೆಕ್ಸ್ನ 30 ಷೇರುಗಳಲ್ಲಿ ಒಂದು ಷೇರು ಮಾತ್ರ ಹಸಿರು ನಿಶಾನೆಯಲ್ಲಿ ವಹಿವಾಟು ನಡೆಸುತ್ತಿದೆ. ಉಳಿದ 29 ಷೇರುಗಳು ಕೆಂಪು ನಿಶಾನೆಗೆ ಜಾರಿವೆ. ಮಹೀಂದ್ರಾ ಷೇರುಗಳು ಸೆನ್ಸೆಕ್ಸ್ನಲ್ಲಿ ಅತಿದೊಡ್ಡ ಕುಸಿತ ಅನುಭವಿಸುತ್ತಿವೆ ಮತ್ತು ಶೇರುಗಳು ಶೇ. 4.55 ರಷ್ಟು ಕುಸಿತದೊಂದಿಗೆ 1237.90 ರೂ.ನಲ್ಲಿ ತನ್ನ ವಹಿವಾಟನ್ನು ಮುಂದುವರೆಸಿವೆ.ಇದೇ ವೇಳೆ ಇಂಡಸ್ಇಂಡ್ ಬ್ಯಾಂಕ್ನ ಷೇರುಗಳು ಮಾತ್ರ ಹಸಿರು ಮಾರ್ಕ್ನಲ್ಲಿ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ-ಅಕ್ಕಿ ಬೆಲೆಯಲ್ಲಿ ಭಾರೀ ಕುಸಿತ, ಸರ್ಕಾರದ ಈ ನಿರ್ಧಾರವೇ ಇದಕ್ಕೆ ಕಾರಣ .!
ಹೂಡಿಕೆದಾರರಿಗೆ ಭಾರಿ ನಷ್ಟ
ಷೇರುಪೇಟೆಯಲ್ಲಿನ ಭಾರೀ ಕುಸಿತದಿಂದಾಗಿ ಹೂಡಿಕೆದಾರರ ಆಸ್ತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. ಬಿಎಸ್ಇ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಮಾರುಕಟ್ಟೆ ಮೌಲ್ಯ 285.9 ಲಕ್ಷ ಕೋಟಿಯಿಂದ 280 ಲಕ್ಷ ಕೋಟಿಗೆ ಬಂದು ನಿಂತಿದೆ.
ಇದನ್ನೂ ಓದಿ-ರೈತರ ಗಮನಕ್ಕೆ, ನಿಮಗೆ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ ₹3,000 ಪಿಂಚಣಿ!
ಮಾರುಕಟ್ಟೆ ಕುಸಿಯಲು ಕಾರಣ ಏನು?
ಯುಎಸ್ ಫೆಡರಲ್ ರಿಸರ್ವ್ ಸತತ ಮೂರನೇ ಬಾರಿಗೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ಆತಂಕ ಮಾರುಕಟ್ಟೆಯಲ್ಲಿ ಮನೆಮಾಡಿದ್ದು. ಮುಂದಿನ ವಾರ ಫೆಡ್ ರಿಸರ್ವ್ ನ ಈ ಸಭೆ ನಡೆಯಲಿದೆ. ಇದರಲ್ಲಿ ಹಣದುಬ್ಬರವನ್ನು ತಡೆಗಟ್ಟಲು ಅಲ್ಲಿನ ಬಿಡೆನ್ ಸರ್ಕಾರ ಬಡ್ಡಿದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಹೀಗಾಗಿ ಮಾರುಕಟ್ಟೆಯಲ್ಲಿ ಮಾರಾಟದ ಭರಾಟೆ ಮುಂದುವರೆದಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.