ICC New Rules: October 1 ರಿಂದ ಕ್ರಿಕೆಟ್ ನ ಈ ನಿಯಮಗಳು ಬದಲಾಗುತ್ತಿವೆ, ಐಸಿಸಿ ಘೋಷಣೆ

ICC New Rules: ಕೊವಿಡ್-19 ಸಾಂಕ್ರಾಮಿಕ ರೋಗದ ಕಾಲದಲ್ಲಿ ಚೆಂಡುಗಳಿಗೆ ಲಾಲಾರಸ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಆದರೆ, ಇನ್ಮುಂದೆ ಅದನ್ನು ಶಾಶ್ವತವಾಗಿ ನಿಷೇಧಿಸಲಾಗುವುದು ಎಂದು ಐಸಿಸಿ ಹೇಳಿದೆ.

Written by - Nitin Tabib | Last Updated : Sep 20, 2022, 06:13 PM IST
  • ICC ಮಂಗಳವಾರ 1 ಅಕ್ಟೋಬರ್ 2022 ರಿಂದ ಬದಲಾಗುವ ನಿಯಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ನೇತೃತ್ವದ ಪುರುಷರ ಕ್ರಿಕೆಟ್ ಸಮಿತಿಯು MCC ಯ 2017 ರ ಕ್ರಿಕೆಟ್ ನಿಯಮಗಳ ಮೂರನೇ ಆವೃತ್ತಿಯಲ್ಲಿ ಆಟದ ಪರಿಸ್ಥಿತಿಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡಿದೆ.
  • ಈ ಹೊಸ ತಿದ್ದುಪಡಿಗಳನ್ನು ಮಹಿಳಾ ಕ್ರಿಕೆಟ್ ಸಮಿತಿಯೊಂದಿಗೂ ಕೂಡ ಹಂಚಿಕೊಳ್ಳಲಾಗಿದೆ.
ICC New Rules: October 1 ರಿಂದ ಕ್ರಿಕೆಟ್ ನ ಈ ನಿಯಮಗಳು ಬದಲಾಗುತ್ತಿವೆ, ಐಸಿಸಿ ಘೋಷಣೆ title=
ICC New Rules

ICC New Rules: ICC ಮಂಗಳವಾರ 1 ಅಕ್ಟೋಬರ್ 2022 ರಿಂದ ಬದಲಾಗುವ ನಿಯಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ನೇತೃತ್ವದ ಪುರುಷರ ಕ್ರಿಕೆಟ್ ಸಮಿತಿಯು MCC ಯ 2017 ರ ಕ್ರಿಕೆಟ್ ನಿಯಮಗಳ ಮೂರನೇ ಆವೃತ್ತಿಯಲ್ಲಿ ಆಟದ ಪರಿಸ್ಥಿತಿಗಳಲ್ಲಿ ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಈ ಹೊಸ ತಿದ್ದುಪಡಿಗಳನ್ನು ಮಹಿಳಾ ಕ್ರಿಕೆಟ್ ಸಮಿತಿಯೊಂದಿಗೂ ಕೂಡ ಹಂಚಿಕೊಳ್ಳಲಾಗಿದೆ. ಹೊಸ ನಿಯಮಗಳು 1 ಅಕ್ಟೋಬರ್ 2022 ರಿಂದ ಜಾರಿಗೆ ಬರಲಿದೆ, ಅಂದರೆ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ICC ಪುರುಷರ T20 ವಿಶ್ವಕಪ್ ಅನ್ನು ಈ ಹೊಸ ನಿಯಮಗಳ ಆಧಾರದ ಮೇಲೆ ನಡೆಸುವುದು ಬಹುತೇಕ ಖಚಿತವಾಗಿದೆ.

ಹೊಸ ನಿಯಮಾವಳಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ
>> ಬ್ಯಾಟ್ಸ್‌ಮನ್ ಕ್ಯಾಚ್ ಔಟ್ ಆದ ಸಂದರ್ಭಗಳಲ್ಲಿ, ಹೊಸ ಬ್ಯಾಟ್ಸ್ ಮನ್ ಸ್ಟ್ರೈಕ್‌ಗೆ  ಬರಲಿದ್ದಾನೆ. ಇದಕ್ಕೂ ಮೊದಲು ಬ್ಯಾಟ್ಸ್ ಮನ್ ಕ್ಯಾಚ್ ಔಟ್ ಆದ ಸಂದರ್ಭದಲ್ಲಿ ಹೊಸ ಬ್ಯಾಟ್ಸ್ ಮನ್ ನಾನ್-ಸ್ತ್ರೈಕೆರ್ ಎಂಡ್ ಗೆ ಬರುತ್ತಿದ್ದರು. ಆದರೆ ಇದೀಗ ಈ ನಿಯಮ ಬದಲಾಗಲಿದೆ. 

>> ಲಾಲಾರಸ ಬಳಕೆಯ ಮೇಲೆ ಶಾಶ್ವತ ನಿಷೇಧ ವಿಧಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಕ್ರಿಕೆಟ್ ಪ್ರಾರಂಭವಾದಾಗ, ಲಾಲಾರಸ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು, ಆದರೆ ಇದೀಗ ಚೆಂಡಿಗೆ ಲಾಲಾರಸ ಬಳಕೆಯನ್ನು  ಶಾಶ್ವತವಾಗಿ ನಿಷೇಧಿಸಲಾಗಿದೆ.

>> ಟೆಸ್ಟ್ ಆಗಲಿ ಅಥವಾ ಏಕದಿನ ಪಂದ್ಯವಾಗಲಿ ಹೊಸ ಬ್ಯಾಟ್ಸ್‌ಮನ್ ಎರಡೇ ನಿಮಿಷಗಳಲ್ಲಿ ಎರಡು ನಿಮಿಷಗಳಲ್ಲಿ ಸ್ಟ್ರೈಕ್ ತೆಗೆದುಕೊಲ್ಲಬೇಕಾಗಲಿದೆ, ಆದರೆ T20 ಪಂದ್ಯದಲ್ಲಿ ಈ ಸಮಯದ ಮಿತಿ 90 ಸೆಕೆಂಡುಗಳು ಇರಲಿದೆ. ಈ ಮೊದಲು ಬ್ಯಾಟ್ಸ್‌ಮನ್ ಔಟಾದ ನಂತರ, ಹೊಸ ಆಟಗಾರನಿಗೆ ಟೆಸ್ಟ್ ಮತ್ತು ODIಗಳಲ್ಲಿ ಮೂರು ನಿಮಿಷಗಳ ಕಾಲಾವಕಾಶ ಸಿಗುತ್ತಿತ್ತು. ಬ್ಯಾಟ್ಸ್‌ಮನ್ ಹಾಗೆ ಮಾಡಲು ವಿಫಲವಾದರೆ, ಫೀಲ್ಡಿಂಗ್ ತಂಡದ ನಾಯಕ ಟೈಮ್ ಔಟ್ ಬೇಡಿಕೆ ಇಡಬಹುದು.

>> ಚೆಂಡು ಪಿಚ್‌ನಿಂದ ಹೊರಗೆ ಬಿದ್ದರೆ, ಹೊಸ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಬ್ಯಾಟ್‌ನ ಸ್ವಲ್ಪ ಭಾಗ ಅಥವಾ ಅದು ಪಿಚ್‌ನ ಒಳಗಿದ್ದರೆ ಚೆಂಡನ್ನು ಆಡುವ ಹಕ್ಕನ್ನು ಹೊಂದಿರಲಿದ್ದಾನೆ. ಅದು ಹೊರಗೆ ಹೋದಾಗ, ಅಂಪೈರ್ ಡೆಡ್ ಬಾಲ್ ಅನ್ನು ಸೂಚಿಸಬಹುದು. ಪಿಚ್‌ನಿಂದ ಹೊರಹೋಗಲು ಒತ್ತಾಯಿಸುವ ಯಾವುದೇ ಚೆಂಡು ನೋ-ಬಾಲ್ ಇರಲಿದೆ.

>> ಬೌಲರ್‌ನ ಬೌಲಿಂಗ್ ಸಮಯದಲ್ಲಿ ಯಾವುದೇ ಅನುಚಿತ ಮತ್ತು ಉದ್ದೇಶಪೂರ್ವಕ ಚಲನೆಯನ್ನು ಮಾಡಿದರೆ, ನಂತರ ಅವನಿಗೆ ಅಂಪೈರ್‌ನಿಂದ ಡೆಡ್ ಬಾಲ್ ಸೂಚನೆ ಸಿಗಲಿದೆ, ಇದರ ಜೊತೆಗೆ ಬ್ಯಾಟಿಂಗ್ ತಂಡವು ಪೆನಾಲ್ಟಿಯಾಗಿ 5 ರನ್‌ಗಳನ್ನು ಪಡೆಯಲಿದೆ.

ಇದನ್ನೂ ಓದಿ-Congress President Election: ಶಶಿ ತರೂರ್ ಗೂ ಕೂಡ ಜಿತೇಂದ್ರ ಪ್ರಸಾದ್ ಸ್ಥಿತಿ ಬರಲಿದೆಯಾ? 22 ವರ್ಷಗಳ ಹಿಂದಿನ ಇತಿಹಾಸ ಮರುಕಳಿಸಲಿದೆಯಾ?

>> ಬೌಲರ್ ತನ್ನ ಡಿಲೇವರಿ ಸ್ಟ್ರೈಡ್‌ಗೆ ಪ್ರವೇಶಿಸುವ ಮೊದಲು ಸ್ಟ್ರೈಕರ್ ಅನ್ನು ರನ್ ಔಟ್ ಮಾಡುವ ಪ್ರಯತ್ನದಲ್ಲಿ ಚೆಂಡನ್ನು ಎಸೆದರೆ, ಅದು ಇದೀಗ ಡೆಡ್ ಬಾಲ್ ಗೆ ಒಳಪಡಲಿದೆ. ಸಾಮಾನ್ಯವಾಗಿ ಇದು ಅತ್ಯಂತ ಅಪರೂಪದ ಸೆನಾರಿಯೊ ಆಗಿದ್ದು, ಇದುವರೆಗೆ ಅದನ್ನು ನೋ ಬಾಲ್ ಎಂದು ಕರೆಯಲಾಗುತ್ತಿತ್ತು.

ಇದನ್ನೂ ಓದಿ-Mamata Banarjee: ಮೊದಲು RSS ಬಣ್ಣನೆ, ನಂತರ ಪ್ರಧಾನಿ ಮೋದಿ ಸಮರ್ಥನೆ, ಮಮತಾ ಮೈಂಡ್ ನಲ್ಲಿ ನಡೆದಿದ್ದಾದರು ಏನು?

>> ಟಿ20ಯಂತೆ ಇದೀಗ ಏಕದಿನ ಕ್ರಿಕೆಟ್‌ನಲ್ಲೂ ನಿಗದಿತ ಸಮಯಕ್ಕೆ ಓವರ್‌ ಪೂರ್ಣಗೊಳಿಸದಿದ್ದರೆ, ಫೀಲ್ಡಿಂಗ್ ತಂಡವು 30 ಗಜಗಳ ವೃತ್ತದೊಳಗೆ ಹೆಚ್ಚುವರಿ ಫೀಲ್ಡರ್ ಅನ್ನು ಇರಿಸಬೇಕಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News