Snake viral video : ವಿಷಕಾರಿ ಕಾಳಿಂಗನನ್ನೇ ಕಾಡಿದ ವ್ಯಕ್ತಿ! ಸರ್ಪ ತಿರುಗಿ ದಾಳಿಗೆ ಮುಂದಾದಾಗ..?

Snake viral video : ಬರೀ ಕೈಯಲ್ಲಿ ಕಾಳಿಂಗ ಸರ್ಪವನ್ನು ಹಿಡಿದು, ಆಟವಾಡಲು ಮುಂದಾಗಿದ್ದಾನೆ. ಆದರೆ, ವ್ಯಕ್ತಿಯ ವರ್ತನೆಯಿಂದ ಕೋಪಗೊಂಡ ಹಾವು,  ವ್ಯಕ್ತಿಯ ಮೇಲೆ ದಾಳಿ ಮಾಡಲು ಮುಂದಾಗಿದೆ. 

Written by - Ranjitha R K | Last Updated : Sep 26, 2022, 01:21 PM IST
  • ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಹಾವಿನ ವಿಡಿಯೋ
  • ಅತ್ಯಂತ ವಿಷಕಾರಿ ಹಾವನ್ನೇ ಕಾಡಲು ಹೊರಟ ವ್ಯಕ್ತಿ
  • ತಿರುಗಿ ದಾಳಿ ಮುಂದಾದ ಕಾಳಿಂಗ
Snake viral video : ವಿಷಕಾರಿ  ಕಾಳಿಂಗನನ್ನೇ ಕಾಡಿದ ವ್ಯಕ್ತಿ! ಸರ್ಪ ತಿರುಗಿ ದಾಳಿಗೆ ಮುಂದಾದಾಗ..?    title=
Snake viral video (photo instagram)

Snake viral video : ಹಾವು ಎಂದ ಕೂಡಲೇ ಎಂಥವರ ಕೈ ಕಾಲು ಕೂಡಾ ನಡುಗುತ್ತದೆ. ಅಪಾಯಕಾರಿಯಲ್ಲದ ಹಾವುಗಳನ್ನು ಕಂಡಾಗಲೂ ಅರೆ ಕ್ಷಣಕ್ಕೆ ಮೈ ಜುಮ್ಮೆನ್ನುತ್ತದೆ. ಇನ್ನು ಅತ್ಯಂತ ವಿಷಕಾರಿ, ಅಷ್ಟೇ ಉದ್ದದ ಹಾವನ್ನು ಕಂಡರೆ ಹೇಗಾಗುತ್ತದೆ? ಎಂಥ ಗಟ್ಟಿ ಮನಸ್ಸು ಕೂಡಾ ಒಂದು ಕ್ಷಣಕ್ಕೆ ಕೈ ಚೆಲ್ಲಿ ಬಿಡುತ್ತದೆ.   ಕಾಲಿಗೆ ಬುದ್ದಿ ಹೇಳುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ, ವಿಷಕಾರಿ ಹಾವಿನೊಂದಿಗೆ ಸರಸಕ್ಕೆ ಇಳಿದು ಬಿಟ್ಟಿದ್ದಾನೆ. ಆದರೆ ಹಾವು ಕೂಡಾ ಸುಲಭಕ್ಕೆ ಬಿಡಬೇಕಲ್ಲ, ವ್ಯಕ್ತಿಗೆ ಸರಿಯಾಗಿಯೇ ಬುದ್ದಿ ಕಲಿಸಿದೆ.  

ಕೆರಳಿದ ಸರ್ಪ : 
ತನ್ನ ಪಾಡಿಗೆ ತಾನು ಹೋಗುತ್ತಿದ್ದ ಹಾವನ್ನು ವ್ಯಕ್ತಿಯೊಬ್ಬ ತಡೆದಿದ್ದಾನೆ. ಆ ಹಾವು ಎಷ್ಟು ವಿಷಕಾರಿ ಎಂದು ತಿಳಿದಿದ್ದರೂ, ಅದನ್ನು ಹಿಡಿದು ತನ್ನ ಸಾಮರ್ಥ್ಯ ತೋರಿಸಲು ಹೊರಟಿದ್ದಾನೆ. ಬರೀ ಕೈಯಲ್ಲಿ ಕಾಳಿಂಗ ಸರ್ಪವನ್ನು ಹಿಡಿದು, ಆಟವಾಡಲು ಮುಂದಾಗಿದ್ದಾನೆ. ಆದರೆ, ವ್ಯಕ್ತಿಯ ವರ್ತನೆಯಿಂದ ಕೋಪಗೊಂಡ ಹಾವು,  ವ್ಯಕ್ತಿಯ ಮೇಲೆ ದಾಳಿ ಮಾಡಲು ಮುಂದಾಗಿದೆ. 

ಇದನ್ನೂ ಓದಿ : Viral Video : ‘ಹುಷಾರು ಟೀಚರ್​, ನಮ್ಮಪ್ಪ ಪೊಲೀಸ್..’ ಶಿಕ್ಷಕಿಗೆ‌ ಸ್ಟೂಡೆಂಟ್ ಅವಾಜ್‌.!

ಈ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತದೆ. ಯಾಕೆಂದರೆ ಕಾಳಿಂಗ ಸರ್ಪ ಕಡಿದರೆ ಕ್ಷಣ ಮಾತ್ರದಲ್ಲಿ ವಿಷವೇರಿ ವ್ಯಕ್ತಿ ಸಾವನ್ನಪ್ಪುತ್ತಾನೆ. ಇಲ್ಲಿ ಈ ಹಾವು ದಾಳಿ ಮಾಡಲು ಬಂದಾಗ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ಕೆಲವರಿಗೆ ಮೂಕ ಪ್ರಾಣಿಗಳನ್ನು ಕಾಡುವುದೆಂದರೆ, ಅದೇನೋ ಕೆಟ್ಟ ಸಂತೋಷ. ವಿಷ ಸರ್ಪಗಳೊಂದಿಗೆ ಕೂಡಾ ಅವುಗಳಿಗಿಂತ ಕ್ರೂರಿಗಳಾಗಿ ನಡೆದುಕೊಂಡು ಬಿಡುತ್ತಾರೆ. ಎಲ್ಲಾ ಅರಿತಿರುವ ಮನುಷ್ಯರೇ ಹೀಗಿರುವಾಗ, ಏನೂ ಅರಿಯದ ಆ ಪ್ರಾಣಿಗಳಿಗೆ ಏನು ಹೇಳುವುದು ? 

 

ಇದನ್ನೂ ಓದಿ : Viral Video: RSS ಸದಸ್ಯನ ಮನೆಗೆ ಪೆಟ್ರೋಲ್ ಬಾಂಬ್ ಎಸೆದು ಅಪರಿಚಿತರು ಎಸ್ಕೇಪ್!

ವಿಡಿಯೋ ನೋಡಿ ಬೆಚ್ಚಿಬಿದ್ದ ವೀಕ್ಷಕರು :  
ಈ ವೀಡಿಯೋವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊವನ್ನು ಹಲವು ಬಾರಿ ವೀಕ್ಷಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಲಕ್ಷಾಂತರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News