BHI Rich List 2018: ಸತತ ಏಳನೇ ಬಾರಿ ಅಗ್ರ ಸ್ಥಾನ ಪಡೆದ ಮುಕೇಶ್ ಅಂಬಾನಿ!

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ BHI Rich List 2018ರಲ್ಲಿ ಸತತ ಏಳನೇ ಬಾರಿಗೆ ಭಾರತದ ಅತ್ಯಂತ ಶ್ರೀಮಂತರಾಗಿ ಅಗ್ರ ಸ್ಥಾನ ಪಡೆದಿದ್ದಾರೆ. 

Last Updated : Sep 25, 2018, 09:06 PM IST
BHI Rich List 2018: ಸತತ ಏಳನೇ ಬಾರಿ ಅಗ್ರ ಸ್ಥಾನ ಪಡೆದ ಮುಕೇಶ್ ಅಂಬಾನಿ! title=

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರು ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2018(BHI Rich List 2018)ರಲ್ಲಿ ಸತತ ಏಳನೇ ಬಾರಿಗೆ ಭಾರತದ ಅತ್ಯಂತ ಶ್ರೀಮಂತರಾಗಿ ಅಗ್ರ ಸ್ಥಾನ ಪಡೆದಿದ್ದಾರೆ. ಇವರ ಒಟ್ಟು ಸಂಪತ್ತು ಸುಮಾರು 371,000 ಕೋಟಿ ರೂ. ಎನ್ನಲಾಗಿದೆ.

ನಂತರದಲ್ಲಿ ಅಂದಾಜು 159,000 ಕೋಟಿ ರೂ. ಸಂಪತ್ತು ಹೊಂದಿರುವ ಹಿಂದೂಜಾ ಗ್ರೂಪ್'ನ ಎಸ್.ಪಿ.ಹಿಂದೂಜಾ ಮತ್ತು ಕುಟುಂಬ, 114,500 ಕೋಟಿ ರೂ. ಆಸ್ತಿ ಹೊಂದಿರುವ ಆರ್ಸೆಲರ್ ಮಿತ್ತಲ್'ನ ಎಲ್ಎನ್ ಮಿತ್ತಲ್ ಮತ್ತು ಕುಟುಂಬ ಸ್ಥಾನ ಪಡೆದಿದೆ.

ಉಳಿದಂತೆ ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2018ರಲ್ಲಿ ವಿಪ್ರೋದ ಅಜೀಂ ಪ್ರೇಂಜೀ(96,100 ಕೋಟಿ ರೂ.), ಸನ್ ಫಾರ್ಮಾಕ್ಯುಟಿಕಲ್ಸ್ ನ ದಿಲೀಪ್ ಸಾಂಘ್ವಿ (89,700 ಕೋಟಿ ರೂ.), ಕೋಟಕ್ ಮಹಿಂದ್ರಾ ಬ್ಯಾಂಕ್'ನ ಉದಯ್ ಕೋಟಕ್ (78,600 ಕೋಟಿ ರೂ.), ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನವಲ್ಲಾ (73,000 ಕೋಟಿ ರೂ.), ಅದಾನಿ ಗ್ರೂಪ್ಸ್'ನ ಗೌತಮ್ ಅದಾನಿ ಮತ್ತು ಕುಟುಂಬ (71,200 ಕೋಟಿ ರೂ.) ಮತ್ತು ಶಪೂರ್ಜಿ ಪಲ್ಲೋಂಜಿ ಮಿಸ್ತ್ರಿಯ ಸೈರಸ್ ಪಿ.ಮಿಸ್ತ್ರಿ (69,400 ಕೋಟಿ ರೂ.) ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Trending News