ಸ್ಥೂಲಕಾಯ ದೇಹವನ್ನು ಹಲವು ರೋಗಗಳಿಗೆ ಮನೆ ಮಾಡಿಕೊಡುತ್ತದೆ.ಇದೇ ವೇಳೆ ಸ್ಥೂಲಕಾಯದ ಸಮಸ್ಯೆಯು ಬಹಳ ವೇಗವಾಗಿ ಹೆಚ್ಚಾಗುತ್ತಿದ್ದು, ಇದರಿಂದ ಜನರು ಥೈರಾಯ್ಡ್, ಮಧುಮೇಹ, ಅಧಿಕ ಬಿಪಿ, ಇತ್ಯಾದಿ ಗಂಭೀರ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ನಮ್ಮ ತೂಕ ಹೆಚ್ಚಾಗಲು ಪ್ರಮುಖ ಕಾರಣ ಎಂದರೆ ನಮ್ಮ ಕಳಪೆ ಮಟ್ಟದ ಜೀವನಶೈಲಿ ಆಗಿದೆ. ಇದಲ್ಲದೆ, ಇತರ ಅನೇಕ ಅಭ್ಯಾಸಗಳು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಿವೆ, ಉದಾಹರಣೆಗೆ ರಾತ್ರಿ ತಡವಾಗಿ ತಿನ್ನುವುದು, ತಡವಾಗಿ ಮಲಗುವುದು, ಬೆಳಿಗ್ಗೆ ತಡವಾಗಿ ಏಳುವುದು, ವ್ಯಾಯಾಮ ಮಾಡದಿರುವುದು ಇತ್ಯಾದಿ ಇವುಗಳಲ್ಲಿ ಶಾಮೀಲಾಗಿವೆ. ಆದರೆ, ಎಲ್ಲಾ ವಯಸ್ಸಿನ ಜನರು ತೂಕ ಇಳಿಕೆ ಮಾಡಬಹುದು ಎಂದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ನೀವೂ ಕೂಡ ಒಂದು ಬೆಲೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ಸ್ಥೂಲಕಾಯತೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳಿಕೊಡಲಿದ್ದೇವೆ.
1. ಸಿರ್ಕಾಡಿಯನ್ ರಿದಮ್ ಉಪವಾಸ
ಸಿರ್ಕಾಡಿಯನ್ ರಿದಮ್ ಉಪವಾಸವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಹಾರ ಸೇವನೆಯ ಒಂದು ವಿಧಾನವಾಗಿರುತ್ತದೆ. ಇದರರ್ಥ ನೀವು 12 ಗಂಟೆಗಳ ಕಾಲ ಆಹಾರವನ್ನು ಸೇವಿಸುತ್ತೀರಿ ಮತ್ತು ಉಳಿದ 12 ಗಂಟೆಗಳ ಕಾಲ ಉಪವಾಸ ಮಾಡಿ. ನೀವು ಬೆಳಗ್ಗೆ 7 ರಿಂದ 8 ರವರೆಗೆ ನಿಮ್ಮ ಉಪಹಾರವನ್ನು ಮುಗಿಸಿಕೊಳ್ಳಿ ಮತ್ತು ರಾತ್ರಿ 7 ರಿಂದ 8 ರವರೆಗೆ ರಾತ್ರಿಯ ಊಟವನ್ನು ಮುಗಿಸಿ. ಇದರ ಜೊತೆಗೆ ನೀವು ರಾತ್ರಿಯ ಊಟದಿಂದ ಮರುದಿನ ಉಪಹಾರದವರೆಗೆ ನೀರನ್ನು ಹೊರತುಪಡಿಸಿ ಏನನ್ನೂ ಸೇವಿಸುತ್ತಿಲ್ಲ ಅಥವಾ ಕುಡಿಯುತ್ತಿಲ್ಲ ಎಂಬುದನ್ನು ಖಚಿತಪಡಿಸಿ. ಈ ರೀತಿಯಾಗಿ ನಿಮ್ಮ ಹೊಟ್ಟೆ ಸಾಕಷ್ಟು ವಿಶ್ರಾಂತಿ ಪಡೆಯಲಿದೆ.
2. ಹೈಡ್ರೆಟ್ ಆಗಿ ಉಳಿಯುವುದು ತುಂಬಾ ಮುಖ್ಯ
ಸಾಕಷ್ಟು ಪ್ರಮಾಣದ ನೀರಿನ ಸೇವನೆಯು ಭಾವನಾತ್ಮಕ ಕಡುಬಯಕೆಗಳನ್ನು ನಿಗ್ರಹಿಸಲು ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ನಿಮಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ.ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಾಕಷ್ಟು ನೀರು ಕುಡಿಯುವುದು ಒಂದು ಉತ್ತಮ ಮಾರ್ಗವಾಗಿದೆ.ಇದು ಸರಿಯಾದ ಜೀರ್ಣಕ್ರಿಯೆ ಮತ್ತು ವಿಸರ್ಜನೆಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಹೆಚ್ಚಿನ ಕೊಬ್ಬನ್ನು ಕಡಿಮೆ ಮಾಡಲು ಬಿಸಿನೀರಿನ ಸೇವನೆ ಒಂದು ಉತ್ತಮ ಮಾರ್ಗವಾಗಿದೆ.
3. ಸಿಹಿ, ಹುರಿದ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರಿ
ಸಿಹಿ, ಆಳವಾಗಿ ಹುರಿದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರಬೇಕು.ಏಕೆಂದರೆ ಇವುಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿನಲ್ಲಿ ಉರಿಯೂತ ಸಮಸ್ಯೆ ಉಂಟಾಗುತ್ತದೆ.ಆದ್ದರಿಂದ ನಿಮ್ಮ ಆಹಾರದಿಂದ ಸಿಹಿ, ಕರಿದಂತಹ ಪದಾರ್ಥಗಳನ್ನು ಇಂದೇ ತೆಗೆದುಹಾಕಿ.
4. ನಮ್ಮ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ನಿದ್ರೆ ಉತ್ತಮ ಮಾರ್ಗವಾಗಿದೆ.
ರಾತ್ರಿ 10 ಗಂಟೆಗೆ ಮಲಗುವುದು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ.ಇದು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.