ವೈರಲ್ ಸೋಂಕುಗಳಲ್ಲೇ ಅತ್ಯಂತ ಅಪಾಯಕಾರಿಯಾದದ್ದು ಡೆಂಗ್ಯೂ. ದು ಸೊಳ್ಳೆಗಳ ಮೂಲಕ ಹರಡುವ ಭಯಂಕರವಾದ ಕಾಯಿಲೆ. ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಈ ಸೊಳ್ಳೆ ಕಡಿದ ಐದರಿಂದ ಎಂಟು ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸುತ್ತವೆ. ಅದೇ ರೀತಿ ಡೆಂಗ್ಯೂ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೂ ಈ ವೈರಸ್ ವ್ಯಾಪಿಸುತ್ತದೆ.
ಡೆಂಗ್ಯೂ ಜ್ವರ ಬಂದಾಗ ಪ್ಲೇಟ್ಲೆಟ್ಗಳ ಮಟ್ಟವು ಬಹಳ ವೇಗವಾಗಿ ಇಳಿಯುತ್ತದೆ, ಇದರಿಂದಾಗಿ ದೇಹದಲ್ಲಿನ ದುರ್ಬಲತೆ ಮತ್ತು ಕೀಲುಗಳಲ್ಲಿ ನೋವು ಹಲವಾರು ತಿಂಗಳುಗಳವರೆಗೆ ಉಳಿದುಕೊಳ್ಳುತ್ತದೆ. ವಯಸ್ಕರಿಗಿಂತ ಈ ರೋಗವು ಮಕ್ಕಳಲ್ಲಿ ವೇಗವಾಗಿ ಹರಡುತ್ತದೆ.
ಡೆಂಗ್ಯೂ ರೋಗಕ್ಕೆ ತುತ್ತಾದ ವ್ಯಕ್ತಿಗೆ ಪ್ಲೆಟ್ಲೆಟ್(ಬಿಳಿ ರಕ್ತ ಕಣ)ಗಳನ್ನು ಹೆಚ್ಚಿಸುವುದೇ ದೊಡ್ಡ ಸಮಸ್ಯೆಯಾಗಿದ್ದು, ಡೆಂಗ್ಯೂ ಕೆಲವೇ ದಿನಗಳಲ್ಲಿ ಪ್ಲೆಟ್ಲೆಟ್ ಮಟ್ಟ ಇಳಿಯುವಂತೆ ಮಾಡುತ್ತದೆ. ವೈದ್ಯರು ಸಹ ಔಷಧಗಳೊಂದಿಗಿನ ಕೆಲವು ಮನೆ ಮದ್ದುಗಳು ಕೂಡ ಪ್ಲೇಟ್ಲೆಟ್ಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುತ್ತಾರೆ.
ಹೌದು, ಡೆಂಗ್ಯೂವಿನಿಂದ ರಕ್ಷಣೆ ಪಡೆಯಲು ನಮ್ಮ ಮನೆಯಲ್ಲಿಯೇ ರಾಮಬಾಣವಿದೆ. ಅಂತಹ ಕೆಲವು ಮನೆಮದ್ದುಗಳನ್ನು ನಾವಿಂದು ತಿಳಿಸುತ್ತೇವೆ...
* ಮೇಕೆ ಹಾಲು:
ಮೇಕೆ ಹಾಲು ಕಡಿಮೆಯಾಗಿರುವ ಪ್ಲೆಟ್ಲೆಟ್ ಗಳನ್ನು ವೇಗವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ವೈದ್ಯರ ಪ್ರಕಾರ, ಪ್ಲೇಟ್ಲೆಟ್ಗಳು ಮೇಕೆ ಹಾಲಿನ ಒಂದು ಕಪ್ನಲ್ಲಿ ಹೆಚ್ಚಾಗುತ್ತವೆ. ಆದರೆ ಆಡಿನ ಹಾಲು ಸುಲಭವಾಗಿ ದೊರೆಯದಿದ್ದಲ್ಲಿ, ನಿಮ್ಮ ಮನೆಯಲ್ಲಿ ಅಥವಾ ತೋಟದಲ್ಲಿ ಕೆಲವು ಗಿಡಮೂಲಿಕೆಗಳ ಮೂಲಕ, ರೋಗವನ್ನು ನಿವಾರಿಸಬಹುದು.
* ಪರಂಗಿ ಎಲೆಗಳು:
ಡೆಂಗ್ಯೂ ಜ್ವರಕ್ಕೆ ಪಪ್ಪಾಯ ಎಲೆಗಳನ್ನು ಅತ್ಯಂತ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ. ಪಪ್ಪಾಯದಲ್ಲಿನ ಪೇಪನ್ ಕಿಣ್ವವು ದೇಹದ ಜೀರ್ಣಕಾರಿ ಶಕ್ತಿಯನ್ನು ಪರಿಹರಿಸುತ್ತದೆ. ಡೆಂಗ್ಯೂ ಚಿಕಿತ್ಸೆಗಾಗಿ, ಪಪ್ಪಾಯ ಎಲೆಗಳ ರಸವನ್ನು ರೋಗಿಯು ಸೇವಿಸುವುದರಿಂದ ಪ್ಲೇಟ್ಲೆಟ್ಗಳ ಪ್ರಮಾಣವು ಹೆಚ್ಚಾಗುತ್ತದೆ.
* ತುಳಸಿ ಎಲೆಗಳು:
ತುಳಸಿ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಅದನ್ನು ಫಿಲ್ಟರ್ ಮಾಡಿ, ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರಿಗೆ ಅದನ್ನು ಕುಡಿಯಲು ಕೊಡಿ. ತುಳಸಿಯ ಈ ಚಹಾವು ಡೆಂಗ್ಯೂ ರೋಗಿಗೆ ಪರಿಹಾರವನ್ನು ನೀಡುತ್ತದೆ. ಈ ಚಹಾವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯಬಹುದು. ತುಳಸಿ ಎಲೆಗಳನ್ನು ಕುದಿಸಿ ಜೇನುತುಪ್ಪದಿಂದ ಅದನ್ನು ಕುಡಿಯುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
* ಮೆಂತ್ಯ ಸೊಪ್ಪು:
ಕುದಿಯುವ ನೀರಿನಲ್ಲಿ ಮೆಂತ್ಯ ಸೊಪ್ಪಿನ ಎಲೆಗಳನ್ನು ಹಾಕಿ ಹರ್ಬಲ್ ಚಹಾವಾಗಿ ಬಳಸಬಹುದು. ಮೆಂತ್ಯೆಯಿಂದ, ದೇಹದ ವಿಷಕಾರಿ ವಸ್ತುಗಳು ಹೊರಬರುತ್ತವೆ, ಇದು ಡೆಂಗ್ಯೂ ವೈರಸ್ ಅನ್ನು ಕೂಡಾ ತೆಗೆದುಹಾಕುತ್ತದೆ.
* ಎಳನೀರು:
ಡೆಂಗ್ಯೂ ಜ್ವರ ಇರುವವರು, ತೆಂಗಿನ ನೀರನ್ನು(ಎಳನೀರನ್ನು) ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಎಲೆಕ್ಟ್ರೋಲ್ ಗಳು, ಖನಿಜಗಳು ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಅದು ದೇಹವನ್ನು ಪ್ರಬಲಗೊಳಿಸುತ್ತದೆ.
* ಅರಿಶಿನ:
ಆಹಾರದಲ್ಲಿ ಹೆಚ್ಚು ಅರಿಶಿನ ಬಳಸಿ. ಪ್ರತಿ ದಿನ ಅರ್ಧ ಟೀಚಮಚ ಅರಿಶಿನವನ್ನು ಹಾಲಿನೊಂದಿಗೆ ಬಳಸಿ ಬೆಳಿಗ್ಗೆ ಅಥವಾ ರಾತ್ರಿ ತೆಗೆದುಕೊಳ್ಳಬಹುದು.