ಪ್ರಪಾತಕ್ಕಿಳಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ 8 ಲಕ್ಷಕ್ಕೂ ಅಧಿಕ ಕೋಟಿ ರೂ ನಷ್ಟ!

ಶೇರುಪೇಟೆಯಲ್ಲಿ ಈ ವಾರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.ಸುಮಾರು 1,850 ಪಾಯಿಂಟ್ಗಳನ್ನು ಕಳೆದುಕೊಂಡು 35 ಸಾವಿರಕ್ಕೆ ಇಳಿದಿದೆ. ಇನ್ನೊಂದೆಡೆಗೆ  ನಿಫ್ಟಿಯು 600 ಪಾಯಿಂಟ್ಗಳ ಕುಸಿತದೊಂದಿಗೆ 11,400 ಅಂಕಗಳ ಕೆಳಗೆ ಕುಸಿದಿದೆ.

Last Updated : Oct 5, 2018, 06:03 PM IST
ಪ್ರಪಾತಕ್ಕಿಳಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ 8 ಲಕ್ಷಕ್ಕೂ ಅಧಿಕ ಕೋಟಿ ರೂ ನಷ್ಟ! title=

ನವದೆಹಲಿ: ಶೇರುಪೇಟೆಯಲ್ಲಿ ಈ ವಾರ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ.ಸುಮಾರು 1,850 ಪಾಯಿಂಟ್ಗಳನ್ನು ಕಳೆದುಕೊಂಡು 35 ಸಾವಿರಕ್ಕೆ ಇಳಿದಿದೆ. ಇನ್ನೊಂದೆಡೆಗೆ  ನಿಫ್ಟಿಯು 600 ಪಾಯಿಂಟ್ಗಳ ಕುಸಿತದೊಂದಿಗೆ 11,400 ಅಂಕಗಳ ಕೆಳಗೆ ಕುಸಿದಿದೆ.

ಬಿಎಸ್ಇ ಸೆನ್ಸೆಕ್ಸ್ ಶುಕ್ರವಾರ 792 ಪಾಯಿಂಟ್ಗಳ ಕುಸಿತ ಕಂಡಿದೆ.ಇಂದಿನ ಮಾರುಕಟ್ಟೆಯ ಕುಸಿತವು ಪ್ರಮುಖವಾಗಿ  ಆರ್ಬಿಐ ಅನಿರೀಕ್ಷಿತವಾಗಿ ಪಾಲಿಸಿ ದರದಲ್ಲಿ ಸ್ಥಿತಿಯನ್ನು ಕಾಪಾಡಿಕೊಂಡ ನಂತರ ಬಂದಿದೆ. ಆ ಮೂಲಕ ಡಾಲರ್ ಎದುರು ರೂಪಾಯಿ 74 ಮೌಲ್ಯಕ್ಕೆ ಕುಸಿದಿದೆ.ಕೇಂದ್ರೀಯ ಬ್ಯಾಂಕ್ ಬಡ್ಡಿದರವನ್ನು 6.5ಕ್ಕೆ  ಉಳಿಸಿಕೊಂಡ ನಂತರ ಡಾಲರ್ ಎದುರು ದೇಶೀಯ ಕರೆನ್ಸಿ 65 ಪೈಸೆ ಕುಸಿತ ಕಂಡು 74.23 ರೂಪಾಯಿಗಳಿಗೆ ತಲುಪಿದೆ.

ಇಕ್ವಿಟಿಗಳ ಚೇತರಿಕೆಯಿಂದಾಗಿ ಬಿಎಸ್ಇ ಕಂಪೆನಿಗಳ ಮಾರುಕಟ್ಟೆ ಬಂಡವಾಳ 5,02,895.97 ಕೋಟಿ ರೂ.ಗೆ ಕುಸಿದಿದೆ. ಆ ಮೂಲಕ ಮಾರುಕಟ್ಟೆಯಲ್ಲಿ ವಾರ್ಷಿಕ ಹಣದುಬ್ಬರದಲ್ಲಿ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
 

Trending News