ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ ರೂ.! ಯಾಕಿಷ್ಟು ಬೆಲೆ ಗೊತ್ತಾ..?

ಈ ಕೋಣದ ನಿರ್ವಹಣೆ ವೆಚ್ಚವೂ ಸಾಕಷ್ಟು ದುಬಾರಿಯಂತೆ. ಸ್ವತಃ ಈ ಕೋಣ ಸಾಕುವ ರೈತರು ಹೇಳುವಂತೆ ನಿತ್ಯ 1000 ರೂ. ಖರ್ಚಾಗುತ್ತದಂತೆ.

Written by - Puttaraj K Alur | Last Updated : Oct 19, 2022, 07:17 PM IST
  • ಉತ್ತರ ಪ್ರದೇಶದ ಮೀರತ್‌ನಲ್ಲಿ 3 ದಿನಗಳ ‘ಅಖಿಲ ಭಾರತ ಕಿಸಾನ್ ಮೇಳ’
  • ಕಿಸಾನ್ ಮೇಳದ ಮೊದಲ ದಿನವೇ ಜನರ ಗಮನ ಸೆಳೆದ ಮುರ್ರಾ ತಳಿಯ ಕೋಣ
  • 15 ಕ್ವಿಂಟಾಲ್ ತೂಕದ ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ ರೂ.
ಈ ಕೋಣದ ಬೆಲೆ ಬರೋಬ್ಬರಿ 10 ಕೋಟಿ ರೂ.! ಯಾಕಿಷ್ಟು ಬೆಲೆ ಗೊತ್ತಾ..? title=
ಜನರ ಗಮನ ಸೆಳೆದ ಮುರ್ರಾ ಕೋಣ

ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರತಿದಿನ ಚಿತ್ರ-ವಿಚಿತ್ರ ಸುದ್ದಿಗಳು ವರದಿಯಾಗುತ್ತವೆ. ಆದರೆ ಈ ವಿಶೇಷ ಸುದ್ದಿಯ ಬಗ್ಗೆ ತಿಳಿದರೆ ನೀವು ಸಹ ಶಾಕ್ ಆಗಬಹುದು. ಉತ್ತರ ಪ್ರದೇಶದ ಮೀರತ್‌ನಲ್ಲಿ 3 ದಿನಗಳ ಅಖಿಲ ಭಾರತ ಕಿಸಾನ್ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಜಾತ್ರೆಯ ಮೊದಲ ದಿನವೇ ಕೋಣವೊಂದು ಜನರ ಗಮನ ಸೆಳೆದಿದೆ. ಅದು ಹೇಗೆ ಗೊತ್ತಾ..?

10 ಕೋಟಿ ರೂ. ಮೌಲ್ಯದ ಕೋಣ!

ಪದ್ಮಶ್ರೀ ಪುರಸ್ಕೃತ ಹರ್ಯಾಣದ ರೈತ ನರೇಂದ್ರ ಸಿಂಗ್ ಅವರು ತಮ್ಮ ಕೋಣದ ಜೊತೆ ಈ ಜಾತ್ರೆಗೆ ಆಗಮಿಸಿದ್ದರು. ಇವರ ಕೋಣ ಗೋಲು ಬರೋಬ್ಬರಿ 10 ಕೋಟಿ ರೂ. ಮೌಲ್ಯ ಹೊಂದಿದೆ. ಮುರ್ರಾ ಜಾತಿಗೆ ಸೇರಿದ ಈ ಕೋಣ ದಿನಕ್ಕೆ 26 ಲೀಟರ್ ಹಾಲು ಸೇವಿಸುತ್ತದೆಯಂತೆ. ಈ ಕೋಣದ ತೂಕ ಬರೋಬ್ಬರಿ 15 ಕ್ವಿಂಟಾಲ್ ಇದೆಯಂತೆ.

ಇದನ್ನೂ ಓದಿ: Viral News: ಭಾರತದ ಈ ಗ್ರಾಮದಲ್ಲಿ 32 ಎಕರೆ ಜಮೀನಿಗೆ ಮಂಗಗಳೇ ಒಡೆಯ! ಇದರ ಹಿಂದಿನ ಕಾರಣವೇನು?

ದುಬಾರಿ ಕೋಣಕ್ಕೆ ದುಬಾರಿ ಆಹಾರ

4 ವರ್ಷ 6 ತಿಂಗಳ ಈ ಕೋಣದ ಬೆಲೆ ಕೋಟ್ಯಂತರ ರೂ ಇದೆ. ಇಷ್ಟು ದುಬಾರಿ ಬೆಲೆಯ ಕೋಣದ ಬಗ್ಗೆ ಜನರು ಯೋಚಿಸಲೂ ಸಹ ಸಾಧ್ಯವಿಲ್ಲ. ಇದೇ ವೇಳೆ ಈ ಕೋಣದ ನಿರ್ವಹಣೆ ವೆಚ್ಚವೂ ಸಾಕಷ್ಟು ದುಬಾರಿಯಂತೆ. ಸ್ವತಃ ಈ ಕೋಣ ಸಾಕುವ ರೈತರು ಹೇಳುವಂತೆ ನಿತ್ಯ 1000 ರೂ. ಖರ್ಚಾಗುತ್ತದಂತೆ. ಈ ಕೋಣಕ್ಕೆ ಆಹಾರವಾಗಿ 30 ಕೆಜಿ ಒಣ ಹಸಿರು ಮೇವು, 7 ಕೆಜಿ ಗೋಧಿ ಮತ್ತು 50 ಗ್ರಾಂ ಖನಿಜ ಮಿಶ್ರಣದ ಆಹಾರ ನೀಡಲಾಗುತ್ತದೆ. ಈ ಕೋಣದ ವೀರ್ಯವು ಉತ್ತಮ ಪ್ರಮಾಣದ ಆದಾಯ ಗಳಿಸುತ್ತದಂತೆ. ಗೋಲು ಕೋಣದ ತಂದೆಯನ್ನು ಹರಿಯಾಣ ಸರ್ಕಾರಕ್ಕೆ ಉಡುಗೊರೆಯಾಗಿ ನೀಡಲಾಗಿದೆ. ಮುರ್ರಾ ಎಮ್ಮೆಯ ತಳಿಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಇತ್ತೀಚೆಗಷ್ಟೇ ಗೋಲುವಿನ ಅಜ್ಜ ಸಾವನ್ನಪ್ಪಿತ್ತು

ಖರೀದಿದಾರರು ಈ ಕೋಣದ ಬೆಲೆಯನ್ನು 10 ಕೋಟಿ ರೂ. ಎಂದು ಅಂದಾಜಿಸಿದ್ದಾರೆ. ಆದರೆ ಇದನ್ನು ಮಾರಾಟ ಮಾಡಲು ರೈತ ನರೇಂದ್ರ ಸಿಂಗ್ ಒಪ್ಪಲಿಲ್ಲ. ಈ ಕೋಣದ ಆಳೆತ್ತರವನ್ನು ಕಂಡು ಜಾತ್ರೆಯಲ್ಲಿ ಸಾಕಷ್ಟು ಮಂದಿ ನೆರೆದಿದ್ದರು. ನರೇಂದ್ರ ಸಿಂಗ್ ಪ್ರಕಾರ ಈ ಎಮ್ಮೆಯ ಅಜ್ಜ ಇತ್ತೀಚೆಗಷ್ಟೇ ಸಾವನ್ನಪ್ಪಿತ್ತಂತೆ. ಹೀಗಾಗಿ ಅದರ ನೆನಪಿಗಾಗಿ ಈ ಗೋಲು ಕೋಣವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ರೈತ ನಿರ್ಧರಿಸಿದ್ದಾರಂತೆ.

ಇದನ್ನೂ ಓದಿ: WATCH : ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ, ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News