ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ: ಅರ್ಜಿ ಆಹ್ವಾನ

ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ / ಪ್ರಸಾರ ಮಾಡಿದ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು “ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ -2022” ಅರ್ಜಿ ಆಹ್ವಾನಿಸಿದೆ.

Written by - Zee Kannada News Desk | Last Updated : Oct 20, 2022, 04:40 PM IST
  • ಆಯೋಗದ ತೀರ್ಮಾನವು ಅಂತಿಮವಾಗಿದ್ದು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
  • ಈ ನಿಟ್ಟಿನಲ್ಲಿ ಆಯೋಗವು ಎಲ್ಲಾ ಹಕ್ಕುಗಳನ್ನು ಹೊಂದಿದೆ.
  • ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಮತ್ತು ಫ್ಯಾಕ್ಸ್ ಸಂಖ್ಯೆಗಳು ಮತ್ತು ಇ-ಮೇಲ್ ಅನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ: ಅರ್ಜಿ ಆಹ್ವಾನ title=

ಬೆಂಗಳೂರು : ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ / ಪ್ರಸಾರ ಮಾಡಿದ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು “ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ -2022” ಅರ್ಜಿ ಆಹ್ವಾನಿಸಿದೆ.

ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ (ಟಿ.ವಿ), ವಿದ್ಯುನ್ಮಾನ ಮಾಧ್ಯಮ (ರೇಡಿಯೋ) ಹಾಗೂ ಆನ್‍ಲೈನ್ (ಇಂಟರ್‍ನೆಟ್) / ಸಾಮಾಜಿಕ ಜಾಲತಾಣ ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2022ರ ಸಾಲಿನಲ್ಲಿ ಮತದಾರರ ಜಾಗೃತಿ ಕುರಿತು ಪ್ರಕಟಿಸಿದ ಲೇಖನಗಳನ್ನು ಅಥವಾ ಪ್ರಸಾರ ಮಾಡಿದ ಸುದ್ದಿಗಳನ್ನು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬಹುದಾಗಿದೆ.

ಇದನ್ನೂ ಓದಿ: ಉಕ್ರೇನ್ ತೊರೆಯಲು ಭಾರತೀಯ ಪ್ರಜೆಗಳಿಗೆ ಸೂಚನೆ

ಮುದ್ರಣ ಮಾಧ್ಯಮದ ಸಂಸ್ಥೆಗಳು ತಮ್ಮ ಸುದ್ದಿಯ ತುಣುಕುಗಳನ್ನು ಪ್ರಕಟಿಸಿದ ದಿನಾಂಕ ಸೇರಿದಂತೆ ಮುದ್ರಣ ಮಾಡಿದ ಸುದ್ದಿ / ಲೇಖನಗಳು ಹಾಗೂ ಪ್ರಕಟವಾಗಿರುವ ಸುದ್ದಿಯ ಅಳತೆಯನ್ನು ಪಿಡಿಎಫ್ ಸಾಫ್ಟ್ ಕಾಪಿ / ಸಂಬಂಧಿಸಿದ ಜಾಲತಾಣದ ವಿಳಾಸ / ಪೂರ್ಣ ಅಳತೆಯ ವೃತ್ತಪತ್ರಿಕೆ ಛಾಯಾಪ್ರತಿ / ಲೇಖನಗಳನ್ನು, ನೇರ ಸಾರ್ವಜನಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಹ ಇತರೆ ಯಾವುದೇ ವಿವರಗಳನ್ನು ಸಲ್ಲಿಸುವುದು.

ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳು (ಎಲೆಕ್ಟ್ರಾನಿಕ್) ಮತ್ತು ರೇಡಿಯೋ (ಎಲೆಕ್ಟ್ರಾನಿಕ್) ಸಂಬಂಧಿತ ಅವಧಿಯಲ್ಲಿ ನಡೆಸಿದ ಪ್ರಚಾರ / ಕೆಲಸದ ಕುರಿತು ಸಂಕ್ಷಿಪ್ತವಾಗಿ ಮಾಹಿತಿಯನ್ನು, ಪ್ರಸಾರದ ಅವಧಿ ಮತ್ತು / ಟೆಲಿಕಾಸ್ಟ್ ಕಾರ್ಯಕ್ರಮವನ್ನು ಸಿಡಿ ಅಥವಾ ಡಿವಿಡಿ ಅಥವಾ ಪೆನ್ ಡ್ರೈವ್‍ನಲ್ಲಿ ಮತದಾರರ ಜಾಗೃತಿ ಕುರಿತು ಸುದ್ದಿ ವೈಶಿಷ್ಟ್ಯಗಳು ಮತ್ತು ಆ ಅವಧಿಯಲ್ಲಿ ಪ್ರಸಾರವಾದ ಪ್ರತಿ ಸ್ಥಳದ ಒಟ್ಟು ಸಮಯ, ಹಾಗೂ ಪ್ರಸಾರ ಸಮಯದ ಮೊತ್ತ ಸಲ್ಲಿಸುವುದು. ಆನ್‍ಲೈನ್ (ಇಂಟರ್‍ನೆಟ್) / ಸಾಮಾಜಿಕ ಮಾಧ್ಯಮಗಳು ಪ್ರಸಾರದ ಯಾವುದೇ ಕೆಲಸದ ಸಾರಾಂಶವನ್ನು ಒಳಗೊಂಡಿರುವಂತರಹ ಪೋಸ್ಟ್‍ಗಳ ಸಂಖ್ಯೆ / ಬ್ಲಾಗ್‍ಗಳು/ ಅಭಿಯಾನಗಳು/ ಟ್ವಿಟ್‍ಗಳು / ಲೇಖನಗಳು ಇತ್ಯಾದಿಗಳನ್ನು ಸಾಫ್ಟ್ ಕಾಪಿ ಅಥವಾ ಸಂಬಂಧಿತ ವೆಬ್ ವಿಳಾಸಕ್ಕೆ ಲಿಂಕ್‍ನೊಂದಿಗೆ ಸಲ್ಲಿಸುವುದು.

ಇದನ್ನೂ ಓದಿ: ಶ್ರೀಲಂಕಾದ ಲೇಖಕ ಶೆಹನ್ ಕರುಣಾತಿಲಕ ಅವರಿಗೆ 2022 ರ ಬೂಕರ್ ಪ್ರಶಸ್ತಿ

ಇಂಗ್ಲಿಶ್ /ಹಿಂದಿ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಸಲ್ಲಿಸಲಾಗುವ ಅರ್ಜಿಗಳ ಜೊತೆಗೆ ಇಂಗ್ಲಿಶ್ ಅನುವಾದದ ಪ್ರತಿಯೊಂದಿಗೆ ಸಲ್ಲಿಸುವುದು. ವಿಫಲವಾದರೆ ನಿರಾಕರಣೆಗೆ ಒಳಪಟ್ಟಿರುತ್ತದೆ. ಪ್ರಸಾರದ ವಿಷಯವನ್ನು ಸಲ್ಲಿಸುವ ಪ್ರವೇಶದಾರರು ಜ್ಯೂರಿ ವೈಶಿಷ್ಟ್ಯಗಳು / ಕಾರ್ಯಕ್ರಮದ ಮೊದಲ ಹತ್ತು ನಿಮಿಷಗಳನ್ನು ಮಾತ್ರ ಬಳಸಬಹುದಾಗಿರುತ್ತದೆ.

ಆಯೋಗದ ತೀರ್ಮಾನವು ಅಂತಿಮವಾಗಿದ್ದು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗವು ಎಲ್ಲಾ ಹಕ್ಕುಗಳನ್ನು ಹೊಂದಿದೆ. ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಮತ್ತು ಫ್ಯಾಕ್ಸ್ ಸಂಖ್ಯೆಗಳು ಮತ್ತು ಇ-ಮೇಲ್ ಅನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಅರ್ಜಿಗಳನ್ನು 30 ನೇ ನವೆಂಬರ್ 2022ರ ಒಳಗಾಗಿ, ನೇರವಾಗಿ ಶ್ರೀ ಲವಕುಶ್ ಯಾದವ್, ಅಧೀನ ಕಾರ್ಯದರ್ಶಿ (ಸಂವಹನ) ಭಾರತದ ಚುನಾವಣಾ ಆಯೋಗ, ನಿರ್ವಚನ ಸದನ, ಅಶೋಕ ರಸ್ತೆ, ನವದೆಹಲಿ 110001. ಹಾಗೂ ಇಮೇಲ್: division@eci.gov.in Ph. No: 011-23052033 ಸಲ್ಲಿಸುವುದು.

ಇದನ್ನೂ ಓದಿ: ಮುರುಘಾಮಠದಲ್ಲಿ ಬಿಎಸ್​ವೈ, ಶಾಮನೂರು ದುಡ್ಡಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

Trending News