Solar Eclipse 2022 Beliefs: ಇನ್ನೇನು ಕೆಲವೇ ಕ್ಷಣಗಳಲ್ಲಿ ಸೂರ್ಯನಿಗೆ ಭಾಗಶಃ ಗ್ರಹಣ ಹಿಡಿಯಲಿದೆ. ಆದರೂ ಕೂಡ ಈ ಗ್ರಹಣದಲ್ಲಿ ಸಂಪೂರ್ಣ ಸೂರ್ಯಗ್ರಹಣದ ಸ್ಥಿತಿ ನಿರ್ಮಾಣವಾಗಲಿದೆ. ಮನುಷ್ಯನಿಗೆ ಖಗೋಳಶಾಸ್ತ್ರ, ವಿಜ್ಞಾನ ಮತ್ತು ಬ್ರಹ್ಮಾಂಡದ ಘಟನೆಗಳ ಬಗ್ಗೆ ತಿಳಿದಿಲ್ಲದಿದ್ದಾಗ, ಪ್ರತಿ ಖಗೋಳ ಘಟನೆಗೆ ಹೆದರುತ್ತಿದ್ದ, ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದ. ಕಾಲ ಬದಲಾದಂತೆ ತನ್ನ ಬುದ್ಧಿ ಶಕ್ತಿಯಿಂದ ಗ್ರಹಣ ಯಾವಾಗ ಸಂಭವಿಸಿತು ಎಂಬುದನ್ನು ತಿಳಿದುಕೊಳ್ಳಲು ಆರಂಭಿಸಿದ ಮತ್ತು ಗ್ರಹಣವನ್ನು ಎಲ್ಲಾ ಅಲೌಕಿಕ ಅಥವಾ ಅತೀಂದ್ರಿಯ ಘಟನೆಗಳೊಂದಿಗೆ ಸಂಪರ್ಕಿಸಲು ಬಳಸಲಾರಂಭಿಸಿದ, ಅದರ ಬಗ್ಗೆ ಸಾವಿರಾರು ವರ್ಷಗಳಿಂದ ಹಲವಾರು ಕಥೆಗಳು ಚಾಲ್ತಿಯಲ್ಲಿವೆ.
ಸೂರ್ಯಗ್ರಹಣ ಕೂಡ ಭಯ ಹುಟ್ಟಿಸುತ್ತದೆ. ಕೆಲವರು ಇದನ್ನು ಅಪಶಕುನ ಎಂದು ಅನುಭವಿಸುತ್ತಾರೆ, ಕೆಲವರು ಸೂರ್ಯನಿಗೆ ಏನಾದರೂ ಅಹಿತಕರವಾದಾಗ ಈ ಪರಿಸ್ಥಿತಿ ಬರುತ್ತದೆ ಎಂದು ಭಾವಿಸುತ್ತಾರೆ. ಈ ಪ್ರಪಂಚದ ಒಂದು ಪ್ರದೇಶದ ಜನರು ಮೊದಲು ಸೂರ್ಯನನ್ನು ಪ್ರೇಮಿ ಮತ್ತು ಚಂದ್ರನು ಅವನ ಗೆಳತಿ ಎಂದು ನಂಬಿದ್ದರು. ಈ ಇಬ್ಬರ ಭೇಟಿ ಅಪರೂಪ ಎಂದು ಅವರು ಭಾವಿಸಿದ್ದರು. ಒಂದು ವೇಳೆ ಇಬ್ಬರ ಭೇಟಿ ನಡೆದರೆ ಅವರು ತಮ್ಮ ಮಿಲನ ಕ್ರಿಯೆ ಮೇಲೆ ವಿಶ್ವದ ಕಣ್ಣು ಬೀಳಬಾರದು ಎಂದು ಭಾವಿಸುತ್ತಾರೆ ಎಂದು ಆ ಜನರು ನಂಬಿದ್ದರು.
ದಕ್ಷಿಣ ಪ್ರಶಾಂತ ಕ್ಷೇತ್ರದ ಮೂಲ ನಿವಾಸಿಗಳಾಗಿರುವ ಅಮೆರಿಕನ್ ಬುಡಕಟ್ಟು ಜನಾಂಗ ಮತ್ತು ಅಮೆರಿಕದ ವಾಯುವ್ಯ ಕರಾವಳಿಯಲ್ಲಿ ವಾಸಿಸುವವರು, ಸೂರ್ಯ ಮತ್ತು ಚಂದ್ರರು ಪ್ರೇಮಿಗಳು ಎಂದು ನಂಬಿದ್ದರು. ಗ್ರಹಣದ ಸಮಯದಲ್ಲಿ, ಸೂರ್ಯ ಭೂಮಿಯನ್ನು ಆವರಿಸುವ ಮೂಲಕ ಪ್ರೀತಿ ಮಾಡುತ್ತಾರೆ. ಈಗ ಎಲ್ಲರಿಗೂ ತೋರಿಸಿಕೊಂಡು ಪ್ರೀತಿ ಮಾಡಲು ಸಾಧ್ಯವಿಲ್ಲ, ಹೀಗಾಗಿ ತಮ್ಮ ರಾಸಲೀಲೆ ಜಗತ್ತಿನ ಕಣ್ಣಿಗೆ ಬೀಳಬಾರದು ಎಂಬುದನ್ನು ಇಬ್ಬರು ಬಯಸುತ್ತಾರೆ ಎಂದು ನಂಬಿದ್ದಾರೆ.
ಸಾಮಾನ್ಯವಾಗಿ, ಗ್ರಹಣವನ್ನು ಅಪಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಸಂಭವಿಸಿದ ನಂತರ, ಈ ಗ್ರಹಣ ಜಗತ್ತಿನಲ್ಲಿ ಕೆಲ ಕೆಟ್ಟ ಸಂಗತಿಗಳನ್ನು ತರುತ್ತದೆ ಅಥವಾ ಅದು ಒಳ್ಳೆಯದು ಎಂದು ಕರೆಯಲಾಗದ ಯಾವುದಾದರೊಂದು ಘಟನೆಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.
ವಿಜ್ಞಾನದ ರಹಸ್ಯದ ಹೊರತಾಗಿಯೂ ಮೂಢನಂಬಿಕೆ
ಹಿಂದೂ ಪುರಾಣಗಳಲ್ಲಿ, ಇದು ಅಮೃತಮಂಥನ ಮತ್ತು ರಾಹು-ಕೇತು ಎಂಬ ರಾಕ್ಷಸರ ಕಥೆಯೊಂದಿಗೆ ಸಂಬಂಧಿಸಿದೆ. ಗ್ರಹಣವು ಮನುಷ್ಯನಿಗೆ ಯಾವಾಗಲೂ ಆಶ್ಚರ್ಯ ಮತ್ತು ಭಯವನ್ನುಂಟುಮಾಡುತ್ತದೆ, ಸಹಜವಾಗಿ, ಈಗ ಜಗತ್ತಿನಲ್ಲಿ ವಿಜ್ಞಾನದ ನಿಯಮವಿದೆ, ಆದರೆ ಇದರೊಂದಿಗೆ ಧಾರ್ಮಿಕ ಮತ್ತು ಇತರ ಮೂಢನಂಬಿಕೆಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ.
ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗುತ್ತದೆ
ಇಂದಿಗೂ ಕೂಡ ವಿಶ್ವಾದ್ಯಂತೆ ಗ್ರಹಣದ ಸಮಯದಲ್ಲಿ ಈ ಕಾರಣಕ್ಕಾಗಿ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗುತ್ತದೆ. ಈ ಬಾರಿಯೇ, ಭಾರತದಲ್ಲಿ ದೀಪಾವಳಿಯ ಮರುದಿನ ಗೋವರ್ಧನ ಪೂಜೆ, ಸೂರ್ಯಗ್ರಹಣದಿಂದಾಗಿ ಒಂದು ದಿನ ಮುಂದೂಡಲಾಗಿದೆ. ಅಂದರೆ ಗ್ರಹಣ ಇನ್ನೂ ಮೂಢನಂಬಿಕೆಯ ಪಿತಾಮಹ ಎಂದರೆ ತಪ್ಪಾಗಲಾರದು.
ಹನುಮ ಸೂರ್ಯನನ್ನು ತಿಂದು ಹಾಕಿದ್ದ
ಹಿಂದೂ ನಂಬಿಕೆಗಳ ಪ್ರಕಾರ ಹನುಮಂತ ಸೂರ್ಯನನ್ನು ಸ್ವಲ್ಪಸಮಯದವರೆಗೆ ನುಂಗಿಹಾಕುವುದರಿಂದ ಕೂಡ ಸೂರ್ಯಗ್ರಹಣ ಸಂಭವಿಸುತ್ತದೆ ಎನ್ನಲಾಗುತ್ತದೆ. ಬಾಲ ಮಾರುತಿ ಸೂರ್ಯನನ್ನು ಹಣ್ಣು ಎಂದು ಭಾವಿಸಿ ಆತನನ್ನು ತಿನ್ನಲು ಪ್ರಾರಮ್ಭಿಸಿದ್ದನು ಎನ್ನಲಾಗುತ್ತದೆ. ಆದರೆ, ಬಳಿಕ ಆತನನ್ನು ಹೇಗೂ ತಡೆಯಲಾಯಿತು ಮತ್ತು ಸೂರ್ಯನನ್ನು ಬಿಡಿಸಲಾಯಿತು ಎನ್ನಲಾಗುತ್ತದೆ.
ಸೂರ್ಯನನ್ನು ನುಂಗಲು ಯತ್ನಿಸಿದ ಡ್ರ್ಯಾಗನ್
ಪಶ್ಚಿಮ ಏಷ್ಯಾದಲ್ಲಿ, ಡ್ರ್ಯಾಗನ್ ಸೂರ್ಯನನ್ನು ನುಂಗಲು ಪ್ರಯತ್ನಿಸುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ಗ್ರಹಣ ಸಮಯದಲ್ಲಿ, ಅಲ್ಲಿ ಡ್ರಮ್ಸ್ ಬಾರಿಸಿ ಡ್ರ್ಯಾಗನ್ ಅನ್ನು ಓಡಿಸಲಾಯಿತು ಎಂದು ಹೇಳಲಾಗುತ್ತದೆ. ಚೀನಾದಲ್ಲಿ, ಸ್ವರ್ಗದಿಂದ ಬಂದ ನಾಯಿಯೊಂದು ಸೂರ್ಯ ಮತ್ತು ಚಂದ್ರನನ್ನು ನುಂಗಿ ಹಾಕುವುದರಿಂದ ಈ ಗ್ರಹಣಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿತ್ತು. ಪೆರುವಿಯನ್ನರ ಪ್ರಕಾರ, ಇದು ದೈತ್ಯ ಪೂಮಾ. ಗ್ರಹಣದ ಸಮಯದಲ್ಲಿ ಜೋಡಿ ಆಕಾಶ ತೋಳಗಳು ಸೂರ್ಯನ ಮೇಲೆ ದಾಳಿ ಮಾಡುತ್ತವೆ ಎಂಬ ನಂಬಿಕೆ ಇತ್ತು.
ಸ್ವರ್ಗೀಯ ಶಕ್ತಿಗಳು ಕೋಪದ ಪರಿಣಾಮ ಇದು
ಪ್ರಾಚೀನ ಕಾಲದಲ್ಲಿ ಗ್ರಹಣ ಸಂಭವಿಸಿದಾಗ ಜನರು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಗ್ರಹಣ ಸಮಯದಲ್ಲಿ ಸ್ವರ್ಗೀಯ ಶಕ್ತಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿವೆ ಎಂದು ಅವರು ಭಾವಿಸುತ್ತಿದ್ದರು, ಆದ್ದರಿಂದ ಈ ಆಕಾಶ ಶಕ್ತಿಗಳನ್ನು ಮೆಚ್ಚಿಸಲು ಎಲ್ಲಾ ವಿವಾದಗಳನ್ನು ಪರಿಹರಿಸಬೇಕು ಎಂದು ಹೇಳಲಾಗುತ್ತಿತ್ತು.
ಪ್ರಳಯ ಸೂಚಕ ದಿನ
ಟೋಗೋ ಮತ್ತು ಬೆನಿನ್‌ನಲ್ಲಿ, ಬಟಮಲೈಬಾ ಜನರು ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರರು ಪರಸ್ಪರ ಜಗಳವಾಡುತ್ತಾರೆ ಎಂದು ನಂಬಿದ್ದರು, ಆದ್ದರಿಂದ ಅವರ ಜಗಳವನ್ನು ಕೊನೆಗೊಳಿಸಲು, ತಮ್ಮ ತಮ್ಮ ವಿವಾದಗಳನ್ನು ಗ್ರಹಣದ ಸಮಯದಲ್ಲಿ ಪರಿಹರಿಸಿಕೊಳ್ಳಬೇಕು ಎಂದು ಅವರು ನಂಬುತ್ತಿದ್ದರು. ಬೈಬಲ್ನಲ್ಲಿ, ಗ್ರಹಣವನ್ನು ಹತ್ಯಾಕಾಂಡಕ್ಕೆ ಸಂಪರ್ಕಿಸುವ ಮೂಲಕ ನೋಡಲಾಗಿದೆ. ಪ್ರಳಯ ದಿನದಂದು ಸೂರ್ಯನು ಸಂಪೂರ್ಣವಾಗಿ ಕಪ್ಪಾಗುತ್ತಾನೆ ಎಂದು ಬೈಬಲ್‌ನಲ್ಲಿ ಉಲ್ಲೇಖಿಸಲಾಗಿದೆ. ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿ ಅದೇ ಸಂಭವಿಸುತ್ತದೆ ಹೇಳಲಾಗಿದೆ
ಇದನ್ನೂ ಓದಿ-ಈ ರಾಶಿಯವರ ವೃತ್ತಿ-ವ್ಯವಹಾರದಲ್ಲಿ ಅದ್ಭುತ ಯಶಸ್ಸು ನೀಡಲಿದ್ದಾನೆ ಸೂರ್ಯ ದೇವ
ವಾಸ್ತವದಲ್ಲಿ, ಪ್ರಾಚೀನ ಕಾಲದಲ್ಲಿ, ಮನುಷ್ಯನ ದೈನಂದಿನ ದಿನಚರಿಯು ಪ್ರಕೃತಿಯ ನಿಯಮಗಳ ಆಧಾರದ ಮೇಲೆ ನಿಯಂತ್ರಿಸಲ್ಪಡುತ್ತದೆ. ಈ ನಿಯಮಗಳಲ್ಲಿ ಯಾವುದೇ ಬದಲಾವಣೆಯು ಮನುಷ್ಯನನ್ನು ಚಂಚಲಗೊಳಿಸಲು ಸಾಕಾಗಿತ್ತು ಎಂಬುದು ಮಾತ್ರ ನಿಜ.
ಇದನ್ನೂ ಓದಿ-ಈ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಸೂರ್ಯ ಗ್ರಹಣ .!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.