Dare To Dream: ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’; ನಾಮನಿರ್ದೇಶನಗಳು ಈಗ ತೆರೆದಿವೆ!

‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’ ತಮ್ಮ ಹೋರಾಟದ ಮನೋಭಾವದಿಂದ ಅತ್ಯುತ್ತಮ ಸಾಧನೆ ತೋರಿ ಅನೇಕರಿಗೆ ಸ್ಫೂರ್ತಿಯಾದ ನಾಯಕರನ್ನು ಗೌರವಿಸುತ್ತಿದೆ.

Written by - Zee Kannada News Desk | Last Updated : Oct 26, 2022, 04:08 PM IST
  • ‘ಡೇರ್ ಟು ಡ್ರೀಮ್ ಅವಾರ್ಡ್ಸ್ ಸೀಸನ್ 4’ Zee Business ಸಹಭಾಗಿತ್ವದಲ್ಲಿ SAP ಇಂಡಿಯಾದಿಂದ ಆಯೋಜನೆ
  • SME ಪರಿಸರ ವ್ಯವಸ್ಥೆಯ ನಿಜವಾದ ಸೂಪರ್‌ಹೀರೋಗಳನ್ನು ಗುರುತಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ
  • ಹೋರಾಟ ಮನೋಭಾವದಿಂದ ಅತ್ಯುತ್ತಮ ಸಾಧನೆ ತೋರಿ ಅನೇಕರಿಗೆ ಸ್ಫೂರ್ತಿಯಾದ ನಾಯಕರನ್ನು ಗೌರವಿಸಲಾಗುತ್ತದೆ
Dare To Dream: ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’; ನಾಮನಿರ್ದೇಶನಗಳು ಈಗ ತೆರೆದಿವೆ!   title=
‘ಡೇರ್ ಟು ಡ್ರೀಮ್ ಅವಾರ್ಡ್ಸ್ ಸೀಸನ್ 4’

ನವದೆಹಲಿ: ಪ್ರತಿಯೊಬ್ಬ ಸೂಪರ್ ಹೀರೋ ಕೇಪ್ ಧರಿಸುವುದಿಲ್ಲ. ತಾನು ಸೂಪರ್ ಹೀರೋ ಅನ್ನೋದನ್ನ ಸಾಬೀತುಪಡಿಸಲು ಧೈರ್ಯವೇ ಅವರಿಗೆ ಮುಖ್ಯ ಅಸ್ತ್ರವಾಗಿರುತ್ತದೆ. ಪ್ರಸಕ್ತ ವರ್ಷ ‘ಡೇರ್ ಟು ಡ್ರೀಮ್ ಅವಾರ್ಡ್ಸ್ ಸೀಸನ್ 4’ Zee Business ಸಹಭಾಗಿತ್ವದಲ್ಲಿ SAP ಇಂಡಿಯಾದಿಂದ ಆಯೋಜಿಸಲಾಗುತ್ತಿದೆ. SME ಪರಿಸರ ವ್ಯವಸ್ಥೆಯ ನಿಜವಾದ ಸೂಪರ್‌ಹೀರೋಗಳನ್ನು ಗುರುತಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರಿಗೂ ಹಲವಾರು ಸವಾಲುಗಳನ್ನು ಒಡ್ಡಿತು. ವ್ಯಾಪಾರಗಳು ಆದಾಯ ಗಳಿಸುವ ಕಠಿಣ ಸವಾಲನ್ನು ಎದುರಿಸಿದವು. ದೇಶದಲ್ಲಿ ಹೇರಲಾಗಿದ್ದ ಕೋವಿಡ್ ಲಾಕ್‌ಡೌನ್ ಆರ್ಥಿಕತೆ ಸೇರಿದಂತೆ ಪ್ರತಿಯೊಬ್ಬರ ಮೇಲೂ ದೊಡ್ಡ ಪರಿಣಾಮ ಬೀರಿತು.   

ಇಂತಹ ಕಠಿಣ ಸಂದರ್ಭದಲ್ಲಿಯೂ ಕೆಲವರು ಬಂದ ಎಲ್ಲಾ ಸವಾಲುಗಳನ್ನು ಅತ್ಯಂತ ಧೈರ್ಯದಿಂದ ಎದುರಿಸಿದರು. ತಮ್ಮ ಗಟ್ಟಿ ಮನಸ್ಸು ಮತ್ತು ನಿರ್ಧಾರದಿಂದ ಬಂದ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತರು. ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’ ತಮ್ಮ ಹೋರಾಟದ ಮನೋಭಾವದಿಂದ ಅತ್ಯುತ್ತಮ ಸಾಧನೆ ತೋರಿ ಅನೇಕರಿಗೆ ಸ್ಫೂರ್ತಿಯಾದ ನಾಯಕರನ್ನು ಗೌರವಿಸುತ್ತಿದೆ. ಈ ಪ್ರಶಸ್ತಿಗಳು ಇತರರಿಗೆ ಸ್ಫೂರ್ತಿ ನೀಡುವ ಸಾಧಕರನ್ನು ಗೌರವಿಸುತ್ತದೆ. ‘ಎಲ್ಲವೂ ಸಾಧ್ಯ’ ಎಂಬ ಮಾತನ್ನು ನಂಬದೆ ಅದನ್ನು ಮಾಡಿ ತೋರಿಸಿದ ನಿಜವಾದ ಸಾಧಕರನ್ನು ಈ ವಿಶೇಷ ಸಂದರ್ಭದಲ್ಲಿ ಗೌರವಿಲಾಗುತ್ತದೆ.

‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’ಗಾಗಿ ತೀರ್ಪುಗಾರರ ಪರಿಚಯ  

ನಮ್ಮ ಜ್ಯೂರಿ ಆಫ್ ಡೇರ್ ಟು ಡ್ರೀಮ್ ಅವಾರ್ಡ್ಸ್ ತಂಡವು ಸಂಕೀರ್ಣವಾದ ನಾಮನಿರ್ದೇಶನ ಪ್ರಕ್ರಿಯೆಯ ಮೂಲಕ ವಿಜೇತರನ್ನು ಅಂತಿಮಗೊಳಿಸುತ್ತದೆ ಮತ್ತು ವಿವಿಧ ಗೊತ್ತುಪಡಿಸಿದ ಪ್ರಶಸ್ತಿಗಳ ವಿಭಾಗಗಳಲ್ಲಿ ವೈವಿಧ್ಯಮಯ ಹಿನ್ನೆಲೆಯಿಂದ ವಿಜೇತರನ್ನು ಅಂತಿಮಗೊಳಿಸುತ್ತದೆ. ನಾವೀನ್ಯತೆ, ತಂತ್ರಜ್ಞಾನ, ಡಿಜಿಟಲ್ ರೂಪಾಂತರ(Digital Transformation) ಮತ್ತು ಗ್ರಾಹಕರ ಸ್ವಾಧೀನದಲ್ಲಿ ಪ್ರವರ್ತಕರಾಗಿರುವ ಬ್ಯುಸಿನೆಸ್ ಲೀಡರ್‍ಗಳನ್ನು ತೀರ್ಪುಗಾರರು ಗುರುತಿಸುತ್ತಾರೆ. ನಾಯಕತ್ವವು ಒಂದು ಕ್ರಿಯೆ ಮತ್ತು ಸ್ಥಾನವಲ್ಲ ಎಂದು ಸಾಬೀತುಪಡಿಸುವವರನ್ನು ಗೌರವಿಸುವುದು ಇವರ ಗುರಿಯಾಗಿರುತ್ತದೆ.

ಪ್ರಮುಖ ತೀರ್ಪುಗಾರರ ಸದಸ್ಯರಲ್ಲಿ BSE SME & ಸ್ಟಾರ್ಟ್‌ಅಪ್‌ಗಳ ಮುಖ್ಯಸ್ಥರಾದ ಅಜಯ್ ಠಾಕೂರ್, ಅಕ್ಯೂಟ್ ರೇಟಿಂಗ್ಸ್ & ರಿಸರ್ಚ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ವಿಶ್ಲೇಷಣಾತ್ಮಕ ಅಧಿಕಾರಿ ಸುಮನ್ ಚೌಧರಿ ಮತ್ತು Zee Businessನ ವ್ಯವಸ್ಥಾಪಕ ಸಂಪಾದಕ ಅನಿಲ್ ಸಿಂಘ್ವಿ ಇರುತ್ತಾರೆ. ಇವರನ್ನು ನಮ್ಮValidation and Process Partners ಎಂದು ಘೋಷಿಸಲು ಸಂತೋಷವಾಗುತ್ತದೆ. 

ಇದನ್ನೂ ಓದಿ: Dare To Dream Awards 2022: SAP ಇಂಡಿಯಾ ಮತ್ತು Zee ಬಿಸ್ನೆಸ್ ವತಿಯಿಂದ ಡೇರ್ ಟು ಡ್ರೀಮ್ ಅವಾರ್ಡ್ಸ್ 2022ರ 4ನೇ ಆವೃತ್ತಿ

ಈ ಬಗ್ಗೆ ಮಾತನಾಡಿರುವ ಸುಮನ್ ಚೌಧರಿ, ‘ಭಾರತವು ಜಾಗತಿಕವಾಗಿ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಯೋಜನೆಗಳಿಗೆ ಪ್ರಥಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ. ಇದು ದೇಶದ ಎಲ್ಲಾ ಕೈಗಾರಿಕೆಗಳಲ್ಲಿಯೂ ವ್ಯಾಪಿಸಿದೆ. ‘ಡೇರ್ ಟು ಡ್ರೀಮ್’ ಉಪಕ್ರಮವು ಎಸ್‌ಎಂಇಗಳು ಮತ್ತು ಎಂಎಸ್‌ಎಂಇಗಳಿಗೆ ಉತ್ತೇಜನ ನೀಡುವುದಷ್ಟೇ ಅಲ್ಲ, ಇಂಡಿಯಾ ಇಂಕ್‌ನ ಒಟ್ಟಾರೆ ಬೆಳವಣಿಗೆಗೆ. ಈ ಉಪಕ್ರಮದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಇದೊಂದು ಮಹತ್ವದ ಜವಾಬ್ದಾರಿಯಾಗಿದೆ’ ಎಂದು ಹೇಳಿದ್ದಾರೆ.

 ಅನಿಲ್ ಸಿಂಘ್ವಿ ಮಾತನಾಡಿ, ‘ಭಾರತಕ್ಕೆ ಭಾರತವನ್ನು ಸಂಪರ್ಕಿಸಿರುವ ಎಂಎಸ್‌ಎಂಇಗಳು ಇಂಡಿಯಾ ಇಂಕ್‌ನ ಅಸಾಧಾರಣ ಹೀರೋಗಳಲ್ಲಿ ಒಬ್ಬರು. ಎಸ್‌ಎಪಿ ಸಹಯೋಗದೊಂದಿಗೆ ಪ್ರಾರಂಭಿಸಲಾದ ‘ಡೇರ್ ಟು ಡ್ರೀಮ್’ ಉಪಕ್ರಮವು ಅವರ ಅಸಾಮಾನ್ಯ ಕಥೆಗಳನ್ನು ಜಗತ್ತಿಗೆ ಪರಿಚಯಿಸಲಿದೆ. ಇದರಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗಾವಕಾಶಗಳ ಮೂಲಕ ಸಬಲರಾಗಿದ್ದಾರೆ ಮತ್ತು ಉದ್ಯಮಶೀಲತೆಯನ್ನು ಹೊಂದಿದ್ದಾರೆ. ಈ ಉಪಕ್ರಮವು ಇದುವರೆಗೂ ಗುರುತಿಸಿರದ ಸಾಧಕರಿಗೆ ಹೆಚ್ಚಿನ ಮನ್ನಣೆ, ಮೆಚ್ಚುಗೆ ಮತ್ತು ಯಶಸ್ಸನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ’ ಅಂತಾ ಹೇಳಿದ್ದಾರೆ.

ಅಜಯ್ ಠಾಕೂರ್ ಮಾತನಾಡಿ, ‘ಡೇರ್ ಟು ಡ್ರೀಮ್’ ಪ್ರಶಸ್ತಿಗಳು ನವ ಭಾರತದ ಪ್ರವರ್ತಕ(Pioneers)ರಾದವರನ್ನು ಗೌರವಿಸುತ್ತದೆ. ನಮ್ಮ ಆಯ್ಕೆ ಪ್ರಕ್ರಿಯೆಯ ಮೂಲಕ ಭಾರತದ ಅತ್ಯುತ್ತಮ ಪ್ರವರ್ತಕರನ್ನು ಗೌರವಿಸುವುದು ನಮ್ಮ ಗುರಿಯಾಗಿದೆ. ಸ್ಟಾರ್ಟ್‌ಅಪ್‌ಗಳು ವಿಕಸನಗೊಳ್ಳಲು ಮತ್ತು ಬೆಳಗಲು ಇದು ಅತ್ಯುತ್ತಮ ಸಮಯ. ಸಾಧಕರ ಕಥೆಯನ್ನು ಜಗತ್ತಿಗೆ ಪರಿಚಯಿಸಲು ಅರ್ಹರಾದವರೆಲ್ಲರೂ ನಾಮನಿರ್ದೇಶನಗಳಿಗೆ ತಮ್ಮ ಹೆಸರು ನೀಡಿದ್ದಾರೆಂದು ನಾವು ಭಾವಿಸುತ್ತೇವೆ’ ಅಂತಾ ಹೇಳಿದ್ದಾರೆ.

ಉಜ್ವಲ ಭವಿಷ್ಯಕ್ಕೆ ಸುವರ್ಣಾವಕಾಶ

ಪ್ರಪಂಚದೊಂದಿಗೆ ಹಂಚಿಕೊಳ್ಳಲು ನೀವು ಸ್ಪೂರ್ತಿದಾಯಕ ಕಥೆಯನ್ನು ಹೊಂದಿದ್ದರೆ ಅಥವಾ ನಿಮ್ಮ ಸುತ್ತಮುತ್ತ ಯಾರಾದಾರೂ ಅಂತಹ ಸಾಧಕರಿದ್ದರೆ ಇಲ್ಲಿದೆ ಸುವರ್ಣಾವಕಾಶ. ಉದ್ಯಮಶೀಲತೆಯ ಉತ್ಸಾಹವನ್ನು ಆಚರಿಸುವ ಈ ಅಸ್ಕರ್ ಈವೆಂಟ್‌ನಲ್ಲಿ ನಿಮ್ಮನ್ನು, ನಿಮ್ಮ ಪರಿಚಯಸ್ಥರನ್ನು ಅಥವಾ ನಿಮ್ಮ ಸಂಸ್ಥೆಯನ್ನು ಗುರುತಿಸಲು ನೀವು ನಾಮನಿರ್ದೇಶನ ಮಾಡಬಹುದಾಗಿದೆ.

ನೀವು ಬ್ಯುಸಿನೆಸ್ ಲೀಡರ್ ಆಗಿದ್ದರೆ ನಿಮ್ಮನ್ನು ಅಥವಾ ನಿಮ್ಮ ಸಂಸ್ಥೆಯನ್ನು ಅತಿದೊಡ್ಡ ವಾಣಿಜ್ಯೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ! ನಾಯಕತ್ವ ಮತ್ತು ನಾವೀನ್ಯತೆಯನ್ನು ಆಚರಿಸುವ ಈವೆಂಟ್‌ನಲ್ಲಿ ಭಾಗವಹಿಸಲು 29ನೇ ಅಕ್ಟೋಬರ್ 2022ರ ಮೊದಲು ನಿಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಲು ‘ಡೇರ್ ಟು ಡ್ರೀಮ್ ಅವಾರ್ಡ್ಸ್’ ವೆಬ್‌ಸೈಟ್‌ಗೆ ಭೇಟಿ ನೀಡಿ. ಉದ್ಯಮದ ಇತರ ನಾಯಕರನ್ನು ಭೇಟಿ ಮಾಡಲು ಮತ್ತು ನಿಮ್ಮ ಚಿಂತನೆಯ ನಾಯಕತ್ವ ಮತ್ತು ನಾವೀನ್ಯತೆ ಪ್ರಕ್ರಿಯೆಗಾಗಿ ಗುರುತಿಸಿಕೊಳ್ಳಲು ಈ ರೋಮಾಂಚಕಾರಿ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

Click here to get started!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News