Visa Flexibility: ಭಾರತದ ಜೊತೆಗಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು ಬಿಲಿಯನ್ ಪೌಂಡ್ ಗಳಿಗೆ ಹೆಚ್ಚಿಸುವ ಉದ್ದೇಶದಿಂದ ಭಾರತಕ್ಕೆ ಹೆಚ್ಚಿನ ವೀಸಾಗಳನ್ನು ನೀಡಲು ಸಿದ್ಧ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಕ್ಕೆ ತೆರಳುವಾಗ ವಿಮಾನದಲ್ಲಿ ಮಾತನಾಡಿರುವ ಜಾನ್ಸನ್, ಮಾತುಕತೆಗಳನ್ನು ಸ್ಥಗಿತಗೊಳಿಸಬಹುದಾದ ಸಮಸ್ಯೆಗಳ ಬಗ್ಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ.
"ನಾನು ಈ ದೇಶದಿಂದ ಬರುವ ಪ್ರತಿಭಾವಂತರ ಪರವಾಗಿ ಯಾವಾಗಲೂ ಇದ್ದೇನೆ" ಎಂದು ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ನಮ್ಮ ಆರ್ಥಿಕತೆಯಲ್ಲಿ ನಾವು ನೂರಾರು ಸಾವಿರ ಜನರಿಂದ ನಾವು ಹಿಂದೆ ಇದ್ದೇವೆ. ಹೀಗಾಗಿ ನಾವು ಪ್ರಗತಿಪರ ವಿಧಾನಗಳನ್ನು ಹೊಂದಿರಬೇಕು ಮತ್ತು ನಾವು ಅದನ್ನು ಸಾಧಿಸುತ್ತೇವೆ" ಎಂದು ಅವರು ಹೇಳಿದ್ದಾರೆ.
"ಐರೋಪ್ಯ ಒಕ್ಕೂಟದ ಸಾಮಾನ್ಯ ವ್ಯಾಪಾರ ನೀತಿಯಿಂದ ಮುಕ್ತವಾಗಿ, ಇಂಡೋ-ಪೆಸಿಫಿಕ್ ಪ್ರದೇಶದ ಸುತ್ತ ವೇಗವಾಗಿ-ಬೆಳೆಯುತ್ತಿರುವ ಆರ್ಥಿಕತೆಯತ್ತ ತನ್ನ ನೀತಿಯನ್ನು ಬದಲಾಯಿಸಲು ಒಂದು ಸದಸ್ಯ ರಾಷ್ಟ್ರವಾಗಿ ಬ್ರಿಟನ್ ಗೆ, ಬ್ರೆಕ್ಸಿಟ್ ನಂತರದ ಆದ್ಯತೆಗಳಲ್ಲಿ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಕೂಡ ಒಂದಾಗಿದೆ" ಎಂದು ಅವರು ಹೇಳಿದ್ದಾರೆ.
ಬ್ರಿಟನ್‌ನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಭಾರತೀಯರಿಗೆ ಹೆಚ್ಚಿನ ಅವಕಾಶಗಳನ್ನು ಭಾರತ ಬಯಸುತ್ತಿದೆ ಮತ್ತು ಯಾವುದೇ ವ್ಯಾಪಾರ ಒಪ್ಪಂದವು ಆ ದೇಶಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ನಿಯಮಗಳ ಸಡಿಲಿಕೆ ಮತ್ತು ಶುಲ್ಕ ಇಳಿಕೆ ಒಳಗೊಂಡಿರುತ್ತದೆ.
ಭಾರತ ಮತ್ತು ಭಾರತದ ಈ ಹಿಂದಿನ ವಸಾಹತುಶಾಹಿ ಶಕ್ತಿ ಬ್ರಿಟನ್ ಈಗಾಗಲೇ ಬಲಿಷ್ಠ ವ್ಯಾಪಾರ ಸಂಬಂಧಗಳನ್ನು ಹಂಚಿಕೊಂಡಿವೆ ಮತ್ತು ದಶಕಗಳ ವಲಸೆಯ ನಂತರ ಭಾರತೀಯ ಮೂಲದ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಬ್ರಿಟನ್‌ನಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ-NRI: ಮುಂದಿನ 1 ವರ್ಷದಲ್ಲಿ 8 ಲಕ್ಷ ವಿಸಾ ಪ್ರಕ್ರೀಯೆಗೊಳಿಸುವುದಾಗಿ ಹೇಳಿದ US!
ಭಾರತದ ಮಧ್ಯಮವರ್ಗದವರ ಆದಾಯವನ್ನು ಗುರಿಯಾಗಿಸಿ, ಅವರನ್ನು ಸ್ಕಾಚ್ ವಿಸ್ಕಿಯಂತಹ ತನ್ನ ಪ್ರಿಮಿಯಂ ಬ್ರಿಟಿಷ್ ಉತ್ಪನ್ನಗಳಿಗೆ ಗ್ರಾಹಕರನ್ನಾಗಿಸಲು ಬ್ರಿಟನ್ ಬಯಸುತ್ತಿದೆ. ಇದರ ಜೊತೆಗೆ ಭಾರತವನ್ನು ತನ್ನ ಹಸಿರು ತಂತ್ರಜ್ಞಾನದ ಗ್ರಾಹಕ ರಾಷ್ಟ್ರವನ್ನಾಗಿಸಲು ಮತ್ತು ಸೇವಾ ವ್ಯಾಪಾರವನ್ನು ಬಲಪಡಿಸಲು ಅದು ಬಯಸುತ್ತಿದೆ.
ಇದನ್ನೂ ಓದಿ-ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ತೆರೆಯಬೇಕೇ? ಈ ನಿಯಮ ಅನುಸರಿಸಿ
ಭಾರತದೊಂದಿಗಿನ ಬ್ರಿಟನ್ ವ್ಯಾಪಾರ ಒಪ್ಪಂದವು ಭಾರತಕ್ಕೆ ಬ್ರಿಟಿಷ್ ರಫ್ತುಗಳನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿದ್ದು, 2035 ರ ವೇಳೆಗೆ ಒಟ್ಟು ವ್ಯಾಪಾರವನ್ನು ವರ್ಷಕ್ಕೆ 28 ಬಿಲಿಯನ್ ಪೌಂಡ್‌ಗಳಷ್ಟು ($38 ಬಿಲಿಯನ್) ಹೆಚ್ಚಿಸುವ ಗುರಿ ಹೊಂದಿದೆ ಎಂದು ಬ್ರಿಟನ್ ಹೇಳಿದೆ. ಬ್ರಿಟಿಷ್ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಭಾರತದೊಂದಿಗಿನ ಒಟ್ಟು ವ್ಯಾಪಾರವು 23 ಬಿಲಿಯನ್ ಪೌಂಡ್‌ಗಳ ಮೌಲ್ಯದ್ದಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.