ಶೀಘ್ರದಲ್ಲೇ ಕನ್ನಡ ಬಿಗ್‌ಬಾಸ್‌ ಸೀಸನ್ 11 ಆರಂಭ.. ಕಂಟಸ್ಟಂಟ್‌ ಲಿಸ್ಟ್‌ನಲ್ಲಿದ್ದಾರೆ ಈ ಖ್ಯಾತ ಸಿರೀಯಲ್‌ ನಟಿ!

Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಶೀಘ್ರದಲ್ಲೇ ಆರಂಭವಾಗಲಿದ್ದು, ಸದ್ಯ ಕೆಲ ಸಂಭಾವ್ಯ ಸ್ಪರ್ಧಿಗಳ ಹೆಸರೂ ಕೂಡ ಹೊರಬಿದ್ದಿದೆ..
 

1 /6

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಒಂದಾಗಿರುವ ಬಿಗ್‌ಬಾಸ್‌ 11ನೇ ಸೀಸನ್‌ ಇದೇ ಇದೇ ಅಕ್ಟೋಬರ್‌ ನಿಂದ ಆರಂಭವಾಗಲಿದೆ ಎನ್ನಲಾಗ್ತಿದೆ.. ಅದಲ್ಲದೇ ಭರ್ಜರಿ ತಯಾರಿ ಕೂಡ ನಡೆದಿದೆ..   

2 /6

ದೊಡ್ಮನೆಗೆ ಹೊಸ ಬಣ್ಣ ನೀಡುವ ಕೆಲಸವೂ ಸಾಗುತ್ತಿದೆ ಎಂದು ಹೇಳಲಾಗಿದೆ.. ಇದರ ಜೊತೆಗೆ ಈ ಬಾರಿ ಬಿಗ್‌ಮನೆಗೆ ಯಾರೆಲ್ಲ ಬರಬಹುದು ಎನ್ನುವುದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಿದೆ.. ಸೋಷಿಯಲ್‌ ಮಿಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ಶುರುವಾಗಿದೆ..   

3 /6

ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿರುವ ಹಾಗೇ 'ಲವ್ ಗುರು'  ಖ್ಯಾತಿಯ ತರುಣ್ ಚಂದ್ರ, ಸಿಂಗರ್ ಆಶಾ ಭಟ್‌, ನಟಿ ರೇಖಾ, ರೀಲ್‌ ಸ್ಟಾರ್‌ ಭೂಮಿಕಾ ಬಸವರಾಜ್ ಬರುತ್ತಾರೆ ಎಂದು ಹೇಳಲಾಗುತ್ತಿದೆ..  

4 /6

ಇದರೊದಿಗೆ ಸಿನಿಮಾ ನಟ ಎಸ್ ನಾರಾಯಣ ಅವರ ಮಗ ಪಂಕಜ್‌, ಅಂತಪಟ ಸಿರೀಯಲ್‌ ನಟಿ ತನ್ವಿಯಾ, ಕೆಂಡಸಂಪಿಗೆ ಸೀರೀಯಲ್‌ ಆಕಾಶ್‌, ಶನಿ ಖ್ಯಾತಿಯ ಸುನೀಲ್‌ ಬರಬಹುದು ಎಂದು ಊಹಿಸಲಾಗಿದೆ..   

5 /6

 ಇಷ್ಟೇ ಅಲ್ಲ.. ರೀಲ್ಸ್‌ ಸ್ಟಾರ್‌ ರೇಷ್ಮಾ, ತುಕಾಲಿ ಸಂತು ಪತ್ನಿ, ವರುಣ್‌ ಆರಾಧ್ಯ ಸೇರಿದಂತೆ ಹಲವರಿಗೆ ಬಿಗ್‌ಬಾಸ್‌ ನಿಂದ ಕರೆಮಾಡಲಾಗಿದೆ ಎಂದು ಹೇಳಾಗುತ್ತಿದೆ..  

6 /6

ಸದ್ಯ ಪ್ರತಿಬಾರಿಯಂತೆ ಬಿಗ್‌ಬಾಸ್‌ 11ನ್ನು ಅಕ್ಟೋಬರ್‌ನಲ್ಲಿ ಆರಂಭಿಸುವ ಎಲ್ಲ ತಯಾರಿಗಳು ನಡೆದಿವೆ ಎನ್ನಲಾಗಿದೆ.. ಈ ಸಂಬಂಧ ಬಿಗ್‌ಬಾಸ್‌ ಹೋಸ್ಟ್‌ ಜವಾಬ್ದಾರಿಯನ್ನು ಈ ಬಾರಿಯೂ ಕಿಚ್ಚ ಸುದೀಪ್‌ ಹೊತ್ತಿದ್ದಾರೆ.