ಮಲ್ಲಿಕಾ ಶೆರಾವತ್‌ ರೂಂಗೆ ಎಂಟ್ರಿ ಕೊಟ್ಟಿದ್ದ ಆ ಸ್ಟಾರ್‌ ನಟ ಮಾಡಿದ್ದೇನು ಗೊತ್ತಾ? ನಟಿಯಿಂದಲೇ ಬಯಲಾಯ್ತು ಆ ರಾತ್ರಿಯ ಕರಾಳ ಸತ್ಯ!

Mallika Sherawat: ಮಾದಕ ನಟಿ ಮಲ್ಲಿಕಾ ಶೆರಾವತ್‌ ತಮ್ಮ ಅಂದ ಹಾಗೂ ತಮ್ಮ ಮೈಮಾಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ, ನಟಿ ಸಡನ್‌ ಆಗಿ ಸಿನಿಮಾ ರಂಗವನ್ನು ತ್ಯಜಿಸಿದ್ದರು, ಆದರೆ ಇದೀಗ ನಟಿ ಶಾಕಿಂಗ್‌ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ. 
 

1 /8

Mallika Sherawat: ಮಾದಕ ನಟಿ ಮಲ್ಲಿಕಾ ಶೆರಾವತ್‌ ತಮ್ಮ ಅಂದ ಹಾಗೂ ತಮ್ಮ ಮೈಮಾಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ, ನಟಿ ಸಡನ್‌ ಆಗಿ ಸಿನಿಮಾ ರಂಗವನ್ನು ತ್ಯಜಿಸಿದ್ದರು, ಆದರೆ ಇದೀಗ ನಟಿ ಶಾಕಿಂಗ್‌ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.   

2 /8

ಮರ್ಡರ್‌ ಸಿನಿಮಾದಲ್ಲಿ ತಮ್ಮ ನಟನೆಯಿಂದ ಹುಡುಗರ ಬೆವರಿಳಿಸಿದ್ದ ನಟಿ ತಮ್ಮ ಬೋಲ್ಡ್‌ ಪಾತ್ರಗಳ ಮೂಲಕ ಹುಡುಗರನ್ನು ಹುಚ್ಚೆಬ್ಬಿಸಿದ್ದರು. ಸಖತ್‌ ಹಾಟ್‌ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದ ನಟಿ ಸಡನ್‌ ಆಗಿ ಸಿನಿಮಾದಿಂದ ದೂರವಾಗಿದ್ದರು.  

3 /8

ನಟಿ ಸಿನಿಮಾಗಳಿಂದ ದೂರವಾದುದ್ದನ್ನು ಕಂಡು ಫ್ಯಾನ್ಸ್‌ ಬೇಸರಗೊಂಡಿದ್ದರು. ಆದರೆ ನಡಿ ಇದೀಗ ಸಿನಿಮಾ ರಂಗದ ಕುರಿತು ಶಾಕಿಂಗ್‌ ಸತ್ಯವನ್ನು ಬಚ್ಚಿಟ್ಟಿದ್ದಾರೆ.   

4 /8

ನಟಿ ಮಲ್ಲಿಕಾ ಶೆರಾವತ್‌ ನಟಿಸಿರುವ ವಿಕ್ಕಿ ವಿದ್ಯಾ ಕಾ ವೋ ವಾಲಾ ಸಿನಿಮಾ ತೆರೆ ಕಾನಲು ಸಜ್ಜಾಗುತ್ತಿದೆ, ಈ ಸಿನಿಮಾದ ಕುರಿತಾದ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಸಿನಿಮಾದ ಶೂಟಿಂಗ್‌ನ ವೇಳೆ ತನಗಾದ ಕರಾಳ ಘಟನೆಯ ಕುರಿತು ಶಾಕಿಂಗ್‌ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.   

5 /8

ಸಿನಿಮಾ ಶೂಟಿಂಗ್‌ ಸಮಯದಲ್ಲಿ ತನ್ನ ಚಿತ್ರದಲ್ಲಿ ನಟಿಸಿದ್ದ ಸಹನಟನೊಬ್ಬ ತನಗೆ ಕೊಟ್ಟ ಚಿತ್ರಹಿಂಸೆಯ ಕುರಿತು ನಟಿ ಮನಬಿಚ್ಚಿ ಮಾತನಾಡಿ ಸಂದರ್ಶನದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.   

6 /8

ದುಬೈನಲ್ಲಿ ನನ್ನ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು, ಆ ಸಿನಿಮಾದಲ್ಲಿ ನನ್ನದೊಂದು ಕಾಮಿಡಿ ಪಾತ್ರ, ಸಿನಿಮಾ ಹಿಟ್‌ ಆಗಿತ್ತು, ಪ್ರೇಕ್ಷಕರು ಕೂಡ ಸಿನಿಮಾವನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು. ಆದರೆ ಈ ಸಿನಿಮಾದ ವೇಳೆ ನಡೆದ ಘಟನೆಯೊಂದು ನನಗೆ ತುಂಬಾ ಕೆಟ್ಟ ನೆನಪು ಎಂದು ಹೇಳಿದ್ದಾರೆ.   

7 /8

ಸಿನಿಮಾದ ನಾಯಕ ರಾತ್ರಿ 12 ಗಂಟೆಯಲ್ಲಿ ನಟಿಯ ಕೋಣೆಯ ಬಾಗಿಲು ಬಡಿಯುತ್ತಿದ್ದರಂತೆ, ನಟಿ ಆ ನಟನ ಹೆಸರನ್ನು ಹೇಳಲು ಬಯಸಿಲ್ಲವಾದರೂ, ಆ ನಟ ಬಲವಂತವಾಗಿ ಬಾಗಿಲನ್ನು ನಡಿದು ನಟಿಯ ಕೋಣೆಯೊಳಗೆ ಹೋಗಲು ಪ್ರಯತ್ನಿಸಿದ್ದರಂತೆ, ನಂತರ ನಟಿ ನಾನು ಆ ರೀತಿಯ ಹೆಣ್ಣಲ್ಲ ಎಂದು ಆತನ ಬಯಕೆಯನ್ನು ನಿರಾಕರಿಸಿದ್ದಕ್ಕೆ ಆ ನಟ ಮಲ್ಲಿಕಾ ಅವರೊಂದಿಗೆ ಸಿನಿಮಾವನ್ನು ಮಾಡಲೆ ಇಲ್ಲವಂತೆ, ಈ ಕುರಿತ ಕಹಿ ಘಟನೆಯನ್ನು ನಟಿ ಇದೀಗ ಬಿಚ್ಚಿಟ್ಟಿದ್ದಾರೆ.   

8 /8

ಎರಡು ವರ್ಷಗಳ ಕಾಲ ಸಿನಿಮಾಗಳಿಂದ ಸುದೀರ್ಘ ಬ್ರೇಕ್‌ ತೆಗೆದುಕೊಂಡಿದ್ದ ನಟಿ, ಇದೀಗ  ವಿಕ್ಕಿ ವಿದ್ಯಾ ಕಾ ವೋ ವಾಲಾ ಸಿನಿಮಾದ ಮೂಲಕ ಇಂಡಸ್ಟ್ರಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಶನದ ವೇಳೆ ನಟಿ ನೀಡಿರುವ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಚರ್ಚೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.