Steam Side Effects: ಭಾರತದಲ್ಲಿ ಕೊರೊನಾ ಸೋಂಕಿನ (Corona Cases In India) ಕಾರಣ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ನಿತ್ಯ ಲಕ್ಷಾಂತರ ಜನರು ಈ ಮಾರಕ ಸೋಂಕಿಗೆ ಗುರಿಯಾಗುತ್ತಿದ್ದಾರೆ ಹಾಗೂ ಪ್ರತಿಯೊಬ್ಬರ ಲಕ್ಷಣಗಳಲ್ಲಿಯೂ (Coronavirus Symptoms)ಕೂಡ ಭಿನ್ನತೆ ಕಂಡುಬರುತ್ತಿದೆ.
Steam Side Effects: ಭಾರತದಲ್ಲಿ ಕೊರೊನಾ ಸೋಂಕಿನ (Corona Cases In India) ಕಾರಣ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ನಿತ್ಯ ಲಕ್ಷಾಂತರ ಜನರು ಈ ಮಾರಕ ಸೋಂಕಿಗೆ ಗುರಿಯಾಗುತ್ತಿದ್ದಾರೆ ಹಾಗೂ ಪ್ರತಿಯೊಬ್ಬರ ಲಕ್ಷಣಗಳಲ್ಲಿಯೂ (Coronavirus Symptoms)ಕೂಡ ಭಿನ್ನತೆ ಕಂಡುಬರುತ್ತಿದೆ. ಕೊರೊನಾ (Coronavirus) ಕಾಲದಲ್ಲಿ ದೇಹದ ರೋಗಪ್ರತಿಕಾರಕ ಶಕ್ತಿ (Immunity) ಹೆಚ್ಚಿಸಿ, ಸೋಂಕಿನಿಂದ ಪಾರಾಗಲು ಜನರು ಮನೆಮದ್ದುಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿಯೆ ಒಂದು ಸ್ಟೀಮ್ ಇನ್ಹೇಲೆಶನ್ (Steam Inhalation) ಪ್ರಕ್ರಿಯೆ.
ಇದನ್ನೂ ಓದಿ- ಕೊರೊನಾ ಪ್ರಕರಣಗಳ ಹೆಚ್ಚಳದ ಮಧ್ಯೆಯೇ ಮತ್ತೊಂದು ಶಾಕಿಂಗ್ ಸುದ್ದಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಬಿಸಿ ಆವಿ ಸೇವಿಸುವುದರಿಂದ ಸೋಂಕು ನಿವಾರಣೆ - ಸಾಮಾಜಿಕ ಮಾಧ್ಯಮ ತಾಣಗಳ ಮೇಲೆ ಸ್ಟೀಮ್ ಇನ್ಹೇಲೆಶನ್ ಅಂದರೆ, ಬಿಸಿ ನೀರಿನ ಆವಿ ತೆಗೆದುಕೊಳ್ಳುವುದರಿಂದ ಕೊರೊನಾ ಸೋಂಕು ನಿವಾರಣೆಯಾಗುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಹಲವು ಜನರು ದಿನನಿತ್ಯ ಈ ಮನೆ ಉಪಾಯವನ್ನು ಅನುಸರಿಸುತ್ತಿದ್ದಾರೆ. ಅಷ್ಟೇ ಯಾಕೆ ಕೊರೊನಾ ರೋಗಿಗಳು ಕೂಡ ಈ ಉಪಾಯವನ್ನು ಅನುಸರಿಸುವುದರಿಂದ ಹಿಂದೆ ಬೀಳುತ್ತಿಲ್ಲ. ಆದರೆ, UNECEF India ಟ್ವೀಟ್ ಮಾಡುವ ಮೂಲಕ ಈ ಕುರಿತಾದ ಸಾಧ್ಯತೆಯನ್ನು ಅಲ್ಲಗಳೆದಿದೆ,
2. ಆವಿ ತೆಗೆದುಕೊಳ್ಳುವುದರಿಂದ ಕೊರೊನಾ ನಿವಾರಣೆಯ ಯಾವುದೇ ಆಧಾರಗಳಿಲ್ಲ - ಬಿಸಿ ನೀರಿನ ಅವಿ ತೆಗೆದುಕೊಳ್ಳುವುದರಿಂದ ಕೊರೊನಾ ನಿವಾರಣೆಯಾಗುತ್ತದೆ ಎಂದು ಭಾವಿಸುವವರು ಈ ಸುದ್ದಿಯನ್ನು ತಪ್ಪದೆ ಓದಿ. ಈ ಕುರಿತು ಸ್ಪಷ್ಟನೆ ನೀಡಿರುವ UNICEF ಸೌಥ ಏಷ್ಯಾ ಪ್ರಾಂತೀಯ ಸಲಹೆಗಾರ ಹಾಗೂ ಚಿಕ್ಕಮಕ್ಕಳ ಆರೋಗ್ಯ ತಜ್ಞ ಪಾಲ್ ರಟರ್, ಇದಕ್ಕೆ ಯಾವುದೇ ರೀತಿಯ ಆಧಾರಗಳಿಲ್ಲ ಮತ್ತು ಸ್ಟೀಮ್ ಸೇವನೆಯಿಂದ ಕೊವಿಡ್-19 ಸೋಂಕು ನಿವಾರಣೆಯಾಗುವುದಿಲ್ಲ ಎಂದಿದ್ದಾರೆ.
3. ಸ್ಟೀಮ್ ಅಡ್ಡ ಪರಿಣಾಮಗಳು - ಸಾಮಾನ್ಯ ಚಳಿ ಹಾಗೂ ಶೀತವಾದಾಗಲು ಕೂಡ ಜನರು ಬಿಸಿ ಆವಿ ಸೇವಿಸುತ್ತಾರೆ. ಆದರೆ, ಹಲವು ಬಾರಿ ಆವಿ ಸೇವಿಸುವುದರಿಂದ ಅಡ್ಡಪರಿಣಾಮಗಳು ಕಂಡುಬರುತ್ತವೆ. ನಿತ್ಯ ಬಿಸಿನೀರಿನ ಆವಿ ಸೇವಿಸುವುದರಿಂದ ಗಂಟಲು ಹಾಗೂ ಪುಪ್ಪುಸಗಳ ನಡುವೆ ಇರುವ ನಳಿಕೆಯಲ್ಲಿನ ಟ್ರ್ಯಾಕಿಯಾ ಹಾಗೂ ಫೈರಿಂಕ್ಸ್ ಹಾನಿಗೊಳಗಾಗಿ, ಗಂಭೀರ ರೂಪದಲ್ಲಿ ಡ್ಯಾಮೇಜ್ ಆಗುತ್ತದೆ.
4. ಆವಿ ಸೇವನೆಯಿಂದ ವೈರಸ್ ಪ್ರವೇಶ ಸುಲಭವಾಗುತ್ತದೆ - ದೀರ್ಘ ಕಾಲದವರೆಗೆ ಸ್ಟೀಮ್ ತೆಗೆದುಕೊಳ್ಳುವುದರಿಂದ ಶ್ವಾಸ ನಳಿಕೆ ಡ್ಯಾಮೇಜ್ ಆಗುತ್ತದೆ. ಇದರಿಂದ ವ್ಯಕ್ತಿಗಳಿಗೆ ಉಸಿರಾಡಲು ತೊಂದರೆಯಾಗುತ್ತದೆ ಹಾಗೂ ಕೊರೊನಾ ವೈರಸ್ ಸುಲಭವಾಗಿ ಶರೀರ ತಲುಪುತ್ತದೆ. ಒಂದು ವೇಳೆ ನೀವೂ ಕೂಡ ನಿಯಮಿತವಾಗಿ ಸ್ಟೀಮ್ ತೆಗೆದುಕೊಳ್ಳುತ್ತಿದ್ದರೆ, ಸ್ವಲ್ಪಕಾಲ ಅದನ್ನು ನಿಲ್ಲಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.