Ajay Devgn Love Story With Raveena Tandon: 'ದಿಲ್ವಾಲೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ರವೀನಾ ಟಂಡನ್ ಸಹ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ಜೋಡಿಯ ಪ್ರೀತಿ ಬಹಳ ದಿನ ಉಳಿಯಲಿಲ್ಲ. ಕರೀಷ್ಮಾ ಕಪೂರ್ ಬಂದ ಬಳಿಕ ಅಜಯ್ ದೇವಗನ್ ನನಗೆ ಮೋಸ ಮಾಡಿದ ಅಂತಾ ರವೀನ್ ಆರೋಪಿಸಿದ್ದರಂತೆ.
Ajay Devgn Love Story With Raveena Tandon: ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ತಮ್ಮ ಕರಿಯರ್ನ ಉತ್ತುಂಗದಲ್ಲಿದ್ದಾಗ ಅನೇಕ ನಟಿಯರೊಂದಿಗೆ ಡೇಟಿಂಗ್ ನಡೆಸಿದ್ದರಂತೆ. 90 ದಶಕದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾ ನೀಡಿದ ಅಜಯ್ ದೇವಗನ್ ಹೆಸರು ಅನೇಕ ಖ್ಯಾತ ನಟಿಯರೊಂದಿಗೆ ಥಳಕು ಹಾಕಿಕೊಂಡಿತ್ತು. ಈ ಪೈಕಿ 'ದಿಲ್ವಾಲೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ರವೀನಾ ಟಂಡನ್ ಸಹ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ಜೋಡಿಯ ಪ್ರೀತಿ ಬಹಳ ದಿನ ಉಳಿಯಲಿಲ್ಲ. ಕರೀಷ್ಮಾ ಕಪೂರ್ ಬಂದ ಬಳಿಕ ಅಜಯ್ ದೇವಗನ್ ನನಗೆ ಮೋಸ ಮಾಡಿದ ಅಂತಾ ರವೀನ್ ಆರೋಪಿಸಿದ್ದರಂತೆ. ಈ ಆರೋಪಕ್ಕೆ ತಿರುಗೇಟು ನೀಡಿದ್ದ ಅಜಯ್, ಆಕೆಗೆ ಮನೋವೈದ್ಯರ ಅಗತ್ಯವಿದೆ ಅಂತಾ ಜರಿದಿದ್ದರಂತೆ. ತಮ್ಮನ್ನು ʼಮಾನಸಿಕʼ ಅಂತಾ ಕರೆದ ಅಜಯ್ನಿಂದ ಮನನೊಂದ ರವೀನಾ ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
90 ದಶಕದ ಪ್ರಸಿದ್ಧ ಬಾಲಿವುಡ್ ನಟಿ ರವೀನಾ ಟಂಡನ್ ಆಗಾಗ ಸುದ್ದಿಯಲ್ಲಿರುತ್ತಾರೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಲಕ್ಷಾಂತರ ಹೃದಯಗಳನ್ನು ಆಳಿದ ರವೀನಾ ಟಂಡನ್ ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಅವರ ಪ್ರೇಮ ಪ್ರಕರಣಗಳ ಬಗ್ಗೆ ಅನೇಕ ವದಂತಿಗಳು ಹರಡಿದ್ದವು. ಈ ಪೈಕಿ ಅಜಯ್ ದೇವಗನ್ ಜೊತೆಗಿನ ಅವರ ಸಂಬಂಧದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು.
ಹೌದು, 'ದಿಲ್ವಾಲೆ' ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ರವೀನಾ ಟಂಡನ್ ಅವರ ಕೆಮಿಸ್ಟ್ರಿ ಸಿನಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ತಮ್ಮ ಕರಿಯರ್ನ ಉತ್ತುಂಗದಲ್ಲಿದ್ದಾಗ ಅಜಯ್ ದೇವಗನ್ ಅನೇಕ ನಟಿಯರೊಂದಿಗೆ ಡೇಟಿಂಗ್ ನಡೆಸಿದರು. ಅವರ ಹೆಸರು ಅನೇಕ ಸ್ಟಾರ್ ನಟಿಯರೊಂದಿಗೆ ಥಳಕು ಹಾಕಿಕೊಂಡಿತ್ತು. ಆದರೆ ನಟಿ ರವೀನಾ ಟಂಡನ್ ಜೊತೆಗಿನ ಪ್ರೀತಿ, ಜಗಳ ಇಡೀ ಬಾಲಿವುಡ್ನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು.
ʼದಿಲ್ವಾಲೆʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಅಜಯ್ ದೇವಗನ್ & ರವೀನಾ ಟಂಡನ್ ನಡುವೆ ಪ್ರೇಮಾಂಕುರವಾಗಿತ್ತು ಅಂತಾ ಸುದ್ದಿಯಾಗಿತ್ತು. ಈ ಜೋಡಿ ಪರಸ್ಪರ ಡೇಟಿಂಗ್ ನಡೆಸುತ್ತಿದೆ ಅಂತಾ ಪತ್ರಿಕೆಗಳಲ್ಲಿ & ಟಿವಿ ಚಾನೆಲ್ಗಳಲ್ಲಿ ಸಖತ್ ಸುದ್ದಿಯಾಗಿತ್ತು. ಆದರೆ ಯಾವಾಗ ಅಜಯ್ ಅವರ ಹೆಸರು ಕರಿಷ್ಮಾ ಕಪೂರ್ ಜೊತೆಗೆ ಥಳಕು ಹಾಕಿಕೊಂಡಿತೋ ಈ ಜೋಡಿಯ ಪ್ರೀತಿ ಹಳಸಿದೆ ಅಂತಾ ಸುದ್ದಿಯಾಯ್ತು. ರವೀನಾ ಜೊತೆಗೆ ಡೇಟಿಂಗ್ ನಡೆಸಿದ ಬಳಿಕ ಅಜಯ್ ಕರಿಷ್ಮಾರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆಂದು ಗಾಳಿಸುದ್ದಿ ಹರಡಿತ್ತು. ಹೀಗಾಗಿ ರವೀನಾ & ಅಜಯ್ ಪರಸ್ಪರ ಬೇರೆಯಾದರು ಎಂದು ಹೇಳಲಾಗಿತ್ತು.
1994ರ ಜುಲೈನಲ್ಲಿ ಫಿಲ್ಮ್ಫೇರ್ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ರವೀನಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಇದಕ್ಕೆ ಕರಿಷ್ಮಾ ಕಪೂರ್ ಅವರೇ ಮುಖ್ಯ ಕಾರಣವೆಂದು ನಂಬಲಾಗಿದೆ. ಏಕೆಂದರೆ ಅಜಯ್ & ಕರಿಷ್ಮಾ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರಂತೆ. ಆಗ ಅಜಯ್ ತನಗೆ ವಂಚಿಸಿದ್ದಾರೆಂದು ರವೀನಾ ಆರೋಪಿಸಿದ್ದರು. ಈ ವೇಳೆ ರವೀನಾ ಅವರು ಅಜಯ್ ಜೊತೆಗಿನ ತಮ್ಮ ವೈಯಕ್ತಿಕ ಫೋಟೋಗಳು & ಅವರು ಬರೆದ ಪತ್ರಗಳನ್ನು ಮಾಧ್ಯಮಗಳಿಗೆ ತೋರಿಸಿದ್ದರಂತೆ.
ಈ ಸುದ್ದಿ ಬಂದ ನಂತರ ಫಿಲ್ಮ್ಫೇರ್ಗೆ ನೀಡಿದ ಸಂದರ್ಶನದಲ್ಲಿ ಅಜಯ್ ದೇವಗನ್, ರವೀನಾಗೆ ಮನೋವೈದ್ಯರ ಅಗತ್ಯವಿದೆ ಅಂತಾ ಹೇಳಿದ್ದರಂತೆ. ರವೀನಾಗೆ ಬರೆದ ಪತ್ರಗಳ ಬಗ್ಗೆ ಪ್ರಶ್ನಿಸಿದಾಗ, ಯಾವ ಪತ್ರಗಳು? ಅಂತಾ ಅಜಯ್ ಮರುಪ್ರಶ್ನಿಸಿದ್ದರು. ಮುಂದುವರೆದು ʼಆ ಪತ್ರಗಳನ್ನು ಪ್ರಿಂಟ್ ಮಾಡಿ ಹಂಚಲು ಆಕೆಗೆ ಹೇಳಿʼ, ರವೀನಾ ಹುಟ್ಟಿನಿಂದಲೇ ಸುಳ್ಳುಗಾರ್ತಿ, ಪ್ರಚಾರಕ್ಕಾಗಿ ನನ್ನ ಹೆಸರನ್ನು ಆಕೆಯೊಂದಿಗೆ ಥಳಕು ಹಾಕಲಾಗುತ್ತಿದೆ ಅಂತಾ ಅಜಯ್ ಗರಂ ಆಗಿದ್ದರು. ತನ್ನನ್ನು 'ಮಾನಸಿಕ' ಅಸ್ವಸ್ಥೆ, ಮನೋವೈದ್ಯರ ಅಗತ್ಯವಿದೆ ಅಂತಾ ಅಜಯ್ ಹೇಳಿದ್ದಕ್ಕೆ ನೊಂದುಕೊಂಡಿದ್ದ ರವೀನಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.