Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಬುಧವಾರದ ಈ ದಿನ ರೋಹಿಣಿ ನಕ್ಷತ್ರ ಇರಲಿದ್ದು ಧ್ರುವ ಯೋಗವು ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ದಿನ ವಿವಾದಗಳನ್ನು ತಪ್ಪಿಸಲು ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ. ಹಿಂದೆ ಪಡೆದ ಸಾಲ ಮರುಪಾವತಿಸಬೇಕಾಗಬಹುದು. ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭ ದಿನ. ಮನೆ ಅಥವಾ ವಾಹನದ ರಿಪೇರಿಗಾಗಿ ಹಣ ಖರ್ಚಾಗಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಸ್ವಲ್ಪ ಏರುಪೇರುಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಕ್ಕಾಗಿ ಹೆಚ್ಚಿನ ಹಣ ವಿನಿಯೋಗಿಸಬಹುದು. ಪ್ರವಾಸೋದ್ಯಮ, ತಾಂತ್ರಿಕ ಕ್ಷೇತದಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನಕಾರಿಯಾದ ದಿನ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಒತ್ತಡ, ವಿವಾದ, ಹೋರಾಟದಿಂದ ನೀವು ಯಶಸ್ಸನ್ನು ಗಳಿಸುವಿರಿ. ಪ್ರಯಾಣಕ್ಕಾಗಿ ಹೆಚ್ಚು ಖರ್ಚು ಮಾಡಬಹುದು. ಭದ್ರತಾ ಕ್ಷೇತ್ರ, ವಕೀಲರು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಸ್ನೇಹಿತರೊಂದಿಗಿನ ವಿವಾದ ಮೂಡಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಾಣುವಿರಿ. ಮಕ್ಕಳೊಂದಿಗೆ ಮನರಂಜನೆಗಾಗಿ ಹೆಚ್ಚಿನ ಹಣ ವಿನಿಯೋಗಿಸಬಹುದು. ಬೆನ್ನು ಮತ್ತು ಮೊಣಕಾಲು ನೋವಿನಿಂದ ಬಳಲುತ್ತಿರುವವರು ಇಂದು ಎಚ್ಚರಿಕೆಯಿಂದ ಇರಿ.
ಇದನ್ನೂ ಓದಿ- 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!
ಸಿಂಹ ರಾಶಿಯವರ ಭವಿಷ್ಯ (Leo Horoscope):
ವ್ಯವಹಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿದೆ. ಭೂಮಿ, ಆಸ್ತಿ ಖರೀದಿಸಬಹುದು. ಕೌಟುಂಬಿಕ ಜೀವನದಲ್ಲಿ ವಿವಾದಗಳನ್ನು ತಪ್ಪಿಸಲು ನಿಮ್ಮ ಕಠಿಣವಾದ ಮಾತುಗಳಿಗೆ ಕಡಿವಾಣ ಹಾಕಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಏನನ್ನಾದರೂ ಕಳೆದುಕೊಂಡರೂ ಮತ್ತೇನನ್ನಾದರೂ ಗಳಿಸುವ ದಿನ. ಹಣಕಾಸು ನಿರ್ವಹಣೆ ಕೊಂಚ ಕಠಿಣವೆನಿಸಬಹುದು. ಪ್ರವಾಸೋದ್ಯಮದಲ್ಲಿರುವ ಜನರು ಪ್ರಯೋಜನ ಪಡೆಯುತ್ತಾರೆ. ಕೌಟುಂಬಿಕ ವಿವಾದಗಳು ಮನಸ್ಸನ್ನು ಕದಡಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ರಾಶಿಯ ಜನರು ಇಂದು ಕೋಪವನ್ನು ನಿಯಂತ್ರಿಸುವುದರಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದು. ಈವೆಂಟ್ಗಳನ್ನು ಆಯೋಚಿಸುವ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಸಂಗಾತಿಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ವೃತ್ತಿ ವ್ಯವಹಾರದಲ್ಲಿ ಸಂಯಮವನ್ನು ಕಾದುಕೊಳ್ಳಿ. ದುರಸ್ತಿ ಕಾರ್ಯಗಳಿಗಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಬಹುದು. ಹೊಟ್ಟೆನೋವು, ತಲೆನೋವಿನ ಸಮಸ್ಯೆ ಬಾಧಿಸಬಹುದು.
ಇದನ್ನೂ ಓದಿ- Surya Grahan 2024: ವರ್ಷದ ಎರಡನೇ ಸೂರ್ಯಗ್ರಹಣ..ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಗಲಿದೆ ಭಾರತ..!
ಧನು ರಾಶಿಯವರ ಭವಿಷ್ಯ (Sagittarius Horoscope):
ನಿಮ್ಮ ಮಾತಿನಲ್ಲಿ ಮಧುರತೆ ಇಲ್ಲದಿದ್ದರೆ ಸುತ್ತ-ಮುತ್ತಲಿನವರೊಂದಿಗೆ ವಿವಾದ ಏರ್ಪಡಬಹುದು. ಮಾರ್ಷಲ್ ಆರ್ಟ್ಸ್, ವೈದ್ಯಕೀಯ ಕ್ಷೇತ್ರದಲ್ಲಿರುವ ವೃತ್ತಿಪರರಿಗೆ ಶುಭ ದಿನ. ಮಕ್ಕಳೊಂದಿಗೆ ವಿವಾದಗಳುಂಟಾಗಬಹುದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮನೆ, ವಾಹನಕ್ಕಾಗಿ ವೆಚ್ಚಗಳು ಹೆಚ್ಚಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಧನಲಾಭ. ಕೌಟುಂಬಿಕ ವಿವಾದಗಳಿಂದ ದೂರ ಉಳಿಯಲು ಕುಟುಂಬದವರೊಂದಿಗೆ ಮಾತಿನಲ್ಲಿ ಮಧುರತೆ ಇರಲಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಉದ್ಯೋಗಸ್ಥರಿಗೆ ಕೆಲಸದ ಹೊರೆ ಹೆಚ್ಚಾಗಲಿದ್ದು, ಇದರ ಪರಿಣಾಮ ನಿಮ್ಮ ಗೃಹ ಜೀವನದ ಮೇಲೂ ಕಂಡುಬರಲಿದೆ. ಬಿಸಿನೆಸ್ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಕೆಲವರು ಕಿವಿ ನೋವಿನಿಂದ ಬಳಲುವ ಸಾಧ್ಯತೆ ಇದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕುಟುಂಬದೊಂದಿಗೆ ಸುಂದರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಬಹುದು. ಪ್ರಯಾಣಕ್ಕಾಗಿ ಹೆಚ್ಚಿನ ಹಣ ಖರ್ಚಾಗಬಹುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಾಭದಾಯಕ ದಿನ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.