ದಿನಭವಿಷ್ಯ 21-08-2024: ಇಂದು ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಜಾಕ್‌ಪಾಟ್

Today Horoscope 21st August 2024: ಬುಧವಾರದ ಈ ದಿನ ಪೂ.ಭಾ. ನಕ್ಷತ್ರ ಸುಕರ್ಮ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Aug 21, 2024, 06:15 AM IST
  • ಮಿಥುನ ರಾಶಿಯವರಿಗೆ ಇಂದು ನಿಮ್ಮ ಸಮಸ್ಯೆಗಳು ಉಲ್ಬಣಿಸಬಹುದು.
  • ಕನ್ಯಾ ರಾಶಿಯವರು ವ್ಯಾಪಾರದಲ್ಲಿ ಹೊಸದನ್ನು ಪ್ರಯತ್ನಿಸುವಲ್ಲಿ ನಿರತರಾಗಿರುತ್ತೀರಿ.
  • ವೃಶ್ಚಿಕ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿದ್ದು ಆಯಾಸವನ್ನು ಅನುಭವಿಸುವಿರಿ
ದಿನಭವಿಷ್ಯ 21-08-2024:  ಇಂದು ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಜಾಕ್‌ಪಾಟ್ title=

Budhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯಾ ತಿಥಿ, ಬುಧವಾರದ ಈ ದಿನ ಪೂ.ಭಾ. ನಕ್ಷತ್ರ ಸುಕರ್ಮ ಯೋಗ ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope): 
ಇಂದು ಆದಾಯಕ್ಕಿಂತ ಖರ್ಚು ಹೆಚ್ಚಾಗುವ ದಿನ. ಯಾವುದಾದರೂ ಪ್ರಮುಖ ವ್ಯವಹಾರಗಳಿಗಾಗಿ ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರೆ ಉತ್ತಮ ದಿನ. ಇಂದು ಹೊಸ ಮನೆ, ವಾಹನ ಖರೀದಿಗೆ ಸಮಯ ತುಂಬಾ ಚೆನ್ನಾಗಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಯೋಚಿಸಿ ನಿರ್ಧರಿಸಿ, ಇಲ್ಲವೇ ಭಾರೀ ನಷ್ಟವಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ತುಂಬಾ ಜಾಗರೂಕರಾಗಿರಿ. ನಿಮ್ಮೊಂದಿಗೆ ಇದ್ದು ಅಸೂಯೆ ಪಡುವವರ ಬಗ್ಗೆ ಎಚ್ಚರಿಕೆಯಿಂದಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ನಿಮ್ಮ ಸಮಸ್ಯೆಗಳು ಉಲ್ಬಣಿಸಬಹುದು. ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚಿನ ಗಮನವಹಿಸಬೇಕಾಗುತ್ತದೆ. ವ್ಯಾಪಾರದಲ್ಲಿನ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಚಿಂತೆ ಹೆಚ್ಚಾಗಬಹುದು.  ಆರೋಗ್ಯದ ಬಗ್ಗೆ ನಿಗಾವಹಿಸಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇದು ನಿಮಗೆ ಒತ್ತಡಭರಿತ ದಿನವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನವಾಗಿದೆ. ಉದ್ಯೋಗಸ್ಥರಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಕುಟುಂಬದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. 

ಇದನ್ನೂ ಓದಿ- Bhadra Rajayoga: ಬುಧನಿಂದ ಭದ್ರ ರಾಜಯೋಗ, ಈ ರಾಶಿಯವರಿಗೆ ಹಣ, ಕೀರ್ತಿ, ಸಂಪತ್ತು ಪ್ರಾಪ್ತಿ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನಿಮ್ಮ ಮಾತು ನಡವಳಿಕೆಗಳನ್ನು ನಿಯಂತ್ರಿಸಿ, ಇಲ್ಲವೇ ಇದರಿಂದಲೇ ನಿಮ್ಮವರ ಮನಸ್ಸಿಗೆ ಗಾಸಿಯಾಗಬಹುದು. ಉದ್ಯೋಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಶುಭ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಶುಭ ದಿನ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವ್ಯಾಪಾರದಲ್ಲಿ ಹೊಸದನ್ನು ಪ್ರಯತ್ನಿಸುವಲ್ಲಿ ನಿರತರಾಗಿರುತ್ತೀರಿ. ಉತ್ತಮವಾದ ಆಹಾರವನ್ನು ಆನಂದಿಸುವಿರಿ. ನಿಮ್ಮ ಯಾವುದೇ ಕೆಲಸದಲ್ಲಿ  ನಿಮ್ಮ ಕುಟುಂಬ ಸದಸ್ಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆದಾಗ್ಯೂ, ವ್ಯವಹಾರದ ಬಗ್ಗೆ ಜಾಗರೂಕರಾಗಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮಗೆ ಲಾಭದಾಯಕವಾದ ದಿನ. ಸಮಾಜದಲ್ಲಿ ಕೀರ್ತಿ-ಗೌರವ ಹೆಚ್ಚಾಗಲಿದೆ. ನಿಮ್ಮ ಪ್ರಗತಿಯಿಂದ ಕುಟುಂಬಸ್ಥರಿಗೆ ಸಂತೋಷ ಹೆಚ್ಚಾಗುತ್ತದೆ. ಯಾವುದೇ ಕಾನೂನು ವಿಷಯಗಳಲ್ಲಿ ಜಯ ನಿಮ್ಮ ಪಾಲಿಗಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃತ್ತಿ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿದ್ದು ಆಯಾಸವನ್ನು ಅನುಭವಿಸುವಿರಿ. ವೆಚ್ಚಗಳು ಅಧಿಕವಾಗಬಹುದು. ಆದಾಗ್ಯೂ, ಕುಟುಂಬದಲ್ಲಿ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ಮಕ್ಕಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ಜೀವಿಸುವುದರಿಂದ ಮನೋಲ್ಲಾಸ ಹೆಚ್ಚಾಗಲಿದೆ. 

ಇದನ್ನೂ ಓದಿ- ರಾಹು-ಕೇತು ಗೋಚಾರ:  2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!  

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು. ಹಾಗಾಗಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಅಗತ್ಯವಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುಯವರಿಗೆ ಶುಭ ವಾರ್ತೆ ಸಾಧ್ಯತೆ ಇದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಬಹುಕಾಲದಿಂದ ಬಾಕಿ ಉಳಿದಿರುವ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕುಟುಂಬದಲ್ಲಿ ಕೆಲವು ಮಂಗಳಕರ ಕಾರ್ಯಕ್ರಮಗಳು ಜರುಗುವುವು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಉದ್ಯೋಗಸ್ಥರಿಗೆ ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯುತ್ತವೆ. ನೀವು ಹೊಸ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಶುಭ ಸಮಯ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮಗೆ ಏರಿಳಿತಗಳಿಂದ ಕೂಡಿದ ದಿನ. ವ್ಯವಹಾರದಲ್ಲಿ ಯಶಸ್ಸು ಪ್ರಾಪ್ತಿಯಾಗ್ಲೈದೆ. ಆದರೂ, ಚಿಂತನಶೀಲರಾಗಿ ಕೆಲಸ ಮಾಡದಿದ್ದರೆ ಭಾರೀ ನಷ್ಟ ಸಂಭವಿಸಬಹುದು. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಳ್ಳಬೇಡಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News