ವರಮಹಾಲಕ್ಷ್ಮಿ ಶುಕ್ರವಾರದಂದು ಸಂಜೆ ಈ 5 ಕೆಲಸ ಮಾಡಿದರೆ ಲಕ್ಷ್ಮಿ ಎಂದಿಗೂ ಮನೆ ತೊರೆಯುವುದಿಲ್ಲ!

Varamahalakshmi Upay: ತಾಯಿ ಮಹಾಲಕ್ಷ್ಮಿಯನ್ನು ವರಿಸಿಕೊಳ್ಳಲು ಶುಕ್ರವಾರದ ದಿನವನ್ನು ತುಂಬಾ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಇನ್ನೂ ವಿಶೇಷವಾಗಿರುತ್ತದೆ. 

Written by - Yashaswini V | Last Updated : Aug 16, 2024, 04:46 PM IST
  • ಶುಕ್ರವಾರದ ಈ ದಿನ ವರಮಹಾಲಕ್ಷ್ಮಿ ಹಬ್ಬ
  • ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆದು ಸಂಪತ್ತನ್ನು ಹೆಚ್ಚಿಸಲು ವರಮಹಾಲಕ್ಷ್ಮಿ ದಿನ ತುಂಬಾ ಪ್ರಾಶಸ್ತ್ಯ
  • ವರಮಹಾಲಕ್ಷ್ಮಿಯಂದು ಮುಸ್ಸಂಜೆ ವೇಳೆ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ದಾರಿದ್ರ್ಯ ಸರಿದು ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ
ವರಮಹಾಲಕ್ಷ್ಮಿ ಶುಕ್ರವಾರದಂದು ಸಂಜೆ ಈ 5 ಕೆಲಸ ಮಾಡಿದರೆ ಲಕ್ಷ್ಮಿ ಎಂದಿಗೂ ಮನೆ ತೊರೆಯುವುದಿಲ್ಲ!  title=

Varamahalakshmi Remedis: ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮೀದೇವಿಯನ್ನು ವರಿಸಿಕೊಳ್ಳಲು ಶುಕ್ರವಾರ ತುಂಬಾ ಪ್ರಾಶಸ್ತ್ಯವಾದ ದಿನವಾಗಿದೆ. ಅದರಲ್ಲೂ, ಶ್ರಾವಣ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿಯಂದು ಬಂದಿರುವ ಶುಕ್ರವಾರದ ಈ ದಿನ ವರಮಹಾಲಕ್ಷ್ಮಿ ಹಬ್ಬದಂದು (Varamahalakshmi Festival) ಮುಸ್ಸಂಜೆ ವೇಳೆ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ದಾರಿದ್ರ್ಯ ಸರಿದು ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷದಿಂದ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸದ (Shravana Masa) ಎರಡನೇ ಶುಕ್ರವಾರ "ವರಮಹಾಲಕ್ಷ್ಮಿ" ಹಬ್ಬದಂದು (Varamahalakshmi Festival) ಸಂಜೆ ಸೂರ್ಯಾಸ್ತದ ಬಳಿಕ ಕೈಗೊಳ್ಳುವ ಕೆಲವು ಕ್ರಮಗಳಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಿ, ಹಣದ ಹರಿವು ಹೆಚ್ಚಾಗಿ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. 

ವರಮಹಾಲಕ್ಷ್ಮಿ ಶುಕ್ರವಾರದಂದು ಸಂಜೆ ಕೈಗೊಳ್ಳಬೇಕಾದ ವಿಶೇಷ ಕ್ರಮಗಳೆಂದರೆ... 
* ವರಮಹಾಲಕ್ಷ್ಮಿಗೆ ತುಪ್ಪದ ದೀಪ: 

ವರಮಹಾಲಕ್ಷ್ಮಿ ಹಬ್ಬದಂದು ಮುಸ್ಸಂಜೆ ವೇಳೆ ತಾಯಿ ಲಕ್ಷ್ಮಿಗೆ ಪೂಜೆ ಮಾಡುವಾಗ ತಪ್ಪದೇ "ತುಪ್ಪದ ದೀಪದಿಂದ ಆರತಿ" ಬೆಳಗಿಸಿ. ಇದರಿಂದ ಕುಟುಂಬದ ಮೇಲೆ ಮಹಾಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ. 

ಇದನ್ನೂ ಓದಿ- ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತದೆ ಬೆಲೆ ಏರಿಕೆ ಶಾಕ್..!!

* ಮಂತ್ರ ಪಠಣೆ: 
ಇಂದು ಲಕ್ಷ್ಮಿ ಪೂಜೆ ವೇಳೆ "ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್ ಸ್ವಾಹಾಃ" ಎಂಬ ಮಂತ್ರವನ್ನು ತಪ್ಪದೇ ಪಠಿಸಿ. ಇದರಿಂದ ಮನೆಯಲ್ಲಿ ಸುಖ-ಸಂಪತ್ತು ವೃದ್ಧಿಯಾಗುತ್ತದೆ. ಹಣಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ. 

* ಸುಗಂಧ ದ್ರವ್ಯ ಅರ್ಪಣೆ: 
ಸಂಜೆ ಲಕ್ಷ್ಮಿ ಬರುವ ವೇಳೆ ಸಂಪೂರ್ಣ ವಿಧಿ-ವಿಧಾನದಿಂದ ತಾಯಿ ಲಕ್ಷ್ಮಿಯನ್ನು ಪೂಜಿಸಿ. ಈ ವೇಳೆ ತಾಯಿ ಲಕ್ಷ್ಮಿ ಸುಗಂಧ ದ್ರವ್ಯವನ್ನು ಅರ್ಪಿಸುವುದನ್ನು ಮರೆಯಬೇಡಿ. ಇದರಿಂದ ವರಮಹಾಲಕ್ಷ್ಮಿಯೂ ಸಂತುಷ್ಟಳಾಗಿ ನಿಮ್ಮ ಮನೋಕಾಮನೆಗಳನ್ನು ಈಡೇರಿಸುತ್ತಾಳೆ. 

*  ಸುಮಂಗಲಿಯರಿಗೆ ಕುಂಕುಮ: 
ಸಂಜೆ ಪೂಜೆಯಾದ ಬಳಿಕ ಸುಮಂಗಲಿಯರನ್ನು ಮನೆಗೆ ಕರೆದು ಅರಿಶಿನ-ಕುಂಕುಮ, ತಾಂಬೂಲವನ್ನು ನೀಡಿ. ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಆರ್ಥಿಕ ಬಿಕ್ಕಟ್ಟುಗಳು ದೂರವಾಗಿ ಸಂಪತ್ತಿನ ಹೊಳೆಯೇ ಹರಿಯುತ್ತದೆ ಎನ್ನಲಾಗುತ್ತದೆ. 

ಇದನ್ನೂ ಓದಿ- ವರಲಕ್ಷ್ಮಿ ವ್ರತ 2024: ಅಷ್ಟೈಶ್ವರ್ಯ.. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು.. ವರಮಹಾಲಕ್ಷ್ಮಿ ಹಬ್ಬದ ದಿನಾಂಕ, ಶುಭ ಸಮಯ ಮತ್ತು ಮಹತ್ವವನ್ನು ತಿಳಿಯಿರಿ

* ದಾನ: 
ಪೂಜೆಯ ಬಳಿಕ ನಿಮ್ಮ ಕೈಲಾದಷ್ಟು ಮಟ್ಟಿಗೆ ಅಗತ್ಯವಿರುವವರಿಗೆ ದಾನ ಮಾಡುವುದನ್ನು ಮರೆಯಬೇಡಿ. ಇದರಿಂದ ಸಂಪತ್ತಿನ ದೇವತೆ ಸಂತಸಗೊಂಡು ನಿಮ್ಮ ಕುಟುಂಬವನ್ನು ಆಶೀರ್ವದಿಸುತ್ತಾಳೆ. ಜೊತೆಗೆ ದಾನ ಮಾಡುವ ಮನೆಯಲ್ಲಿ ಎಂದಿಗೂ ಹಣದ ಅಭಾವ ಕಂಡು ಬರುವುದಿಲ್ಲ ಎನ್ನಲಾಗುತ್ತದೆ.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News