ಜೀವನ ನರಕವಾಗುವುದು ಬೇಡ ಎಂದಾದಲ್ಲಿ, ಇಂತಹ ಸಂಗಾತಿಯಿಂದ ಇಂದೇ ಅಂತರ ಕಾಯ್ದುಕೊಳ್ಳಿ!

Garud Puran Tips: ಗರುಡ ಪುರಾಣದಲ್ಲಿ, ಮಾನವನ ಜೀವನ ಹಾಗೂ ಜೀವನದ ನಂತರ ಆತ್ಮದ ಪಯಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಷ್ಟೇ ಅಲ್ಲ ಇದು ಪತಿ ಪತ್ನಿಯರ ನಡುವಿನ  ಸಂಬಂಧದ ಬಗ್ಗೆ ಹೇಳುತ್ತದೆ. ಗರುಡ ಪುರಾಣದ ಪ್ರಕಾರ ಜೀವನ ಸಂಗಾತಿಯಲ್ಲಿ ಕೆಲವು ತಪ್ಪು ಅಭ್ಯಾಸಗಳಿದ್ದರೆ, ಸಂಗಾತಿಯಿಂದ ಯಾವಾಗಲು ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ. (Spiritua News In Kannada)

Written by - Nitin Tabib | Last Updated : Nov 10, 2023, 11:00 PM IST
  • ಯಾವುದೇ ವ್ಯಕ್ತಿ, ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ. ಇಬ್ಬರೂ ಪರಸ್ಪರರ ಕುಟುಂಬ ಸದಸ್ಯರನ್ನು ಗೌರವಿಸಬೇಕು.
  • ತನ್ನ ಅತ್ತೆಯನ್ನು ಅವಮಾನಿಸುವ ಅಥವಾ ಪ್ರತಿಯೊಂದು ವಿಷಯದಲ್ಲೂ ಅಸಭ್ಯ ಟೀಕೆಗಳನ್ನು ಮಾಡುವ ವ್ಯಕ್ತಿ.
  • ಅಂತಹ ಪುರುಷ ಅಥವಾ ಮಹಿಳೆಯೊಂದಿಗೆ ಜೀವನವನ್ನು ಕಳೆಯಬಾರದು. ಹೀಗಾದರೆ ಜೀವನ ನರಕಾಗುತ್ತದೆ.
ಜೀವನ ನರಕವಾಗುವುದು ಬೇಡ ಎಂದಾದಲ್ಲಿ, ಇಂತಹ ಸಂಗಾತಿಯಿಂದ ಇಂದೇ ಅಂತರ ಕಾಯ್ದುಕೊಳ್ಳಿ! title=

ಬೆಂಗಳೂರು: ಯಾವುದೇ ವ್ಯಕ್ತಿಯ ಜೀವನದಲ್ಲಿ ಓರ್ವ ವ್ಯಕ್ತಿಯ ಸ್ಥಾನ ಪ್ರಮುಖವಾಗಿರುತ್ತದೆ ಎಂದರೆ ಅದು ಅವನ ಬಾಳ ಸಂಗಾತಿ ಎನ್ನಲಾಗಿದೆ. ಸರಿಯಾದ ಬಾಳಸಂಗಾತಿ ವ್ಯಕ್ತಿಯ ಬದುಕು ಹಸನಾಗಿಸುತ್ತಾರೆ. ಅವರಲ್ಲಿ ಯಾವುದಾದರು ನ್ಯೂನ್ಯತೆಗಳಿದ್ದರೆ ಅದರಿಂದ ವ್ಯಕ್ತಿಯ ಜೀವನವೇ ಹಾಳಾಗುತ್ತದೆ. ಗರುಡ ಪುರಾಣದಲ್ಲಿ, ಒಳ್ಳೆಯ ಮತ್ತು ಕೆಟ್ಟ ಬಾಳ ಸಂಗಾತಿಯ ಬಗ್ಗೆ ಹಲವು ವಿಷಯಗಳನ್ನು ಹೇಳಲಾಗಿದೆ. ಇದರ ಪ್ರಕಾರ, ಪತಿ ಮತ್ತು ಪತ್ನಿಯರ ನಡುವಿನ ಸಂಬಂಧವು ಪ್ರೀತಿ ಮತ್ತು ವಿಶ್ವಾಸದ ಮೇಲೆ ನಿಂತಿರುತ್ತದೆ. ಇಬ್ಬರಲ್ಲಿ ಯಾರಾದರೂ ಅದನ್ನು ಅನುಸರಿಸದಿದ್ದರೆ ಅಥವಾ ಅವುಗಳಿಂದ ದೂರವಿರಲು ಪ್ರಯತ್ನಿಸಿದರೆ, ಆಗ ಇಡೀ ಸಂಸಾರದ ಬಂಡಿಯೇ ಹಳಿ ತಪ್ಪಬಹುದು. ಇಂತಹ ಪರಿಸ್ಥಿತಿಯಲ್ಲಿ ಜೀವನ ಸಂಗಾತಿಯಲ್ಲಿ ಇಂತಹ ಕೆಟ್ಟ ಚಟಗಳಿದ್ದರೆ, ಅವರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನಲಾಗಿದೆ. (Spiritua News In Kannada)

ಅವಮಾನ
ಪತಿ ಹಾಗೂ ಪತ್ನಿಯರು ಇಬ್ಬರೂ ಪ್ರರಸ್ಪರರನ್ನು ಗೌರವಿಸಬೇಕು. ಇಬ್ಬರಲ್ಲಿ ಯಾರಾದರೂ ಒಬ್ಬರನ್ನೊಬ್ಬರು ಅವಮಾನಿಸಿದರೆ, ಅಂತಹ ಜೀವನ ಸಂಗಾತಿಯಿಂದ ಬೇರೆಯಾಗುವುದು ಉತ್ತಮ. ಅವಮಾನಿಸುವ ಜೀವನ ಸಂಗಾತಿಯಿಂದ ಬೇರ್ಪಡಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ, ಏಕೆಂದರೆ ಅಂತಹ ಸಂಗಾತಿ ನಿಮ್ಮ ಕೆಟ್ಟ ಮತ್ತು ಒಳ್ಳೆಯ ಸಮಯದಲ್ಲಿ ಕ್ಷಣ ಕ್ಷಣಕ್ಕೂ ನಿಮ್ಮನ್ನು ಅವಮಾನಿಸುತ್ತಲೇ ಇರುತ್ತಾರೆ ಎನ್ನಲಾಗಿದೆ.

ಅತ್ತೆ ಮನೆ 
ಯಾವುದೇ ವ್ಯಕ್ತಿ, ಪುರುಷನಾಗಿರಲಿ ಅಥವಾ ಮಹಿಳೆಯಾಗಿರಲಿ. ಇಬ್ಬರೂ ಪರಸ್ಪರರ ಕುಟುಂಬ ಸದಸ್ಯರನ್ನು ಗೌರವಿಸಬೇಕು. ತನ್ನ ಅತ್ತೆಯನ್ನು ಅವಮಾನಿಸುವ ಅಥವಾ ಪ್ರತಿಯೊಂದು ವಿಷಯದಲ್ಲೂ ಅಸಭ್ಯ ಟೀಕೆಗಳನ್ನು ಮಾಡುವ ವ್ಯಕ್ತಿ. ಅಂತಹ ಪುರುಷ ಅಥವಾ ಮಹಿಳೆಯೊಂದಿಗೆ ಜೀವನವನ್ನು ಕಳೆಯಬಾರದು. ಹೀಗಾದರೆ ಜೀವನ ನರಕಾಗುತ್ತದೆ.

ಇದನ್ನೂ ಓದಿ-Diwali 2023ರ ಮೊದಲೇ ಬುಧನಿಂದ ಮಹಾವಿಪರೀತ ರಾಜಯೋಗ ನಿರ್ಮಾಣ, ಈ ಜನರ ಮೇಲೆ ಲಕ್ಷ್ಮಿ ಕೃಪೆಯಿಂದ ಭಾರಿ ಕನಕವೃಷ್ಟಿ!

ದ್ರೋಹ
ಪತಿ-ಪತ್ನಿಯರ ಸಂಬಂಧ ಬಹಳ ಸೂಕ್ಷ್ಮವಾದುದು. ಅದು ನಂಬಿಕೆ ಎಂಬ ಸೂಕ್ಷ್ಮ ದಾರದಿಂದ ಬಂಧಿತವಾಗಿರುತ್ತದೆ. ಜೀವನದಲ್ಲಿ, ಜೀವನ ಸಂಗಾತಿ ಅಥವಾ ಅವನ/ಆಕೆಯ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ, ಅಂತಹ ಸಂಬಂಧವನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ನಂಬಿಕೆಯಿಲ್ಲದ ಸಂಬಂಧವನ್ನು ಬಲವಂತವಾಗಿ ಎಳೆಯುವುದರಿಂದ ಜೀವನವು ನರಕದಂತೆ ಆಗುತ್ತದೆ. ಗರುಡ ಪುರಾಣದ ಪ್ರಕಾರ, ನಿಮ್ಮ ಸಂಗಾತಿಯು ವಿಶ್ವಾಸದ್ರೋಹಿಯಾಗಿದ್ದರೆ, ಅವರಿಂದ ಬೇರೆಯಾಗುವುದು ಎಂದಿಗೂ ಕೂಡ ಉತ್ತಮ ಎನ್ನಲಾಗಿದೆ.

ಇದನ್ನೂ ಓದಿ-Diwali 2023 ಬಳಿಕ ಧನ-ಐಶ್ವರ್ಯದಾತ ಶುಕ್ರನಿಂದ ಮಾಲವ್ಯ ರಾಜಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಕುಬೇರ ನಿಧಿ ಪಾಪ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News