ದಿನಭವಿಷ್ಯ 14-11-2022: ಕಾರ್ತಿಕ ಸೋಮವಾರದಂದು ದ್ವಾದಶ ರಾಶಿಗಳ ಫಲಾಫಲ

Horoscope  14 November 2022:  ಇಂದಿನ ಪಂಚಾಂಗ- 14 ನವೆಂಬರ್ 2022 ಕಾರ್ತಿಕ ಸೋಮವಾರ, ಪುನರ್ವಸು ನಕ್ಷತ್ರ, ಷಷ್ಠಿ (ಬಹುಳ ಷಷ್ಠಿ),   

Written by - Zee Kannada News Desk | Last Updated : Nov 14, 2022, 06:35 AM IST
  • ಕರ್ಕಾಟಕ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.
  • ತುಲಾ ರಾಶಿಯವರಿಗೆ ಸುಖ-ಸಂತೋಷ, ನೆಮ್ಮದಿಯನ್ನು ಕಾಣುವಂತಹ ದಿನ.
  • ವೃಶ್ಚಿಕ ರಾಶಿಯವರಿಗೆ ಅವಕಾಶಗಳು ಹುಡುಕಿ ಬರಲಿವೆ
ದಿನಭವಿಷ್ಯ 14-11-2022:  ಕಾರ್ತಿಕ ಸೋಮವಾರದಂದು ದ್ವಾದಶ ರಾಶಿಗಳ ಫಲಾಫಲ title=
Todays astrology 14 November 2022

ದಿನಭವಿಷ್ಯ 14-11-2022 :    ಇಂದು ಕಾರ್ತಿಕ ಸೋಮವಾರದಂದು ಈಶ್ವರನ ಆರಾಧನೆ ಬಹಳ ವಿಶೇಷವಾಗಿದ್ದು ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಸಮಯ ತುಂಬಾ ಚೆನ್ನಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಇದು ಒಳ್ಳೆಯ ಸಮಯವಾಗಿದ್ದು, ಎಲ್ಲಾ ರೀತಿಯಲ್ಲಿಯೂ ಅನುಕೂಲವಾಗಲಿದೆ.

ವೃಷಭ ರಾಶಿ: ಈ ರಾಶಿಯವರಿಗೆ ಇಷ್ಟು ದಿನ ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಆರಂಭವಾಗಲಿವೆ. ಆದರೆ, ಕೋರ್ಟು-ಕಚೇರಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ ಅದರ ಬಗ್ಗೆ ಜಾಗೃತಿವಹಿಸಿ.

ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಹೆಚ್ಚಲಿದ್ದು, ಈ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. 

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಹಾಗಾಗಿ, ಅವಿವಾಹಿತರು ಈ ಸಮಯದಲ್ಲಿ ನಿಮ್ಮ ಮದುವೆಯ ಬಗ್ಗೆ ಮಾತುಕತೆ ಮುಂದುವರೆಸಬಹುದು.

ಇದನ್ನೂ ಓದಿ- Budhaditya Yog: ಸೂರ್ಯ-ಬುಧ ಯುತಿ, ನವೆಂಬರ್ 16ರಿಂದ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ದಿನ ಖುಷಿಯ ದಿನ. ಗ್ರಹಾಚಾರಗಳು ಬದಲಾದಂತೆ ಜೀವನವೂ ಬದಲಾಗುತ್ತದೆ. ಇಂದು ನಿಮಗೆ ಸಹೋದರ ವರ್ಗದವರಿಂದ ಸಹಾಯ ದೊರೆಯಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಿ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಿವಿ ನೋವು, ಕಾಲು ನೋವು ಅಥವಾ ತಲೆ ನೋವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಬಗ್ಗೆ ಹುಷಾರಾಗಿರಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಸುಖ-ಸಂತೋಷ, ನೆಮ್ಮದಿಯನ್ನು ಕಾಣುವಂತಹ ದಿನ. ಗ್ರಹಗತಿಗಳು ನಿಮಗೆ ಅನುಕೂಲಕರವಾಗಿವೆ. ಆದರೆ, ಮಾನಸಿಕವಾಗಿ ಶಾಂತವಾಗಿರಲು ಪ್ರಯತ್ನಿಸಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅವಕಾಶಗಳು ಹುಡುಕಿ ಬರಲಿದ್ದು, ಈ ಸಮಯದಲ್ಲಿ ನೀವು ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಸೂಕ್ತ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಕುಟುಂಬ ವರ್ಗದವರಿಂದಲೂ ಲಾಭವಿದೆ.

ಇದನ್ನೂ ಓದಿ- Shani Gochar 2023: ಹೊಸ ವರ್ಷದಲ್ಲಿ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯವರು

ಧನು ರಾಶಿ: ಈ ರಾಶಿಯವರಿಗೆ ವಿದೇಶ ಪ್ರಯಾಣ ಸಾಧ್ಯತೆ ಇದೆ. ದೂರ ದೇಶದ ಸ್ನೇಹಿತರು, ಸಂಬಂಧಿಕರು ನಿಮ್ಮನ್ನು ಭೇಟಿಯಾಗಬಹುದು. ಸಂಬಂಧಿಕರನ್ನು ಗೌರವಿಸಿ.

ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಲಾಭದ ಜೊತೆ=ಜೊತೆಗೆ ಸ್ವಲ್ಪ ಸವಾಲುಗಳನ್ನು ಸಹ ಎದುರಿಸಬೇಕಾದಂತಹ ದಿನ. ಸುಬ್ರಹ್ಮಣ್ಯನ ಆರಾಧನೆಯಿಂದ ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಬಹುದು.

ಕುಂಭ ರಾಶಿ: ಈ ದಿನ ನೀವು ಹಣದ ವಿಷಯದಲ್ಲಿ ಹುಷಾರಾಗಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ದೊರೆಯಲಿದೆ. ಸಮಯ ಮತ್ತು ಕೆಲಸದ ಒತ್ತಡಗಳು ಹೆಚ್ಚಾಗಿರಲಿದೆ. ಆದರೆ, ಸಮಯ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೊಡಿ.

ಮೀನ ರಾಶಿ: ನಿಮ್ಮ ಕೆಟ್ಟ ಸಮಯ ಕಳೆದು ಅನುಕೂಲಕರ ಸಮಯ ಆರಂಭವಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಆಸೆ-ಆಕಾಂಕ್ಷೆಗಳು ಈಡೇರಲಿವೆ. ಈ ದಿನ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಅಚ್ಚರಿವೊಂದು ನಡೆಯುವ ಸಾಧ್ಯತೆಯಿದೆ.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News