ದಿನಭವಿಷ್ಯ 17-08-2022: ಮಿಥುನ ರಾಶಿಯವರಿಗೆ ಇಂದು ವಿಶೇಷ ದಿನ

Horoscope  17 August 2022: ಕೆಲವು ರಾಶಿಯವರಿಗೆ ಇಂದು ಆರ್ಥಿಕ ಮುಂಭಾಗದಲ್ಲಿ ಒಳ್ಳೆಯ ದಿನ. ಕೆಲವು ರಾಶಿಯವರು ಇಂದು ಉದ್ಯೋಗದಲ್ಲಿ ಜಾಗರೂಕರಾಗಿರಬೇಕು. ಈ ದಿನ ಯಾವ ರಾಶಿಯವರಿಗೆ ಹೇಗಿದೆ ಏನು ತಿಳಿಯೋಣ...

Written by - Zee Kannada News Desk | Last Updated : Aug 17, 2022, 06:32 AM IST
  • ಕಟಕ ರಾಶಿಯವರು ಇಂದು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
  • ತುಲಾ ರಾಶಿಯವರಿಗೆ ಇಂದು ಒತ್ತಡದ ದಿನ.
  • ಧನು ರಾಶಿಯವರಿಗೆ ಇಂದು ಫಲದಾಯಕ ದಿನ
ದಿನಭವಿಷ್ಯ 17-08-2022:  ಮಿಥುನ ರಾಶಿಯವರಿಗೆ ಇಂದು ವಿಶೇಷ ದಿನ title=
Todays astrology 17 August 2022

ದಿನಭವಿಷ್ಯ 17-08-2022 :   2022ರ ಆಗಸ್ಟ್ 17 ರ ಬುಧವಾರದಂದು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಫಲಾಫಲ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಯೋಚಿಸಿ ನಂತರ ತೀರ್ಮಾನಿಸಿ. ನೀವು ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ, ಅದು ನಿಮಗೆ ಹಾನಿಕಾರಕವಾಗಿದೆ. ಕೋರ್ಟಿಗೆ ಸಂಬಂಧಿಸಿದ ವಿಚಾರದಲ್ಲಿ ಕೊಂಚ ಸಮಾಧಾನ ಸಿಗುವ ದಿನ.

ವೃಷಭ ರಾಶಿ: ಇಂದು ನೀವು ನಿಮ್ಮ ಮಧುರ ಧ್ವನಿಯಿಂದ ಎಲ್ಲವನ್ನೂ ಗೆಲ್ಲಬಹುದು. ಆದರೆ, ನಿಮ್ಮ ಮಗುವಿನ ಭವಿಷ್ಯದ ಬಗ್ಗೆಯೂ ಯೋಚಿಸುವುದು ಉತ್ತಮ. ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿಸಲು ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಯೋಚಿಸಬೇಕು.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಇಂದು ವಿಶೇಷ ದಿನ. ಕುಟುಂಬ ಸದಸ್ಯರಿಗಾಗಿ ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ಸಮಯವನ್ನು ತೆಗೆಯುವುದು ಒಳಿತು. ತಂದೆಯು ನಿಮ್ಮ ಮಾತುಗಳಿಂದ ಸಂತೋಷಪಡುತ್ತಾರೆ ಮತ್ತು ನಿಮಗಾಗಿ ಉಡುಗೊರೆಯನ್ನು ತರಬಹುದು.

ಕಟಕ ರಾಶಿ: ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಸೌಮ್ಯವಾದ ದಿನ. ನೀವು ಯಾವುದೇ ದೀರ್ಘಕಾಲದ ಕಾಯಿಲೆಯನ್ನು ಹೊಂದಿದ್ದರೆ, ನೀವು ಅದರ ಬಗ್ಗೆ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅದು ದೊಡ್ಡ ರೂಪವನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ- ಮನೆಯಲ್ಲಿ ಮನಿ ಪ್ಲಾಂಟ್ ನೆಡುವ ಮೊದಲು ಈ ವಾಸ್ತು ಸಲಹೆಗಳನ್ನು ತಿಳಿಯಿರಿ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಮುಖ್ಯವಾದ ದಿನ. ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಒಳಿತು. ಇಲ್ಲದಿದ್ದರೆ, ಕೆಲಸದಲ್ಲಿ ತೊಂದರೆ ಆಗಬಹುದು. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಮುದ ನೀಡಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಪ್ರಗತಿಯ ದಿನ. ಆದಾಯ ಹೆಚ್ಚಳದಿಂದ ಸಂತೋಷದಿಂದ ಇರುವಿರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಆದರೆ, ಮಾತನಾಡುವಾಗ ನಿಮ್ಮ ಮಾತಿನ ಮೇಲೆ ನಿಗಾವಹಿಸಿ. ಯಾರೊಂದಿಗೂ ಅವಾಚ್ಯ ಶಬ್ಧಗಳನ್ನು ಬಳಸಬೇಡಿ.

ತುಲಾ ರಾಶಿ: ಇಂದು ನಿಮಗೆ ಒತ್ತಡದ ದಿನವಾಗಿರುತ್ತದೆ, ಆದರೆ ಯಾರೊಂದಿಗೂ ಮಾತನಾಡುವಾಗ ಆ ಒತ್ತಡವು ನಿಮ್ಮನ್ನು ಆಳಲು ಬಿಡಬಾರದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮ್ಮ ಶಿಕ್ಷಕರು ಅಥವಾ ಹಿರಿಯರೊಂದಿಗೆ ಮಾತನಾಡಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಇಂದು ವಿಶೇಷ ದಿನ. ಉದ್ಯೋಗಸ್ಥರು ಇಂದು ತಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವರು. ನಿಮ್ಮ ಸಂಗಾತಿಯೊಂದಿಗೆ ಭವಿಷ್ಯಕ್ಕಾಗಿ ಸಂಪತ್ತನ್ನು ಸಂಗ್ರಹಿಸುವುದನ್ನು ಸಹ ನೀವು ಪರಿಗಣಿಸಬಹುದು.

ಇದನ್ನೂ ಓದಿ- ಶನಿದೇವನನ್ನು ಪೂಜಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಧನು ರಾಶಿ: ಇಂದು ನಿಮಗೆ ಬಹಳ ಫಲದಾಯಕ ದಿನವಾಗಿರುತ್ತದೆ. ಅನುಭವಿ ವ್ಯಕ್ತಿಯ ಮಾರ್ಗದರ್ಶನದಲ್ಲಿ ನೀವು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಹಣ ಗಳಿಕೆಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ, ಆದರೆ ಯಾರೊಬ್ಬರ ಸಣ್ಣ ಮಾತಿನಿಂದ ನೀವು ಅಸಮಾಧಾನಗೊಳ್ಳುತ್ತೀರಿ.

ಮಕರ ರಾಶಿ: ಇಂದು ನೀವು ಆರೋಗ್ಯದ ದೃಷ್ಟಿಯಿಂದ ಜಾಗರೂಕರಾಗಿರಬೇಕು. ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಲ್ಬಣಿಸಬಹುದು.

ಕುಂಭ ರಾಶಿ: ಇಂದು ನೀವು ಯಾವುದೇ ಕಾನೂನು ವಿಷಯದಲ್ಲಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಉದ್ಯೋಗದಲ್ಲಿರುವ ಜನರಿಗೆ ಅಧಿಕಾರಿಗಳು ಕೆಲವು ಹೆಚ್ಚುವರಿ ಜವಾಬ್ದಾರಿಗಳನ್ನು ನಿಯೋಜಿಸುತ್ತಾರೆ.

ಮೀನ ರಾಶಿ: ಇಂದು ನಿಮ್ಮ ಸಂಬಂಧದಲ್ಲಿ ಹೊಸ ತಾಜಾತನವನ್ನು ತರುತ್ತದೆ. ನೀವು ಮಕ್ಕಳೊಂದಿಗೆ ಮೋಜು ಮಾಡುವುದನ್ನು ಕಾಣಬಹುದು. ನೀವು ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ನಿಮ್ಮ ಈ ಅಭ್ಯಾಸದಿಂದ ಕುಟುಂಬ ಸದಸ್ಯರು ಕೋಪಗೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News