ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಕ್ರಮಣದಿಂದಾಗಿ ಅನೇಕ ಬಾರಿ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಕ್ಟೋಬರ್ 1 ರಂದು, ರಾತ್ರಿ 8.45 ಕ್ಕೆ ಬುಧ ಗ್ರಹವು ಕನ್ಯಾರಾಶಿಯನ್ನು ಪ್ರವೇಶಿಸುತ್ತದೆ. ಬುಧ ಸಂಕ್ರಮಣದಿಂದಾಗಿ ಭದ್ರಾ ರಾಜಯೋಗವು ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದಲ್ಲಿ ಭದ್ರರಾಜ ಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧನು ಲಗ್ನದ ಜಾತಕದಲ್ಲಿ ಅಥವಾ ಕನ್ಯಾರಾಶಿ ಅಥವಾ ಮಿಥುನದಲ್ಲಿ ಚಂದ್ರನಿಂದ 1, 4, 7 ಅಥವಾ 10 ನೇ ಮನೆಯಲ್ಲಿ ನೆಲೆಗೊಂಡಾಗ ಭದ್ರ ರಾಜಯೋಗವು ರೂಪುಗೊಳ್ಳುತ್ತದೆ. ಈ ಯೋಗದಲ್ಲಿ, ವ್ಯಕ್ತಿಯು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಮತ್ತು ಹಣವನ್ನು ಗಳಿಸುತ್ತಾನೆ. ಈ ಯೋಗದ ಪರಿಣಾಮ ವ್ಯಕ್ತಿಯ ಮಾತಿನ ಮೇಲೆ ಗೋಚರಿಸುತ್ತದೆ. ವಿವೇಚನಾ ಶಕ್ತಿ ಹೆಚ್ಚುತ್ತದೆ. ಬುಧ ಸಂಕ್ರಮಣದಿಂದ ರೂಪುಗೊಂಡ ಭದ್ರ ರಾಜಯೋಗವು ವಿಶೇಷವಾಗಿ 3 ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಸಮಯದಲ್ಲಿ ಇವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ.
ಇದನ್ನೂ ಓದಿ : ಸೆಪ್ಟೆಂಬರ್’ನಲ್ಲಿ ಈ ರಾಶಿಯವರ ಲೈಫೇ ಚೇಂಜ್: ಪ್ರತೀದಿನವೂ ಹಣವೋ ಹಣ… 1 ತಿಂಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್
ಯಾವ ರಾಶಿಯವರ ಮೇಲೆ ಭದ್ರ ರಾಜಯೋಗದ ಪರಿಣಾಮ :
ಕನ್ಯಾರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಸಂಕ್ರಮಣದಿಂದ ಭದ್ರ ರಾಜಯೋಗ ಉಂಟಾಗುತ್ತದೆ. ಈ ಸಮಯದಲ್ಲಿ, ಕನ್ಯಾ ರಾಶಿಯವರಿಗೆ ಶುಭ ಫಲಗಳು ಸಿಗುತ್ತವೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ವಿಪರೀತ ಲಾಭವಾಗುವುದು. ಈ ರಾಶಿಯವರ ಜೀವನದಲ್ಲಿ ಪ್ರಗತಿ ಹೆಚ್ಚಾಗುವುದು. ಈ ಅವಧಿಯಲ್ಲಿ ಜೀವನ ಸಂಗಾತಿ ಕೂಡಾ ಯಶಸ್ಸು ಕಾಣುವರು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಈ ಯೋಗವು ಪ್ರೇಮ ಜೀವನಕ್ಕೆ ಉತ್ತಮವಾಗಿರುತ್ತದೆ.
ಧನು ರಾಶಿ :
ಈ ಶುಭ ರಾಜಯೋಗದ ಪರಿಣಾಮವು ಧನು ರಾಶಿಯವರ ಜೀವನದ ಮೇಲೂ ಕಾಣಿಸುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗ ದೊರೆಯಬಹುದು. ದೀರ್ಘ ಕಾಲದಿಂದ ನಿರುದ್ಯೋಗಿಗಳಾಗಿದ್ದವರು ಈ ಅವಧಿಯಲ್ಲಿ ಉದ್ಯೋಗ ಪಡೆಯಬಹುದು. ಭದ್ರ ರಾಜಯೋಗವು ನಿಮಗೆ ಮಂಗಳಕರವೆಂದು ಸಾಬೀತಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವುದು. ವೇತನದಲ್ಲಿ ಹೆಚ್ಚಳವಾಗುವುದು. ವ್ಯಾಪಾರಸ್ಥರು ಈ ಯೋಗದಿಂದ ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಆಗುವ ಹಣಕಾಸಿನ ಲಾಭವು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.
ಇದನ್ನೂ ಓದಿ : ಒಂದು ವಾರದಲ್ಲಿ ಈ ಮೂರು ರಾಶಿಯವರ ಭಾಗ್ಯೋದಯ ! ಹತ್ತಿರ ಬರುತ್ತಿದೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ
ಮಕರ ರಾಶಿ :
ಭದ್ರ ರಾಜಯೋಗದಿಂದ ನಿಮ್ಮ ಅದೃಷ್ಟವು ಬೆಳಗಲಿದೆ. ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಇದರಿಂದಾಗಿ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗುವ ಸಾಧ್ಯತೆಯಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಶುಭ ಕಾರ್ಯಗಳಲ್ಲಿ ಮನಸ್ಸು ತೊಡಗಲಿದೆ. ವ್ಯಾಪಾರ ಮಾಡುವ ಜನರು ಪ್ರಯಾಣದಿಂದ ಲಾಭ ಪಡೆಯುತ್ತಾರೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.