ಬಂಗಾರದ ಈ ವಸ್ತುಗಳು ಕಳೆದು ಹೋದರೆ ಅಶುಭ ! ನೀವು ಚಿನ್ನ ಕಳೆದುಕೊಂಡರೆ ಹೀಗೆ ಮಾಡಿ !

Gold Lost meaning : ಶಕುನ ಶಾಸ್ತ್ರದ ಪ್ರಕಾರ ಯಾವ ಆಭರಣ ಕಳೆದುಕೊಂಡರೆ ಏನು ಅರ್ಥ ಎನ್ನುವ ಮಾಹಿತಿ ಇಲ್ಲಿದೆ. 

Written by - Ranjitha R K | Last Updated : Jun 7, 2024, 06:30 PM IST
  • ಚಿನ್ನವನ್ನು ಗುರುವಿನ ಅಂಶವೆಂದು ಪರಿಗಣಿಸಲಾಗುತ್ತದೆ.
  • ಚಿನ್ನವನ್ನು ಲಕ್ಷ್ಮೀ ರೂಪವೆಂದು ಕರೆಯಲಾಗುತ್ತದೆ.
  • ಚಿನ್ನವನ್ನು ಕಳೆದುಕೊಂಡರೆ ಅಶುಭ
ಬಂಗಾರದ ಈ ವಸ್ತುಗಳು ಕಳೆದು ಹೋದರೆ ಅಶುಭ ! ನೀವು ಚಿನ್ನ ಕಳೆದುಕೊಂಡರೆ  ಹೀಗೆ ಮಾಡಿ ! title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಚಿನ್ನವನ್ನು ಗುರುವಿನ ಅಂಶವೆಂದು ಹೇಳಲಾಗುತ್ತದೆ.ಗುರು ಗ್ರಹವು ವೈವಾಹಿಕ ಜೀವನ, ಸಂಪತ್ತು, ಆಸ್ತಿ ಇತ್ಯಾದಿಗಳನ್ನು ಪ್ರತಿನಿಧಿಸುತ್ತದೆ. ಗ್ರಂಥಗಳ ಪ್ರಕಾರ ಚಿನ್ನವನ್ನು ಲಕ್ಷ್ಮೀ ರೂಪವೆಂದು ಕರೆಯಲಾಗುತ್ತದೆ.ಹಾಗಾಗಿ ಒಂದು ವೇಳೆ ಚಿನ್ನ ಕಳೆದು ಹೋದರೆ ಲಕ್ಷ್ಮೀಯ ಜೊತೆಗೆ ಗುರುವಿನ ಪ್ರಭಾವ ಕೂಡಾ ಕಡಿಮೆಯಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ ಯಾವ ಆಭರಣ ಕಳೆದುಕೊಂಡರೆ ಏನು ಅರ್ಥ ಎನ್ನುವ ಮಾಹಿತಿ ಇಲ್ಲಿದೆ. 

ಮೂಗು ಬೊಟ್ಟು : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಿಳೆಯ ಮೂಗಿಗೆ ಧರಿಸಿರುವ ಚಿನ್ನ ಕಳೆದು ಹೋದರೆ, ಅದು ಮಾನಹಾನಿಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

ಚಿನ್ನದ ಉಂಗುರ :
ವ್ಯಕ್ತಿಯ ಚಿನ್ನದ ಉಂಗುರ ಕಳೆದುಹೋದರೆ, ಅದು ಆ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತದೆ. 

ಇದನ್ನೂ ಓದಿ :Surya Gochar: ಬುಧನ ರಾಶಿಚಕ್ರ ಚಿಹ್ನೆಗೆ ಸೂರ್ಯನ ಪ್ರವೇಶ, ಈ ರಾಶಿಯವರನ್ನು ಹಿಡಿಯುವವರೇ ಇಲ್ಲ

ಕಿವಿ ಓಲೆ : 
ಒಬ್ಬ ವ್ಯಕ್ತಿಯು ತನ್ನ ಕಿವಿಯಲ್ಲಿ ಧರಿಸಿರುವ ಚಿನ್ನವು ಕಳೆದುಕೊಂಡರೆ ಅಶುಭ ಸುದ್ದಿಯನ್ನು ಕೇಳಲಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.

ಚಿನ್ನದ ಬಳೆ : 
ಧರ್ಮಗ್ರಂಥಗಳ ಪ್ರಕಾರ, ಚಿನ್ನದ ಬಳೆಯನ್ನು ಕಳೆದುಕೊಳ್ಳುವುದು  ಬಹಳ ಅಶುಭವೆಂದು ಪರಿಗಣಿಸಲಾಗಿದೆ. ಇದು ಗೌರವ ನಷ್ಟದ ಸಂಕೇತ ಎಂದು ಹೇಳಲಾಗುತ್ತದೆ.

ಚಿನ್ನದ ಸರ :
ಜ್ಯೋತಿಷ್ಯದಲ್ಲಿ ಚಿನ್ನದ ಸರವನ್ನು ಕಳೆದುಕೊಳ್ಳುವುದನ್ನು ಕೂಡಾ  ಅಶುಭವೆಂದು ಹೇಳಲಾಗುತ್ತದೆ. ಅದರ ನಷ್ಟವು ಸಂಪತ್ತಿನ ಇಳಿಕೆಯ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Shani Jayanti: ಇಂದಿನಿಂದ ಈ ರಾಶಿಯವರ ಭಾಗ್ಯವೇ ಬದಲು, ಅಷ್ಟೈಶ್ವರ್ಯ ಪ್ರಾಪ್ತಿ

ಚಿನ್ನ ಕಳೆದುಹೋದರೆ, ತಕ್ಷಣ ಕೆಲವು ಕ್ರಮಗಳನ್ನು ಅನುಸರಿಸಬೇಕು. ಹೀಗೆ ಮಾಡಿದರೆ ಅದರ ದುಷ್ಪರಿಣಾಮಗಳನ್ನು  ಕಡಿಮೆ ಮಾಡಬಹುದು. ಚಿನ್ನವು ಗುರು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ.ಚಿನ್ನವನ್ನು ಕಳೆದುಕೊಂಡಿದ್ದರೆ, ಬೃಹಸ್ಪತಿ ಬೀಜ ಮಂತ್ರಗಳನ್ನು ಪಠಿಸಬೇಕು.ಇದರಿಂದ ಬರುವ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಚಿನ್ನದ ಬಣ್ಣ ಹಳದಿ.ಅದಕ್ಕಾಗಿಯೇ ಚಿನ್ನ ಕಳೆದುಕೊಂಡವರು ಹಳದಿ ವಸ್ತುಗಳನ್ನು ದಾನ ಮಾಡಬೇಕು.ಇದರಿಂದ ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.ಹಳದಿ ವಸ್ತು ದಾನಕ್ಕಾಗಿ ಗುರುವಾರವನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. 

ಇದನ್ನೂ ಓದಿ :Kaala Sarpa Dosha: ಕಾಳಸರ್ಪ ದೋಷಕ್ಕೆ ಇಲ್ಲಿವೆ ಸುಲಭ ಪರಿಹಾರಗಳು

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News