ದಿನಭವಿಷ್ಯ 26-09-2024: ಇಂದು ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳಲ್ಲಿ ಯಾರಿಗೆ ಏನು ಫಲ!

Today Horoscope 26th September 2024: ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಪರಿಘ ಯೋಗ, ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Sep 26, 2024, 07:43 AM IST
  • ಭಾದ್ರಪದ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಗುರುವಾರ
  • ಪುನರ್ವಸು ನಕ್ಷತ್ರ, ಪರಿಘ ಯೋಗ
  • ಇಂದಿನ ದ್ವಾದಶ ರಾಶಿಗಳ ಫಲಾಫಲ ಏನು?
ದಿನಭವಿಷ್ಯ 26-09-2024:  ಇಂದು ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳಲ್ಲಿ ಯಾರಿಗೆ ಏನು ಫಲ!  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳ ಫಲಾಫಲ ಏನು? 

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರಿಗೆ ಇಂದು ತುಂಬಾ ಅದ್ಭುತವಾದ ದಿನ. ಆರೋಗ್ಯ ಉತ್ತಮವಾಗಿದ್ದು, ಸಂಬಂಧಿಕರಿಂದ ವಿಶೇಷ ಉಡುಗೊರೆಯನ್ನು ಸ್ವೀಕರಿಸುವಿರಿ.  ವೈವಾಹಿಕ ಜೀವನದಲ್ಲಿ ಪ್ರೀತಿಯ ಸುರಿಮಳೆಯಾಗಲಿದೆ. ನಿಮಗೆ ನೀಡಿರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದರಿಂದ ಪ್ರಯೋಜನವಾಗಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯವರು ಇಂದು ನಾನಾ ಆಯಾಮಗಳಲ್ಲಿ ಕಷ್ಟಗಳನ್ನು ಎದುರಿಸುವಿರಿ. ಯಾವುದೇ ರೀತಿಯ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಿ. ಯಾವುದೇ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಸಂಪೂರ್ಣವಾಗಿ ನಿಮ್ಮ ಶಕ್ತಿಯನ್ನು ವಿನಿಯೋಗಿಸಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ರಾಶಿಯವರಿಗೂ ಕೂಡ ಇಂದು ದಿನ ಅಷ್ಟು ಉತ್ತಮವಾಗಿಲ್ಲ. ಉದ್ಯೋಗ ರಂಗದಲ್ಲಿ ಕೆಲವು ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಸಹೋದ್ಯೋಗಿಗಳು ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸಬಹುದು ಈ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯ ಜನರಿಗೆ ಇಂದು ಅತ್ಯುತ್ತಮವಾದ ದಿನ. ನೀವು ಕೈ ಹಾಕುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆತು ಮನಸ್ಸು ಸಂತೋಷದಿಂದ ತುಂಬಿರಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುವರು. 

ಇದನ್ನೂ ಓದಿ- ಶತಭಿಷಾ ನಕ್ಷತ್ರಕ್ಕೆ ಶನಿ ಪ್ರವೇಶ: ವರ್ಷಾಂತ್ಯದವರೆಗೂ ಈ ರಾಶಿಯವರಿಗೆ ಶನಿ ದಯೆ, ತುಂಬಲಿದೆ ಖಜಾನೆ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಃಶಿಯ ಜನರಿಗೂ ಕೂಡ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ವೈಯಕ್ತಿಕ ಸಂಬಂಧಗಳು ಸುಧಾರಿಸಲಿವೆ. ನಿಮ್ಮ ಸ್ನೇಹದಲ್ಲಿ ಪ್ರೀತಿ ಮತ್ತು ತಿಳುವಳಿಕೆಯ ಸುಂದರತೆಯನ್ನು ನೀವು ಕಂಡು ಕೊಳ್ಳುವಿರಿ. ವ್ಯವಹಾರದಲ್ಲಿಯೂ ನಿರೀಕ್ಷೆಗೂ ಮೀರಿದ ಆದಾಯ ಪಡೆಯುವಿರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರು ಇಂದು ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಬೇದ್ಕು. ಆರೋಗ್ಯವು ಕಾಳಜಿಯ ವಿಷಯವಾಗಿದೆ. ಆದಾಗ್ಯೂ, ನಿಮ್ಮೆಲ್ಲಾ ಕಷ್ಟಗಳಿಗೂ ನಿಮ್ಮ ಸಂಗಾತಿ ಜೊತೆಯಾಗಿ ನಿಲ್ಲುವುದರಿಂದ ಬೆಟ್ಟದಂತ ಕಷ್ಟವೂ ಮಂಜಿನಂತೆ ಕರಗುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರಿಗೆ ದಿನವು ಅಷ್ಟು ಉತ್ತಮವಾಗಿಲ್ಲ. ಹೆಜ್ಜೆ ಹೆಜ್ಜೆಗೂ ಅಡೆತಡೆಗಳು ಎದುರಾಗಬಹುದು. ಆದರೆ, ಯಾವುದಕ್ಕೂ ಕೋಪಗೊಳ್ಳದೇ ತಾಳ್ಮೆಯಿಂದಿರಿ. ನಿಮ್ಮ ದೇಹವನ್ನು ಆರೋಗ್ಯವಾಗಿಡಲು ನೀವು ಕಾಲಕಾಲಕ್ಕೆ ವಿಶ್ರಾಂತಿ ತೆಗೆದುಕೊಳ್ಳಬೇಕು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯವರಿಗೆ ಇಂದು ತುಂಬಾ ಶುಭ ದಿನ. ನಿಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಇದರಿಂದಾಗಿ ನಿಮ್ಮ ಕೆಲಸವನ್ನು ಹೊಸ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ನೋಡಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರದಲ್ಲಿ ಯಶಸ್ಸು ಗಳಿಸುವಿರಿ. ಹಣದ ಸಮಸ್ಯೆಗಳು ನಿವಾರಣೆಯಾಗಲಿವೆ. 

ಇದನ್ನೂ ಓದಿ- Money Plant ನೆಡುವಾಗ ಮಾಡುವ ಈ ತಪ್ಪುಗಳಿಂದ ಆರ್ಥಿಕ ನಷ್ಟ,  ಸಾಲದ ಸುಳಿಯಲ್ಲಿ ಸಿಲುಕುವಿರಿ!  

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯ ಜನರಿಗೆ ಇಂದು ಒಳ್ಳೆಯ ದಿನ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಲು ಯೋಚಿಸುತ್ತಿದ್ದರೆ ಇಂದು ಅದನ್ನು ಕಾರ್ಯಗತಗೊಳಿಸಬಹುದು. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ.  ವ್ಯಾಪಾರದಲ್ಲಿ ಉತ್ತಮ ಹಣವನ್ನು ಗಳಿಸುವ ಅವಕಾಶವನ್ನು ಸಹ ನೀವು ಪಡೆಯುತ್ತೀರಿ.

ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯವರಿಗೆ ಇಂದು ಸವಾಲಿನಿಂದ ಕೂಡಿದ ದಿನ. ವೈಯಕ್ತಿಕ ಜೀವನ ಹಾಗೂ ಉದ್ಯೋಗ ರಂಗ ಎರಡರಲ್ಲೂ ನಾನಾ ರೀತಿಯ ಸವಾಲುಗಳನ್ನು ಎದುರಿಸಬಹುದು. ಇಂದು ನಿಮ್ಮ ತಪ್ಪುಗಳಿಂದ ಕಲಿಯುವ ಅವಕಾಶವನ್ನು ನೀವು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರು ಇಂದು ನೀವು ಬಹಳ ಉತ್ಸಾಹದಿಂದ ಕೆಲಸ ಮಾಡುತ್ತೀರಿ ಮತ್ತು ಇದು ನಿಮಗೆ ಬಹಳಷ್ಟು ಯಶಸ್ಸನ್ನು ನೀಡುತ್ತದೆ. ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಪ್ರೇಮ ಪಕ್ಷಿಗಳಿಗೂ ಇಂದು ತುಂಬಾ ಒಳ್ಳೆಯದು. ಇಂದು ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಡಿನ್ನರ್ ಡೇಟ್‌ಗೆ ಯೋಜಿಸಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯ ಜನರಿಗೆ ಇಂದು ದಿನವು ಅಷ್ಟು ಉತ್ತಮವಾಗಿಲ್ಲ. ಉದ್ಯೋಗ ರಂಗದಲ್ಲಿ ಶತ್ರು ಬಾಧೆ ಹೆಚ್ಚು ಕಾಡಬಹುದು. ಇಂದು ನೀವು ಎಲ್ಲದಕ್ಕೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ, ಬದಲಿಗೆ ಶಾಂತ ಮನಸ್ಥಿತಿಯಿಂದ ಇರಿ. ಕೋಪವು ನಿಮ್ಮ ಕೆಲಸವನ್ನು ಹಾಳುಮಾಡಬಹುದು. ಹಾಗಾಗಿ, ಕೋಪದ ಕೈಗೆ ಬುದ್ದಿ ನೀಡದಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News